ಸರ್ಕಾರಿ ಪದವಿ ಕಾಲೇಜಿಗೆ ಸಕಲ ಸೌಲಭ್ಯ: ಶಾಸಕ ಐಹೊಳೆ

| Published : Sep 16 2024, 01:48 AM IST / Updated: Sep 16 2024, 01:49 AM IST

ಸಾರಾಂಶ

ರಾಯಬಾಗ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎಲ್ಲ ಮೂಲ ಸೌಲಭ್ಯ ಕಲ್ಪಿಸಿ ಉನ್ನತ ದರ್ಜೆಗೆ ಏರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಬಾಗ

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎಲ್ಲ ಮೂಲ ಸೌಲಭ್ಯ ಕಲ್ಪಿಸಿ ಉನ್ನತ ದರ್ಜೆಗೆ ಏರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕರ್ನಾಟಕ ಗೃಹ ಮಂಡಳಿಯಿಂದ ವಿಶೇಷ ಅನುದಾನದಲ್ಲಿ ಮಂಜೂರಾದ ₹75 ಲಕ್ಷ ವೆಚ್ಚದಲ್ಲಿ 3 ಬೋಧನಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುತ್ತಿಗೆದಾರ ಗುಣಮಟ್ಟದಿಂದ ಒಳ್ಳೆಯ ಕಾಮಗಾರಿ ಮಾಡುವಂತೆ ಸೂಚಿಸಿದರು. ಪ್ರಾಚಾರ್ಯ ಡಾ.ಅರುಣ ಕಾಂಬಳೆ, ಅಣ್ಣಾಸಾಹೇಬ ಖೆಮಲಾಪುರೆ, ಸದಾಶಿವ ಘೊರ್ಪಡೆ, ಸದಾನಂದ ಹಳಿಂಗಳಿ, ಸಂಗಣ್ಣ ದತ್ತವಾಡೆ, ದತ್ತಾ ಜಾಧವ, ಸುರೇಶ ಮಾಳಿ, ಜಿಯಾವುಲ್ಲ ಮುಲ್ಲಾ, ಮಹೇಶ ಕರಮಡಿ, ಮಹೇಶ ಕುಲಗುಡೆ, ಭಾರತಿ ಲೋಹಾರ, ಮುರುಘೇಶ ಮಾಳಿ, ರೀತೇಶ ಅವಳೆ, ಪ್ರೇಮ ಸಾನೆ ಸೇರಿ ಅನೇಕರು ಇದ್ದರು.