ಸಾರಾಂಶ
ಕಾರವಾರ: ಕಾಂಗ್ರೆಸ್‌ನ ಎಲ್ಲ 136 ಶಾಸಕರು, 33 ಸಚಿವರು, ಪಕ್ಷದ ಹೈಕಮಾಂಡ್ ಎಲ್ಲರೂ ಜನಪರ ಆಡಳಿತ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ದಾಂಡೇಲಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಅತ್ಯಂತ ಸುಭದ್ರವಾಗಿದೆ. 5 ವರ್ಷಗಳ ಕಾಲ ಆಡಳಿತ ನಡೆಸುತ್ತೇವೆ. ಮುಂದಿನ ಐದು ವರ್ಷಕ್ಕೂ ನಮ್ಮದೆ ಸರ್ಕಾರ ಇರಲಿದೆ ಎಂದರು.ಮೈಸೂರಿನಲ್ಲಿ ದಲಿತ ನಾಯಕರ ಭೇಟಿ ಕುರಿತು ಪ್ರಶ್ನಿಸಿದಾಗ, ಕಾಂಗ್ರೆಸ್ ಪಕ್ಷದ ದಲಿತ ನಾಯಕರು ಪಕ್ಷದ ಮುಖಂಡರಾದ ವೇಣುಗೋಪಾಲ, ಸುರ್ಜೇವಾಲಾ ಅವರನ್ನೂ ಭೇಟಿಯಾಗುತ್ತೇವೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುತ್ತೇವೆ. ಅವರು ನಮ್ಮ ನೇತಾರರರು. ಮುಖಂಡರು. ಹಾಗಾಗಿ ಅವರನ್ನು ಭೇಟಿಯಾಗುತ್ತೇವೆ. ಏಕೆ ನಾವು ಭೇಟಿ ಆಗಬಾರದೇ ಎಂದು ಪ್ರಶ್ನಿಸಿದರು.
ದಲಿತ ಮುಖಮಂತ್ರಿ ವಾದದಲ್ಲಿ ಯಾವುದೇ ಹುರುಳಿಲ್ಲ. ಯಾವುದೇ ಊಹಾತ್ಮಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.ಅರಣ್ಯ ಭಾಗದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒತ್ತುವರಿ ಮಾಡಿ ಪಟ್ಟಾ ಸಿಗದ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಸೂಚನೆ ನೀಡಿದ್ದೇನೆ. ಆದರೆ, ಹತ್ತಾರು ಎಕರೆ ಪ್ರದೇಶ ಒತ್ತುವರಿ ಮಾಡಿದ ಹೋಂ ಸ್ಟೇ, ರೆಸಾರ್ಟ್‌ಗಳನ್ನು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. 2- 3 ಎಕರೆ ಒತ್ತುವರಿ ಮಾಡಿ ಕೃಷಿ, ಸಾಗುವಳಿ ಮಾಡುವ ರೈತರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಆದೇಶ ನೀಡಲಾಗಿದೆ ಎಂದರು.
ಆರ್‌ಎಫ್‌ಒಗಳಿಗೆ ಕಳೆದ 3 ವರ್ಷಗಳಿಂದ ಪ್ರಮೋಷನ್ ನೀಡುವುದು ಬಾಕಿ ಇತ್ತು. ನಿಯಮದಂತೆ ಪ್ರಮೋಷನ್ ನೀಡಲಾಗಿದೆ. ಯಾವುದೇ ರೀತಿಯಲ್ಲೂ ನಿಯಮ ಬಾಹಿರವಾಗಿ ನಡೆದಿಲ್ಲ ಎಂದು ಸಚಿವರು ತಿಳಿಸಿದರು.ಮರಳಿನ ಸಮಸ್ಯೆ ಶೀಘ್ರ ಬಗೆಹರಿಸಿ
: ಸುನೀಲ ನಾಯ್ಕ ಆಗ್ರಹಭಟ್ಕಳ: ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಬಿಜೆಪಿಯವರೇ ಕಾರಣ ಎಂದು ಗೂಬೆ ಕೂರಿಸುತ್ತಿರುವ ಸಚಿವ ಮಂಕಾಳ ವೈದ್ಯ ಮತ್ತು ಹೊನ್ನಾವರ, ಭಟ್ಕಳ ಕಾಂಗ್ರೆಸ್ ಅಧ್ಯಕ್ಷರು ಶೀಘ್ರದಲ್ಲಿ ಮರಳು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆಗ್ರಹಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮದೇ ಸರ್ಕಾರ,ಅಧಿಕಾರದಲ್ಲಿದ್ದವರೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಲೆದೋರಿರುವ ಮರಳು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಜನರ ಮುಂದೆ ಅಳಲು ತೋಡಿಕೊಳ್ಳುವುದು ಸರಿಯಲ್ಲ. ನಾನು ಶಾಸಕನಾಗಿದ್ದ ಸಂದರ್ಭದಲ್ಲೂ ಮರಳಿನ ಬಗ್ಗೆ ಹಸಿರು ಪೀಠದಲ್ಲಿ ದೂರು ದಾಖಲಿಸಲಾಗಿತ್ತು. ಆಗ ನಾನು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದೆ. ಇದರಿಂದ ಹೆಚ್ಚು ಲಾಭವಾಗಿದ್ದು ಮರಳುಗಾರಿಕೆ ನಡೆಸುವ ಕಾಂಗ್ರೆಸ್ ಪಕ್ಷದವರಿಗೇ. ಅಂದು ಚೀರೆಕಲ್ಲು, ಮರಳಿಗೆ ಯಾವುದೇ ಸಮಸ್ಯೆ ಇಲ್ಲವಾಗಿತ್ತು. ಇದೀಗ ನಿಮ್ಮ ಅಧಿಕಾರದ ಅವಧಿಯಲ್ಲಿ ಚೀರೆ ಕಲ್ಲಿಗೂ ಸಮಸ್ಯೆ, ಮರಳಿಗೂ ಸಮಸ್ಯೆ ಎನ್ನುವಂತಾಗಿದ್ದು, ಮನೆ, ಕಟ್ಟಡ ನಿರ್ಮಿಸುವುದೇ ಕಷ್ಟವಾಗಿದೆ. ನಾನು ಅಧಿಕಾರದಲ್ಲಿದ್ದಾಗ ಯಾರಿಗೂ ತೊಂದರೆ ನೀಡಿರಲಿಲ್ಲ. ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಬಿಜೆಪಿಯವರೇ ಕಾರಣ ಎಂದು ಹೇಳುವ ಸಚಿವರು ಮತ್ತು ಕಾಂಗ್ರೆಸ್ ಅಧ್ಯಕ್ಷರು ಆರೋಪ ಮಾಡುತ್ತಿದ್ದಾರೆ. ಹಸಿರು ಪೀಠಕ್ಕೆ ಹೋಗಲು ಪ್ರೇರೇಪಿಸಿದವರು ಇವರೇ ಆಗಿದ್ದಾರೆ ಎಂದು ಆರೋಪಿಸಿದರು.ಪಶ್ವಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಭಟ್ಕಳ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಪ್ರಮುಖರಾದ ಭಾಸ್ಕರ ದೈಮನೆ, ಮೋಹನ ನಾಯ್ಕ, ಪ್ರಮೋದ ಜೋಷಿ ಮುಂತಾದವರಿದ್ದರು.