ಸಾರಾಂಶ
ಕುಶಾಲನಗರದಲ್ಲಿ ಅಖಿಲ ಭಾರತ ಪ್ರತಿಭಟನಾ ದಿನಾಚರಣೆ ಅಂಗವಾಗಿ ಸಾಂಕೇತಿಕ ಪ್ರತಿಭಟನೆಯೊಂದಿಗೆ ಬೇಡಿಕೆಗಳ ಬಗ್ಗೆ ತಾಲೂಕು ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಸಿಪಿಐಎಂಎಲ್ ಮಾಸ್ ಲೈನ್ ಜಿಲ್ಲಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಅಖಿಲ ಭಾರತ ಪ್ರತಿಭಟನಾ ದಿನಾಚರಣೆ ಅಂಗವಾಗಿ ಸಾಂಕೇತಿಕ ಪ್ರತಿಭಟನೆಯೊಂದಿಗೆ ಬೇಡಿಕೆಗಳ ಬಗ್ಗೆ ತಾಲೂಕು ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಲಾಯಿತು.ರಾಜ್ಯ ಸಮಿತಿ ಪ್ರಮುಖರಾದ ಡಿಎಸ್ ನಿರ್ವಾಣಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ರಕ್ಷಣೆ ಮಾಡುವುದು ಮತ್ತು ರಾಜ್ಯ ಕೇಂದ್ರದ ಬೆಲೆ ಏರಿಕೆ ತಡೆಗಟ್ಟಿ ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವ ನಿಟ್ಟಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಹಿನ್ನೆಲೆಯಲ್ಲಿ ಸಮಿತಿ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲು ಮನವಿ ಪತ್ರವನ್ನು ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ಹಸ್ತಾಂತರಿಸಲಾಯಿತು.ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ವೈ ಎಂ ಸುರೇಶ್, ಎಂ ಎಂ ಸಿದ್ದಯ್ಯ ದೇವರಾಜು ಅಣ್ಣಪ್ಪ, ಸಾವಿತ್ರಿ, ವನಜಾಕ್ಷಿ, ಮಹೇಶ್, ಅಯ್ಯಪ್ಪ, ಜವರಯ್ಯ ಮತ್ತಿತರರು ಪಾಲ್ಗೊಂಡಿದ್ದರು.
---------------------ತಾಲೂಕು ಭೂ ನ್ಯಾಯಮಂಡಳಿಯ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರದಲ್ಲಿ ತಾಲೂಕು ಭೂ ನ್ಯಾಯಮಂಡಳಿ ಸಮಿತಿ ಸಭೆ ನಡೆಯಿತು.
ಮಡಿಕೇರಿ ಉಪ ವಿಭಾಗಾಧಿಕಾರಿ ಹಾಗೂ ಸಮಿತಿಯ ಅಧ್ಯಕ್ಷರಾದ ವಿನಾಯಕ ನಾರ್ವಡೆ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಬಂಧಿಸಿದ ಭೂ ನ್ಯಾಯ ಮಂಡಳಿ ಕಡತಗಳ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭ ಸಮಿತಿ ಕಾರ್ಯದರ್ಶಿಗಳು ಹಾಗೂ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ, ಸಮಿತಿ ಸದಸ್ಯರಾದ ಎಚ್ ಕೆ ನಟೇಶ್ ಗೌಡ, ಕೆ ಎಸ್ ಮಂಜುನಾಥ್ ಕುಂಜಿಲ, ಚೇತನ್ ಚಂದ್ರಶೇಖರ್, ಗೀತಾ ಬಸಪ್ಪ ಇದ್ದರು.