ಹೆಬ್ರಿ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ: ಶ್ರೀನಿವಾಸ ಭಂಡಾರಿ

| Published : Feb 15 2025, 12:33 AM IST

ಹೆಬ್ರಿ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ: ಶ್ರೀನಿವಾಸ ಭಂಡಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹೆಬ್ರಿ ತಾಲೂಕು ಘಟಕದ ವತಿಯಿಂದ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೫ - ‘ರೂವಾರಿ ಗಂಧಶಾಲಿಯ ಹೊಂಬೆಳಕು’ ಪರಿಕಲ್ಪನೆಯಲ್ಲಿ ಮೂಡಿಬರಲಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹೆಬ್ರಿ ತಾಲೂಕು ಘಟಕದ ವತಿಯಿಂದ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೫ - ‘ರೂವಾರಿ ಗಂಧಶಾಲಿಯ ಹೊಂಬೆಳಕು’ ಪರಿಕಲ್ಪನೆಯಲ್ಲಿ ಮೂಡಿಬರಲಿದೆ ಎಂದು ಹೆಬ್ರಿ ತಾಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಲಕ್ಷ್ಮೀ ಅಭಯ ಕುಮಾರ್‌ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಈ ಬಾರಿಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮೆರವಣಿಗೆಯಲ್ಲಿ ಆಕರ್ಷಕ ತಂಡಗಳು ಸಾಥ್ ನೀಡಲಿವೆ ಎಂದು ತಿಳಿಸಿದರು.ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ ರಾಷ್ಟ್ರ ಧ್ವಜಾರೋಹಣ ಮಾಡುವರು. ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಪರಿಷತ್ತಿನ ಧ್ವಜಾರೋಹಣ ಮಾಡುವರು. ಲಕ್ಷ್ಮೀನರಸಿಂಹ ದೇವಸ್ಥಾನದ ವಠಾರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಸ್ವಾಗತದ ಬಳಿಕ ಕನ್ನಡಮಾತೆ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ ನಡೆಯಲಿದೆ. ಮುಖಂಡ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಮೆರವಣಿಗೆ ಉದ್ಘಾಟಿಸುವರು. ಶಾಸಕ ಸುನಿಲ್‌ ಕುಮಾರ್‌ ಸಮ್ಮೇಳನ ಉದ್ಘಾಟಿಸುವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಸಲ್ಲಿಸುವರು. ಮುಂಬೈ ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸುವರು. ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ್‌ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿ ಸಲ್ಲಿಸುವರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಶಿವಪುರ ಮುರ್ಸಾಲು ಗೋಕುಲದಾಸ ನಾಯಕ್‌ ಪುಸ್ತಕ ಬಿಡುಗಡೆ ಮಾಡುವರು ಎಂದು ತಿಳಿಸಿದರು.

ಸಮಾರೋಪ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಶ್ರೀನಾಥ್‌ ಎಂಪಿ ಸಮಾರೋಪ ಭಾಷಣ ಮಾಡುವರು. ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಅಧ್ಯಕ್ಷತೆ ವಹಿಸುವರು. ಸರ್ವಾಧ್ಯಕ್ಷೆ ಜಯಲಕ್ಷ್ಮೀ ಅಭಯ ಕುಮಾರ್‌ ಪ್ರತಿಸ್ಪಂದನೆ ಮಾಡುವರು. ನೀಲಾವರ ಸುರೇಂದ್ರ ಅಡಿಗ ಜಿಲ್ಲಾಧ್ಯಕ್ಷರ ನುಡಿ ಸಲ್ಲಿಸುವರು. ವಿವಿಧ ಕ್ಷೇತ್ರಗಳ ಸಾಧಕರಾದ ಗಿರೀಜಾ ಹೆಗ್ಡೆ ಶೇಡಿಮನೆ, ಶಂಕರ ಶೆಟ್ಟಿ ಬೇಳಂಜೆ, ಕೃಷ್ಣ ನಾಯ್ಕ್‌ ಬೆಳ್ವೆ, ಕೃಷ್ಣ ಹಾಂಡ ಚಾರ, ಶೀನ ಶೆಟ್ಟಿಗಾರ್‌ ಕೆಲಕಿಲ, ಶಂಭು ಶಿವಪುರ, ಹೆಬ್ರಿ ಗಣೇಶ್‌ ಕುಮಾರ್‌ ಭಾಗವತ, ನಾರಾಯಣ ಭಟ್‌ ತಿಂಗಳೆ, ಶೋಭಾ ಆರ್‌. ಕಲ್ಕೂರ್‌ ಮುದ್ರಾಡಿ ಅವರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು, ಸ್ವಾಗತ ಸಮಿತಿ ಅಧ್ಯಕ್ಷ ಗಣೇಶ ಹಾಂಡ, ಗೌರವಾಧ್ಯಕ್ಷ ಶಂಕರನಾರಾಯಣ ಕೊಡಂಚ, ಗೌರವ ಸಲಹೆಗಾರ ಮೂರ್ಸಾಲು ಮೋಹನದಾಸ ನಾಯಕ್‌, ಸಂಚಾಲಕ ರಮಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ, ವಿವಿಧ ಪ್ರಮುಖರಾದ ಡಾ.ಪ್ರವೀಣ್‌ ಕುಮಾರ್‌ ಎಸ್‌., ನಾಯರಕೋಡು ಸಂತೋಷ ಶೆಟ್ಟಿ, ರಮೇಶ ಕುಮಾರ್‌ ಶಿವಪುರ ಹಾಜರಿದ್ದರು.