ಬೆಲೆ ಏರಿಕೆ ನಡುವೆಯು ಆಯುಧ ಪೂಜೆಗೆ ಸಕಲ ಸಿದ್ಧತೆ

| Published : Oct 12 2024, 12:00 AM IST

ಬೆಲೆ ಏರಿಕೆ ನಡುವೆಯು ಆಯುಧ ಪೂಜೆಗೆ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಹೂವು, ಬಾಳೆಹಣ್ಣು, ಅಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದರೂ, ಶುಕ್ರವಾರದ ಆಯಧಪೂಜೆಗೆ ಜನರು ವಸ್ತುಗಳನ್ನು ಖರೀದಿಸುತ್ತಿದ್ದುದು ಮಾರುಕಟ್ಟೆಯಲ್ಲಿ ಕಂಡುಬಂತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹೂವು, ಬಾಳೆಹಣ್ಣು, ಅಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದರೂ, ಶುಕ್ರವಾರದ ಆಯಧಪೂಜೆಗೆ ಜನರು ವಸ್ತುಗಳನ್ನು ಖರೀದಿಸುತ್ತಿದ್ದುದು ಮಾರುಕಟ್ಟೆಯಲ್ಲಿ ಕಂಡುಬಂತು.ಮಳೆ ಬೆಳೆಯಾಗಿರುವುದರಿಂದ ಆಯುಧಪೂಜೆ, ವಿಜಯದಶಮಿಯನ್ನು ಈ ಬಾರಿ ಜನರು ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದರು. ಬಾಳೆಹಣ್ಣು ಕೇಜಿಗೆ ೬೦ರಿಂದ ೯೦, ಸೇವಂತಿಗೆ ೧೦೦ರಿಂದ ೧೫೦, ಬಿಳಿ ಹೂ ೩೦೦ರಿಂದ ೩೫೦, ಕನಕಾಂಬರ ೪೦೦ರಿಂದ ೪೫೦, ಬೂದುಗುಂಬಳ ೨೦ ರಿಂದ ೫೦, ಬಾಳೆಕಂದು ಜೊತೆ ಕಬ್ಬು ಮಾವಿನ ಸೊಪ್ಪು ಸೇರಿ ೩೦ರು. ಹೂವಿನ ಹಾರ ಕನಿಷ್ಠ ೧೫೦ ರಿಂದ ೧೦೦೦ದ ವರೆಗೆ, ನಿಂಬೆಹಣ್ಣು ೫ ರು.ನಿಂದ ೧೦ರು. ವರೆಗೂ ಇತ್ತು, ಇನ್ನು ಅಲಂಕಾರಿಕ ವಸ್ತುಗಳು, ಬಂಟಿಂಗ್ಸ್‌ಗಳು ಅವುಗಳ ಅಂದಕ್ಕೆ ತಕ್ಕಂತೆ ಬೆಲೆ ಏರಿಕೆಯಾಗಿದ್ದವು. ಶುಕ್ರವಾರದ ಬೆಳಗಿನ ಆಯುಧಪೂಜೆಗೆ ಜನರು ಗುರುವಾರ ಬೆಳಗ್ಗೆಯಿಂದಲೇ ವಸ್ತುಗಳನ್ನು ಖರೀದಿಸಲು ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಹಳೆ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳು, ರಥದ ಬೀದಿಯಲ್ಲಿ ಮುಗಿಬಿದ್ದರು.

ವ್ಯಾಪಾರಸ್ಥರಿಗೆ ಮಧ್ಯಾಹ್ನನದ ನಂತರ ಮಳೆ ಸ್ವಲ್ಪ ಅಡಚಣೆ ಮಾಡಿತು. ಇನ್ನು ಸ್ವೀಟ್‌ಸ್ಟಾಲ್‌ಗಳಲ್ಲಿ ಸಿಹಿ ಪದಾರ್ಥಗಳಾದ ಬೂಂದಿ, ಜಿಲೇಬಿ, ಜಹಾಂಗೀರ್, ಮೈಸೂರು ಪಾಕ್, ಬಾಲುಶ, ಬರ್ಫಿ, ಲಾಡುಗಳ ವ್ಯಾಪಾರದ ಭರಾಟೆಯು ಬಲು ಜೋರಾಗಿತ್ತು.ಶುಕ್ರವಾರ ಸರ್ಕಾರಿ ರಜೆಯಾದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ಗುರುವಾರ ಸಾಯಂಕಾಲವೇ ಆಯುಧ ಪೂಜೆ ನೆರವೇರಿಸಿ, ವಾಹನಗಳಿಗೆ ಪೂಜೆ ನೆರವೇರಿಸಲಾಯಿತು.

ಗ್ಯಾರೇಜ್‌ಗಳಲ್ಲಿ ವಾಹನಗಳ ಸಣ್ಣಪುಟ್ಡ ರಿಪೇರಿ, ವಾಹನಗಳ ಕ್ಲೀನಿಂಗ್, ಸೈಕಲ್ ಶಾಪ್‌ಗಳಲ್ಲಿ ಮಕ್ಕಳು ತಮ್ಮ ಸೈಕಲ್‌ಗಳನ್ನು ರಿಪೇರಿ ಮಾಡಿಸುತ್ತಿದ್ದದು ಕಂಡು ಬಂತು. ಒಂದು ದ್ವಿಚಕ್ರ ವಾಹನ ಪೂಜೆ ಮಾಡಲು ಕನಿಷ್ಠ ೫೦೦ ರು. ಆದರೂ ಬೇಕು ಎಂದು ಗ್ರಾಹಕರೊಬ್ಬರು ಹೇಳುತ್ತಿದ್ದರು.