ಆಳಂದ: ಚನ್ನಮಲ್ಲಯ್ಯ ಕಠಾರಿಮಠ ನಿಧನ

| Published : Jan 18 2024, 02:04 AM IST

ಸಾರಾಂಶ

ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ಚನ್ನಮಲ್ಲಯ್ಯಾ ಕಠಾರಿಮಠ ಅವರು ತಮ್ಮ ಇಡೀ ಸೇವಾವಧಿ ಸೇರಿ ನಿವೃತ್ತಿ ಬಳಿಕವೂ ಭಾರತ ಸೇವಾದಳ ಮೂಲಕ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಯೋಗ ವಾಯಾಮದ ಕುರಿತು ಬೋಧಿಸಿ ಜಾಗೃತಿ ಮೂಡಿಸಿದ್ದರು. ಅವರ ಅಗಲಿಕೆಯಿಂದ ಭಾರತ ಸೇವಾದಳ ಹಾಗೂ ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದು ಭಾರತ ಸೇವಾಳ ಶೋಕವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಆಳಂದ

ಪಟ್ಟಣ ನಿವಾಸಿಯಾಗಿದ್ದ ಭಾರತ ಸೇವಾದಳ ರಾಜ್ಯ ಸಂಪನ್ಮೂಲ ಹಿರಿಯ ವ್ಯಕ್ತಿ ಹಾಗೂ ನಿವೃತ್ತ ಶಿಕ್ಷಕ ಚನ್ನಮಲ್ಲಯ್ಯ ಕಠಾರಿಮಠ (70) ಅವರು ಬುಧವಾರ ಬೆಳಗ್ಗೆ 4ರ ಸಮಾರಿಗೆ ಕಲಬುರಗಿಯ ತಮ್ಮ ನಿವಾಸದಲ್ಲಿ ಆಕಸ್ಮಿಕವಾಗಿ ನಿಧನರಾಗಿದ್ದಾರೆ.

ಮ.3ಕ್ಕೆ ಕಲಬುರಗಿಯ ಗಂಜ್ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿತು. ಮೃತರು ಪತ್ನಿ ಸೇರಿ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ಚನ್ನಮಲ್ಲಯ್ಯಾ ಕಠಾರಿಮಠ ಅವರು ತಮ್ಮ ಇಡೀ ಸೇವಾವಧಿ ಸೇರಿ ನಿವೃತ್ತಿ ಬಳಿಕವೂ ಭಾರತ ಸೇವಾದಳ ಮೂಲಕ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಯೋಗ ವಾಯಾಮದ ಕುರಿತು ಬೋಧಿಸಿ ಜಾಗೃತಿ ಮೂಡಿಸಿದ್ದರು. ಅವರ ಅಗಲಿಕೆಯಿಂದ ಭಾರತ ಸೇವಾದಳ ಹಾಗೂ ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದು ಭಾರತ ಸೇವಾಳ ಶೋಕವ್ಯಕ್ತಪಡಿಸಿದೆ.

ಅಂತಿಮ ಸಂಸ್ಕಾರದಲ್ಲಿ ಸೇವಾದಳ ನಿವೃತ್ತ ದಳಪತಿ ಬೆಂಗಳೂರಿನ ಎಚ್.ಎಸ್. ಕಾಶಿನಗುಂಟೆ, ಭಾರತ ಸೇವಾದಳ ಜಿಲ್ಲಾಧ್ಯಕ್ಷ, ಎಂಎಲ್‍ಸಿ ಶಶೀಲ ನಮೋಶಿ, ಕಲಬುರಗಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಕ್ರಮಪ್ಪಗೌಡ ಬಿರಾದಾರ, ಯೋಜನಾ ನಿರ್ದೇಶಕ ಚನ್ನಬಸಪ್ಪ ಮದೋಳ, ಗು.ವಿವಿ ದೈಹಿಕ ಶಿಕ್ಷಣ ನಿವೃತ್ತ ನಿರ್ದೇಶಕ ಎಂ.ಎಸ್. ಪಾಸೋಡಿ ಸೇರಿದಂತೆ ಬಂಧು ಬಾಂಧವರು, ಸೇವಾದಳ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ಪಾಲ್ಗೊಂಡು ಅಂತಿಮ ದರ್ಶನ ಕೈಗೊಂಡರು.

ಸೇವಾದಳ ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ಶಿವಲಿಂಗಪ್ಪ ಗೌಳಿ ನೇತೃತ್ವದಲ್ಲಿ ತಾಲೂಕು ಅಧಿನಾಯಕರಾದ ಶರಣಬಸಪ್ಪ ವಡಗಾಂವ, ಜಯಪ್ರಕಾಶ ಕಟ್ಟಿಮನಿ, ಗುರುಲಿಂಗಯ್ಯಾ ಸ್ವಾಮಿ, ಲಕ್ಷ್ಮೀಕಾಂತ ರ್ಯಾಕಾ, ಶಂಭುಲಿಂಗ ಜಗದಿ, ಲಕ್ಷ್ಮೀಪುತ್ರ ಪೂಜಾರಿ, ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ, ಅಮರೇಶ ಕೋರಿ, ಶಿವಯ್ಯಾ ಸ್ವಾಮಿ, ಬೀದರ್ ಜಿಲ್ಲಾ ಸಂಘಕಟ ಸಿದ್ಧಣ್ಣಾ ಅವರು ಒಳಗೊಂಡಂತೆ ಶಸ್ತ್ರ ಸಲಾಮಿ ಸೇರಿ ಸೇವಾದಳ ಗೌರವ ಶ್ರೀರಕ್ಷೆ ನೆರವೇರಿಸಿದರು. ಸಂಗೀತ ಕಲಾವಿದರು ದೇಶ ಭಕ್ತಿ ಗೀತೆಗಳು ನುಡಿಸಿದರು.