ಕೂಡಲೇ ವೇತನ ನೀಡುವಂತೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಒತ್ತಾಯ

| Published : Jul 06 2025, 01:48 AM IST

ಕೂಡಲೇ ವೇತನ ನೀಡುವಂತೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಅರಸೀಕೆರೆ ಹೋಬಳಿಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ 150ಕ್ಕೂ ಹೆಚ್ಚು ಕಾರ್ಮಿಕರಿಗೆ 9 ತಿಂಗಳಿನಿಂದ ವೇತನ ನೀಡದಿರುವ ಸಂಬಂಧ ಪಟ್ಟ ಏಜನ್ಸಿಯವರ ನಡೆ ಖಂಡಿಸಿ ಕೂಡಲೇ ವೇತನ ನೀಡುವಂತೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಗುಡಿಹಳ್ಳಿ ಹಾಲೇಶ, ಗುತ್ತಿಗೆ ಕಾರ್ಮಿಕರ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರಿಗೆ ನಿಗದಿತ ಅವಧಿ ಮುಗಿಯುವ ಮೊದಲು ಅಗತ್ಯವಿರುವ ವೇತನ ಪಾವತಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ.

ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ ಬದುಕು ಅನೇಕ ಸವಾಲುಗಳಿಂದ ಕೊಡಿದೆ, ಸರಿಯಾದ ವೇತನ, ಸಾಮಾಜಿಕ ಭದ್ರತೆ ಮತ್ತು ಕೆಲಸದ ಪರಿಸ್ಥಿತಿ ಅನೇಕ ಬಾರಿ ಅವರ ನಿರೀಕ್ಷೆ ಪೂರೈಸುವುದಿಲ್ಲ ಕಾಯಂ ನೌಕರರಿಗೆ ಹೋಲಿಸಿದರೆ ಇವರಿಗೆ ಕಡಿಮೆ ಸೌಲಭ್ಯಗಳು ಮತ್ತು ಕಾಲಕಾಲಕ್ಕೆ ವೇತನ ಪಾವತಿ ಮಾಡದೇ ಇರುವುದರಿಂದ ಕಾರ್ಮಿಕರು ಕುಟುಂಬ ನಡೆಸಲು ತುಂಬ ಕಷ್ಟ ಪಡುತ್ತಿದ್ದಾರೆ.

ಸುರಕ್ಷಿತವಲ್ಲದ ಕೆಲಸದ ಸ್ಥಳಗಳು ದೀರ್ಘಾವದಿ ಕೆಲಸದ ಮತ್ತು ಅನಾರೋಗ್ಯಕರ ಸಮಯದಲ್ಲಿ ಕೆಲಸ ಮಾಡಿ ಸರಿಯಾದ ಸಮಯಕ್ಕೆ ವೇತನ ನೀಡದೆ ಇರುವುದರಿಂದ ಕಾರ್ಮಿಕ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಹಲವಾರು ಬಾರಿ ಮನವಿ ನೀಡಿದರೂ ಸ್ಪಂದಿಸದೆ ಇರುವುದು ಆತಂಕವಾಗಿದೆ, ಕೂಡಲೇ ಸುಮಾರು 9 ತಿಂಗಳು ವೇತನ ಪಾವತಿಸಬೇಕು ಹಾಗೂ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್ ಐ ಮತ್ತು ಪಿಎಫ್ ಸೌಲಭ್ಯ ಒದಗಿಸಿ ಕೊಡಬೇಕು ಹಾಗೂ ಮುಂದಿನ ದಿನಗಳಲ್ಲಿ ವೇತನ ನೀಡದಿದ್ದರೆ ಅನಿರ್ದಿಷ್ಟ ಅವಧಿ ಮತ್ತು ಶಾಂತಿಯುತವಾಗಿ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ವೈದ್ಯಾಧಿಕಾರಿ ವೆಂಕಟೇಶ್ ಮನವಿ ಸ್ವೀಕರಿಸಿ ಮಾತನಾಡಿ, ಕೂಡಲೇ ಒಂದು ತಿಂಗಳ ವೇತನ ಮಾಡುತ್ತೇವೆ ಮುಂದಿನ ಒಂದು ವಾರ ಬಿಟ್ಟು 3 ತಿಂಗಳ ವೇತನ ನೀಡಲಾಗುವುದು ಎಂದು ಭರವಸೆ ನೀಡಿದರು.

ಯರಬಳ್ಳಿ ಅಶೋಕ್, ಮಲ್ಲಿಕಾರ್ಜುನ, ಹನುಮಂತ, ಮಹೇಶ್ ಫಕ್ಕೀರಮ್ಮ,ಕಮಲಮ್ಮ, ಮಂಜುನಾಥ್ ಹಾಜರಿದ್ದರು.