ಸಾರಾಂಶ
ಕಡೇ ಕಾರ್ತಿಕ ಹಿನ್ನೆಲೆಯಲ್ಲಿ ದೀಪದಗಿರಿ ಒಡ್ಡಿನಲ್ಲಿ ನಡೆಯುವ ಮಹಾಜ್ಯೋತಿ ಕಾರ್ಯಕ್ರಮ । ಬೆಟ್ಟದಲ್ಲಿ ತೆಪ್ಪೋತ್ಸವ
ಕನ್ನಡಪ್ರಭ ವಾರ್ತೆ ಹನೂರುಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಕಡೇ ಕಾರ್ತಿಕ ಹಿನ್ನೆಲೆಯಲ್ಲಿ ದೀಪದಗಿರಿ ಒಡ್ಡಿನಲ್ಲಿ ನಡೆಯುವ ಮಹಾಜ್ಯೋತಿ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಟ್ಟದಲ್ಲಿ ನಡೆಯುವ ಕಡೆ ಕಾರ್ತಿಕ ಮಾಸದ ನಾಲ್ಕನೆಯ ಸೋಮವಾರದಂದು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ದೀಪದಗಿರಿ ಒಡ್ಡುವಿನಲ್ಲಿ ಮಹಾಜ್ಯೋತಿ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರದ ವತಿಯಿಂದ ಹಸಿರು ಚಪ್ಪರ ತೋರಣಗಳಿಂದ ಸಿಂಗರಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ.ನಾಲ್ಕನೇ ಕಡೆ ಕಾರ್ತಿಕ ಸೋಮವಾರ ವಿಶೇಷ:
ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ನಡೆಯುವ ಕಡೆ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ದೀಪದಗಿರಿ ಒಡ್ಡು ಮಹಾ ಜ್ಯೋತಿ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಮಹಾ ಮಂಗಳಾರತಿಯಾದ ನಂತರ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನಸ್ವಾಮಿ ಸಾನಿಧ್ಯದಲ್ಲಿ ಛತ್ರಿ-ಚಾಮರ, ವಾದ್ಯ ಮೇಳಗಳೊಂದಿಗೆ ಮ.ಬೆಟ್ಟದಿಂದ ಸಮೀಪದ ದೀಪದಗಿರಿ ಒಡ್ಡುವಿನಲ್ಲಿ ಮಹಾಯಾಗ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ನೆರವೇರಲಿವೆ.ಬೆಟ್ಟದ ದೀಪದಗಿರಿ ಒಡ್ಡುವಿನ ಮಹಾಜ್ಯೋತಿ ಸ್ಥಳಕ್ಕೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಭೇಟಿ ನೀಡಿ ಪರಿಶೀಲನೆ ನಡೆಸಿ, ಪೂಜಾ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷಗಳು ಆಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ತೆಪ್ಪೋತ್ಸವಕೆ ಸಕಲ ಸಿದ್ಧತೆ:ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಕಡೆ ಕಾರ್ತಿಕ ಮಾಸ ಪ್ರಯುಕ್ತ ಮಹಾ ಜ್ಯೋತಿಯ ನಂತರ ಮಾದಪ್ಪನ ಬೆಟ್ಟದಲ್ಲಿ ತೆಪ್ಪೋತ್ಸವ ಧಾರ್ಮಿಕವಾಗಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ನಡೆಯಲಿದ್ದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಯು ಹಮ್ಮಿಕೊಳ್ಳಲಾಗಿದೆ
ವಿಶೇಷ ವಿದ್ಯುತ್ ದೀಪ ಅಲಂಕಾರ:ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಕಡೆ ಕಾರ್ತಿಕ ಮಾಸದ ಪ್ರಯುಕ್ತ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತೆಪ್ಪೋತ್ಸವ ನಡೆಯುವ ಸ್ಥಳ ಸೇರಿದಂತೆ ಕ್ಷೇತ್ರದಲ್ಲಿ ವಿಶೇಷ ವಿದ್ಯುತ್ ದೀಪ ಅಲಂಕಾರವನ್ನು ಮಾಡಲಾಗಿದೆ. ಮಹಾ ಜ್ಯೋತಿ ಹಾಗೂ ಸಾಂಪ್ರದಾಯದ ತೆಪ್ಪೋತ್ಸವ ಪೂಜಾ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದೆ.
-----------16ಸಿಎಚ್ಎನ್13ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಮಾಸ ಪ್ರಯುಕ್ತ ಮಹಾ ಜ್ಯೋತಿ ಪೂಜಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯು ಜರುಗಿದೆ.16ಸಿಎಚ್ಎನ್14 ಹನೂರು ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಮಾಸದ ಮಹಾಜ್ಯೋತಿ ಹಾಗೂ ತೆಪ್ಪೋತ್ಸವ ಪೂಜಾ ಕಾರ್ಯಕ್ರಮದ ಹಿನ್ನೆಲೆ ಸೇರಿರುವ ಜನಸ್ತೋಮ.
;Resize=(128,128))
;Resize=(128,128))