ಕುಷ್ಟಗಿ: ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ 2026ರ ಅಂಗವಾಗಿ ಶನಿವಾರ ತಾಲೂಕಿನ ದೋಟಿಹಾಳ ಗ್ರಾಮಕ್ಕೆ ದೇವಾಂಗ ಜ್ಯೋತಿ ಆಗಮಿಸಿತು.

ದೋಟಿಹಾಳದ ಬನಶಂಕರಿದೇವಿ ದೇವಸ್ಥಾನಕ್ಕೆ ಆಗಮಿಸಿದ ದೇವಾಂಗ ಜ್ಯೋತಿ ದೇವಾಂಗ ಸಮಾಜದ ಗುರು, ಹಿರಿಯರು,ಮಹಿಳೆಯರು ಹಾಗೂ ಯುವಕರು ಅದ್ಧೂರಿ ಸ್ವಾಗತ ಕೋರಲಾಯಿತು.

ದೇವಾಂಗ ಸಮಾಜದ ಮುಖಂಡ ಶ್ರೀನಿವಾಸ ಕಂಟ್ಲಿ ಮಾತನಾಡಿ, ಹಂಪಿ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘದ ಆಶ್ರಯದಲ್ಲಿ ಮೇ.9 ಮತ್ತು 10 ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ಕೇತ್ರದಲ್ಲಿ ಅಖಿಲ ಭಾರತ ದೇವಾಂಗ (ನೇಕಾರ) ಜಾಗೃತ ಸಮಾವೇಶ 2026 ಹಾಗೂ ದಯಾನಂದ ಸ್ವಾಮೀಜಿ 36ನೇ ವರ್ಷದ ಪಟ್ಟಾಭೀಷೇಕ ಮತ್ತು ತುಲಾಭಾರ ಸಮಾರಂಭ ನಡೆಯಲಿದ್ದು, ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ,ತಮಿಳುನಾಡು, ಆಂಧ್ರಪ್ರದೇಶ,ತೆಲಂಗಾಣ, ಮಧ್ಯಪ್ರದೇಶ, ಒಡಿಸ್ಸಾ,ಛತ್ತಿಸಗಡ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಲ್ಲಿನ ದೇವಾಂಗ ಸಮಾಜದವರನ್ನು ಒಗ್ಗೂಡಿಸಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಈ ಸಮಾವೇಶಕ್ಕೆ ದೇವಾಂಗ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಗುರು ರುದ್ರಮುನಿ ಸ್ವಾಮಿ ದೇವಾಂಗಮಠ, ನಾರಾಯಣಪ್ಪ ಕೊಳ್ಳಿ, ಪಂಪಾಪತಿ ಅರಳಿಕಟ್ಟಿ, ರಾಮನಗೌಡ ಬಿಜ್ಜಲ್, ಬಾಳಪ್ಪ ಅರಳಿಕಟ್ಟಿ, ಶಿವಪ್ಪ ಮಾಳಗಿ, ಲೋಕಪ್ಪ ಅರಳಿಕಟ್ಟಿ, ಶಂಕ್ರಪ್ಪ ಮಾಳಗಿ, ಉಮಾಪತಿ ಮಾಳಗಿ, ಗುಂಡನಗೌಡ ಬಿಜ್ಜಲ, ವೆಂಕಟೇಶ ಕೊಂಕಲ್,ಈಶಯ್ಯ ಹುಬ್ಬಳ್ಳಿ, ಅಶೋಕ ಮೆದಿಕೇರಿ, ಮೌನೇಶ ಬಾದಾ, ಮಂಜುನಾಥ ರಾಯಚೂರ,ಶ್ರೀಕಾಂತ ಕಿರಗಿ, ಲಕ್ಷಣ ಓದಾ, ಗಂಗಾಧರ ಹುಬ್ಬಳ್ಳಿ, ವೆಂಕಟೇಶ ರಾಯಚೂರ, ತಿಪ್ಪಣ್ಣ ಲಾಳಿ, ನಾಮದೇವ ಲಾಳಿ, ರುದ್ರಮುನಿ ಉಳ್ಳಿ, ಹರೀಶ ಚಿಟ್ಟಾ, ಅಮರೇಶ ಕೋಚಿ, ಹನಮಂತಗೌಡ ಬಾದಾ, ಉಮಾದೇವಿ ರಾಯಚೂರ, ವಿದ್ಯಾ ಕೊಪ್ಪರದ, ಗೀತಾ ಬಿಜ್ಜಲ, ಶಶಿಕಲಾ ಅರಳಿಕಟ್ಟಿ ಸೇರಿದಂತೆ ಅನೇಕರು ಇದ್ದರು. ದೇವಾಂಗ ಜ್ಯೋತಿಯನ್ನು ತಾವರಗೇರಾ ಪಟ್ಟಣಕ್ಕೆ ಬೀಳ್ಕೊಟ್ಟರು.