ಸಾಹಿತ್ಯ ಸಮ್ಮೇಳನದ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ: ಭಕ್ತವತ್ಸಲ

| Published : Dec 05 2024, 12:31 AM IST

ಸಾರಾಂಶ

ಸಮ್ಮೇಳನ ರಥ ಹಲಗೂರು ಪಟ್ಟಣ ಪ್ರದೇಶದಲ್ಲಿ ಸಂಚರಿಸಿ ನಂತರ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ ಬ್ಯಾಡರಹಳ್ಳಿಗೆ ಆಗಮಿಸಿದಾಗ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಭವ್ಯಸಾಗತ ನೀಡಿ ರಥವನ್ನು ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಹಲಗೂರು

ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಪ್ರತಿ ಗ್ರಾಮದಿಂದ ಹೆಚ್ಚಿನ ಜನರು ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸುವಂತೆ ಹಲಗೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಭಕ್ತ ವತ್ಸಲ ಮನವಿ ಮಾಡಿದರು.

ಸಮ್ಮೇಳನ ರಥ ಹಲಗೂರು ಪಟ್ಟಣ ಪ್ರದೇಶದಲ್ಲಿ ಸಂಚರಿಸಿ ನಂತರ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ ಬ್ಯಾಡರಹಳ್ಳಿಗೆ ಆಗಮಿಸಿದಾಗ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಭವ್ಯಸಾಗತ ನೀಡಿ ರಥವನ್ನು ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಭಕ್ತವತ್ಸಲ, ಮಂಡ್ಯದಲ್ಲಿ ನಡೆಯುವ ಸಮ್ಮೇಳನಕ್ಕೆ ಹೋಬಳಿ ವ್ಯಾಪ್ತಿಯ ಜನರು, ಕನ್ನಡಾಭಿಮಾನಿಗಳು ಪಾಲ್ಗೊಂಡು ಹಬ್ಬದಂತೆ ಅಭೂತಪೂರ್ವವಾಗಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಈ ವೇಳೆ ವಿವಿಧ ಸಂಘಟನೆ ಸದಸ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಗ್ರಾಪಂ ಸದಸ್ಯರು ಇದ್ದರು.ಕಾಡಾನೆಗಳ ಕಾರ್ಯಾಚರಣೆ: ಸಾರ್ವಜನಿಕರು ಸಹಕರಿಸಿ ಅರಣ್ಯಾಧಿಕಾರಿಗಳ ಮನವಿ

ಕೆ.ಆರ್.ಪೇಟೆ:

ತಾಲೂಕಿನ ಕುರುಬರಹಳ್ಳಿ ಬೆಳತೂರು, ಸಂಗಾಪುರ, ಕಲ್ಲಹಳ್ಳಿ, ಭುವರಹನಾಥಸ್ವಾಮಿ ದೇವಸ್ಥಾನ, ಮಾವಿನಕೆರೆ ಗ್ರಾಮಗಳಲ್ಲಿ ಸುತ್ತಮುತ್ತ 2 ಕಾಡಾನೆಗಳು ಕಾಣಿಸಿಕೊಂಡು ಕಾವೇರಿ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿವೆ.

ಈ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಮಂಡ್ಯ ಅರಣ್ಯ ವಿಭಾಗದ ಕೆ.ಆರ್.ಪೇಟೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ಕೆ.ಆರ್.ನಗರ ವಲಯದ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ, ಮೈಸೂರು ಜಿಲ್ಲೆ ಹುಣಸೂರು ಸಿಬ್ಬಂದಿ ಕಾರ್ಯಾಚರಣೆ ನಿರ್ವಹಿಸುತ್ತಿದ್ದಾರೆ.

ಸಾರ್ವಜನಿಕರು ಕಾಡಾನೆಗಳ ಹತ್ತಿರ ಹೋಗುತ್ತಿರುವುದು, ಕೂಗಾಡುವುದು, ಪಟಾಕಿ ಸಿಡಿಸುವುದು, ಗಾಬರಿಗೊಳಿಸುವುದು, ಕಾಡಾನೆಗಳ ಛಾಯಾಚಿತ್ರ ತೆಗೆಯುವುದು ಮುಂತಾದ ಚಟುವಟಿಕೆಗಳಿಂದ ಕಾಡಾನೆಗಳು ವಿಚಲಿತಗೊಂಡು ದಿಕ್ಕುತಪ್ಪುವ ಸಾಧ್ಯತೆ ಇರುತ್ತದೆ. ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದ್ದು, ಸದರಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವವರೆಗೂ ಸಾರ್ವಜನಿಕರು ಅರಣ್ಯ ಇಲಾಖೆಯವರಿಗೆ ಸಹಕರಿಸಬೇಕೆಂದು ಮಂಡ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.ನಾ‍ಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ: ಗುರುಮೂರ್ತಿ

ಮಂಡ್ಯ:

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿಬ್ಬಾಣದ ಪ್ರಯುಕ್ತ ಮಿಮ್ಸ್ ಸಹಯೋಗದೊಂದಿಗೆ ಡಿ.6 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದೆ. ಶಿಬಿರ ನಂತರ 68 ನೇ ಮಹಾಪರಿನಿಬ್ಬಾಣದ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದರು.

ಶಿಬಿರದಲ್ಲಿ ನುರಿತ ವೈದ್ಯರುಗಳಿಂದ ವೈದ್ಯಶಾಸ್ತ್ರ ವಿಭಾಗ, ಕೀಲು ಮತ್ತು ಮೂಳೆ ನೋವು, ಇಎನ್‌ಟಿ, ಶಸ್ತ್ರ ಚಿಕಿತ್ಸೆ, ಓಬಿಜಿ ಮತ್ತು ಚರ್ಮರೋಗಳ ಸಂಬಂಧ ತಪಾಸಣೆ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅನಂತರಾಜು, ಕಾರ್ಯದರ್ಶಿ ಸತ್ಯಾನಂದಸ್ವಾಮಿ, ಸಹಕಾರ್ಯದರ್ಶಿ ಜಯರಾಮ್, ಖಜಾಂಚಿ ಚನ್ನಕೇಶವ, ಲೆಕ್ಕ ಪರಿಶೋಧಕ ಬಿ.ಅನ್ನದಾನಿ, ನಿರ್ದೇಶಕ ಹೆಚ್.ಜಿ.ಮಾದಯ್ಯ, ವೆಂಕಟಾಚಲಯ್ಯ ಇದ್ದರು.ಡಿ.6 ರಂದು ರಕ್ತದಾನ ಶಿಬಿರ: ನಿರಂಜನ್

ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿಬ್ಬಾಣದ ಅಂಗವಾಗಿ ಡಿ.6 ರಂದು ನಗರದ ಗಾಂದಿಭವನದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನಿರಂಜನ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಮ್ಮ ಬಿಜಯ ಬುದ್ಧ ವಿಹಾರ ಟ್ರಸ್ಟ್‌ನಿಂದ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್‌, ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟ ಚೇತನ್ ಅಹಿಂಸಾ, ಜಿಲ್ಲಾಧಿಕಾರಿ ಡಾ.ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭಾ ಸದಸ್ಯೆ ಇರ್ಷತ್ ಫಾತಿಮಾ, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ದೀಕ್ಷಿತ್, ಕುಮಾರ್, ಶಿವಶಂಕರಮೂರ್ತಿ, ವೆಂಕಟಾಚಲಯ್ಯ ಇದ್ದರು.