ಕುಡಿತ ಆತ್ಮಸ್ಥೈರ್ಯ ಕುಗ್ಗಿಸುವ ಸಾಮಾಜಿಕ ಜಾಢ್ಯ : ಜೆ.ಚಂದ್ರಶೇಖರ

| Published : Jul 28 2024, 02:04 AM IST

ಕುಡಿತ ಆತ್ಮಸ್ಥೈರ್ಯ ಕುಗ್ಗಿಸುವ ಸಾಮಾಜಿಕ ಜಾಢ್ಯ : ಜೆ.ಚಂದ್ರಶೇಖರ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಥೆಯಿಂದ ಈವರೆಗೂ ನಡೆದ ೧೮೦೦ಕ್ಕೂ ಹೆಚ್ಚು ಶಿಬಿರಗಳಿಂದ ಲಕ್ಷಾಂತರ ಜನರು ಪರಿವರ್ತನೆಯಾಗಿ ಮದ್ಯಪಾನ ತ್ಯಜಿಸಿದ್ದಾರೆ.

ಹಗರಿಬೊಮ್ಮನಹಳ್ಳಿ: ಕುಡಿತದ ದುಶ್ಚಟ ಹೋಗಲಾಡಿಸಲು ಹಾಗೂ ಸನ್ನಡತೆ ಮತ್ತು ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರಗಳ ಮೂಲಕ ಸಮಾಜಮುಖಿಯಾಗಿದೆ ಎಂದು ಸಂಸ್ಥೆಯ ಕೊಪ್ಪಳದ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ ತಿಳಿಸಿದರು.

ಪಟ್ಟಣದ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಮದ್ಯವರ್ಜನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸ್ಥೆಯಿಂದ ಈವರೆಗೂ ನಡೆದ ೧೮೦೦ಕ್ಕೂ ಹೆಚ್ಚು ಶಿಬಿರಗಳಿಂದ ಲಕ್ಷಾಂತರ ಜನರು ಪರಿವರ್ತನೆಯಾಗಿ ಮದ್ಯಪಾನ ತ್ಯಜಿಸಿದ್ದಾರೆ. ಮದ್ಯಪಾನದಿಂದ ಕೌಟುಂಬಿಕ ಕಲಹಗಳು ಹೆಚ್ಚುತ್ತವೆ ಎಂಬುದನ್ನು ಎಲ್ಲರೂ ಅರಿಯುವ ಅಗತ್ಯವಿದೆ. ಆಗಾಗ ಕುಡಿಯುತ್ತೇವೆ ಎಂದು ಮೊದಲಿಗೆ ಆರಂಭಿಸಿದವರು, ಅದನ್ನು ಮುಂದೆ ನಿರಂತರ ಅಭ್ಯಾಸ ಮಾಡಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಷಾದನೀಯ. ಕುಡಿತ ಆತ್ಮಸ್ಥೆöÊರ್ಯವನ್ನು ಕುಗ್ಗಿಸುವ ಸಾಮಾಜಿಕ ಜಾಢ್ಯವಾಗಿದೆ. ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಮಹಿಳಾ ಸಬಲೀಕರಣ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದೆ ಎಂದರು.

ಯೋಜನೆಯ ತಾಲೂಕು ನಿರ್ದೇಶಕಿ ಟಿ.ಆರ್.ಮಂಜುಳಾ, ಪಿಎಸ್‌ಐ ಬಸವರಾಜ ಅಡವಿಬಾವಿ, ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.

ಜನಜಾಗ್ರತೆ ವೇದಿಕೆಯ ರಾಜ್ಯಾಧ್ಯಕ್ಷ ಕೆ.ರಾಜಣ್ಣ, ಜಿಲ್ಲಾಧ್ಯಕ್ಷ ಬದಾಮಿ ನಟರಾಜ, ತಾ.ಪಂ.ಮಾಜಿ ಸದಸ್ಯ ದೇವೇಂದ್ರಪ್ಪ, ಪುರಸಭೆ ಸದಸ್ಯ ಪವಾಡಿ ಹನುಮಂತಪ್ಪ, ಮಾಜಿ ಸದಸ್ಯ ಡಿಶ್ ಮಂಜುನಾಥ, ಶಿಬಿರಾಧ್ಯಕ್ಷ ದಶಮಾಪುರ ಓಬಳೇಶ, ಮುಖಂಡ ಕಿನ್ನಾಳ್ ಸುಭಾಷ್, ಹೊನ್ನೂರಪ್ಪ ಇತರರಿದದರು. ಸಂಸ್ಥೆಯ ಕೇಶವಗೌಡ, ಜಿ.ಪ್ರಭುದೇವ ನಿರ್ವಹಿಸಿದರು.

ಶಿಬಿರಾರ್ಥಿಗಳು ವಿವಿಧ ಚಟುವಟಿಕೆಗಳ ನಂತರ ಕುಡಿತದಿಂದಾಗಿ ತಮ್ಮ ಮೇಲಾದ ದುಷ್ಟರಿಣಾಮಗಳ ಅನುಭವ ಹಂಚಿಕೊಂಡು, ಯೋಜನೆಯ ಶಿಬಿರದಿಂದಾಗಿ ಮನಪರಿವರ್ತನೆಗೊಂಡಿದೆ ಎಂದು ಬಾವುಕರಾದರು.

ಇದಕ್ಕೂ ಮುನ್ನ ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹರದೇವಸ್ಥಾನದಲ್ಲಿ ಆರಾಧನೆ ಬಳಿಕ ದಂಪತಿಗಳು ಸಹಭೋಜನ ನಡೆಸಿದರು.