ಅಲ್ಕಜಾರ್ ಹೊಸ ಮಾದರಿ ಕಾರು ಬಿಡುಗಡೆ

| Published : Sep 12 2024, 01:50 AM IST

ಸಾರಾಂಶ

ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಅಲ್ಕಜಾರ್‌ನ ಹೊಸ ಮಾದರಿಯ ಕಾರನ್ನು ನಗರದ ಕೆ.ಜೆ. ಹುಂಡೈ ಶೋ ರೂಂ ನಲ್ಲಿ ಕೆ.ಜೆ.ಹುಂಡೈ ಸಂಸ್ಥೆಯ ಅಧ್ಯಕ್ಷ ಕೆ.ಜಾವೀದ್ ಸಾಬ್ ಬುಧವಾರ ದಾವಣಗೆರೆ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

- ಕೆ.ಜೆ. ಹುಂಡೈ ಶೋ ರೂಂನಲ್ಲಿ ಸಂಸ್ಥೆ ಅಧ್ಯಕ್ಷ ಕೆ.ಜಾವೀದ್ ಸಾಬ್ ಚಾಲನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಅಲ್ಕಜಾರ್‌ನ ಹೊಸ ಮಾದರಿಯ ಕಾರನ್ನು ನಗರದ ಕೆ.ಜೆ. ಹುಂಡೈ ಶೋ ರೂಂ ನಲ್ಲಿ ಕೆ.ಜೆ.ಹುಂಡೈ ಸಂಸ್ಥೆಯ ಅಧ್ಯಕ್ಷ ಕೆ.ಜಾವೀದ್ ಸಾಬ್ ಬುಧವಾರ ಮಾರುಕಟ್ಟೆಗೆ ಪರಿಚಯಿಸಿದರು.

ಬಿಡುಗಡೆ ಸಮಾರಂಭದಲ್ಲಿ ಕೆ.ಜೆ.ಹುಂಡೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಜೆ.ಅಫಕ್ ರಾಜ್ವಿ ಮಾತನಾಡಿ, ಹುಂಡೈ ಬ್ರಾಂಡ್‌ನ ಯಶಸ್ಸು ಮತ್ತು ಪರಂಪರೆಯ ಮೇಲೆ ಹೊಸ ವಾಹನವನ್ನು ಉತ್ಪಾದಿಸಲಾಗಿದೆ. 1.5 ಲೀ. ಸಾಮರ್ಥ್ಯದ ಟರ್ಬೊ ಜಿಡಿಐ ಪೆಟ್ರೋಲ್ ವಾಹನದ ಆರಂಭಿಕ ಬೆಲೆ ₹14.99 ಲಕ್ಷ ಇದೆ. 1.5 ಲೀ. ಸಾಮರ್ಥ್ಯದ ಯು2 ಸಿಆರ್‌ಡಿಐ ಡೀಸೆಲ್ ವಾಹನದ ಆರಂಭಿಕ ಬೆಲೆ ₹15.99 ಲಕ್ಷ ಇದೆ ಎಂದು ತಿಳಿಸಿದರು.

ಆರು ಹಾಗೂ ಏಳು ಆಸನಗಳ ಸಾಮರ್ಥ್ಯದಲ್ಲಿ ಈ ವಾಹನ ಲಭ್ಯವಿರಲಿದೆ. ಕ್ಯಾಬಿನ್ ಹೈಟೆಕ್ ಮತ್ತು ಆರಾಮದಾಯಕ ಅನುಭವ ನೀಡಲಿದೆ. ಈ ಕಾರನ್ನು ಚಾಲನೆ ಮಾಡುವುದು ಹಾಗೂ ಇದರಲ್ಲಿ ಪ್ರಯಾಣ ಮಾಡುವುದು ವಿಶಿಷ್ಟ ಅನುಭವ, ಭವ್ಯ ವಿಶೇಷಗಳಿಂದ ಎಲ್ಲರನ್ನೂ ಸೆಳೆಯುತ್ತದೆ.

ಈ ವಾಹನದಲ್ಲಿ 8 ಸ್ಪೀಕರ್ ವ್ಯವಸ್ಥೆ, ಮಳೆಯ ಸೆನ್ಸಿಂಗ್ ವೈಫರ್‌ಗಳು, ಪಾರ್ಕಿಂಗ್ ಸೆನ್ಸಾರ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಆರು ಏರ್ ಬ್ಯಾಗ್‌ಗಳು, 4 ಡಿಸ್ಕ್ ಬ್ರೇಕ್‌ಗಳು, 40 ಪ್ರಮಾಣಿತ ಮತ್ತು 70ಕ್ಕೂ ಹೆಚ್ಚು ಸುರಕ್ಷತಾ ವೈಷಿಷ್ಟ್ಯತೆ ಇರಲಿವೆ. 9 ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದ್ದು, 8 ಮೊನೊ-ಟೋನ್ ಆಯ್ಕೆ ಹೊಂದಿರಲಿದೆ. ಎಕ್ಸಿಕುಟಿವ್, ಪ್ರೆಸ್ಟೀಜ್, ಪ್ಲಾಟಿನಮ್ ಮತ್ತು ಸಿಗ್ನೇಚರ್ ವೇರಿಯೆಂಟ್‌ಗಳಲ್ಲಿ ಇಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಸಮಾರಂಭದಲ್ಲಿ ಕೆ.ಜೆ.ಹುಂಡೈ ಸಂಸ್ಥೆ ನಿರ್ದೇಶಕ ಕೆ.ಜೆ.ಅಬ್ರಾಹರ್, ಹುಂಡೈ ಕಂಪನಿಯ ಎ.ಪಿ.ಎಸ್.ಎಂ. ಅರುಣ್, ಹುಂಡೈ ಇಂಡಿಯಾ ಇನ್ಸೂರೆನ್ಸ್‌ ಕಂಪನಿಯ ಅಮೀತ್, ಕಾರ್ತಿಕ್, ಸೆಲ್ಸ್ ಮ್ಯಾನೇಜರ್ ಹಂಜಲ್, ಸಿಬ್ಬಂದಿ, ಗ್ರಾಹಕರು ಉಪಸ್ಥಿತರಿದ್ದರು.

- - - -11ಕೆಡಿವಿಜಿ41ಃ:

ದಾವಣಗೆರೆಯಲ್ಲಿ ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಅಲ್ಕಜಾರ್‌ನ ಹೊಸ ಮಾದರಿ ಕಾರನ್ನು ಕೆ.ಜಾವೀದ್ ಸಾಬ್ ಮಾರುಕಟ್ಟೆಗೆ ಪರಿಚಯಿಸಿದರು.