ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವಕಾಂಕ್ಷೆಯ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಪಟ್ಟಣದಲ್ಲಿ ಸಕಲ ಸಿದ್ಧತೆ ಜರುಗಿದೆ.ರಾಜ್ಯ ಸಾರಿಗೆ ಬಸ್ ನಿಲ್ದಾಣ ಸಮೀಪದ ಮುಖ್ಯರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆಮಾದೇಶ್ವರ ಬೆಟ್ಟಕ್ಕೆ ತೆರಳಿ ರಾಜ್ಯ ಸಂಪುಟ ಸಭೆ ನಂತರ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಗಳಲ್ಲಿ ಭಾಗವಹಿಸಿ ನಂತರ ಏ.25 ರಂದು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಿದ್ದಾರೆ.
ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್:ಜಿಲ್ಲೆಯ ಹನೂರು ತಾಲೂಕು ಕೇಂದ್ರವಾಗಿ ಕಳೆದ ಎರಡು ವರ್ಷಗಳ ಹಿಂದೆ ಘೋಷಣೆಯಾಗಿದ್ದರೂ ಈ ಹಿನ್ನಲೆಯಲ್ಲಿ ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿರಲಿಲ್ಲ. ಇದರಿಂದಾಗಿ ಪಟ್ಟಣದ ವ್ಯಾಪಾರ ಸ್ಥಳವಾದ ಕೇಂದ್ರ ಸ್ಥಳದಲ್ಲೇ ಇಂದಿರಾ ಕ್ಯಾಂಟೀನ್ ಕಾಮಗಾರಿಗಳು ಸಂಪೂರ್ಣ ಮುಗಿದಿರುತ್ತದೆ. ಪಟ್ಟಣದ ನಾಗರಿಕರಿಗೆ ಇಂದಿನ ಕ್ಯಾಂಟೀನ್ ಉದ್ಘಾಟನೆಗೊಳ್ಳುತ್ತಿರುವುದು ಜನ ಸಾಮಾನ್ಯರಿಗೆ ಅನುಕೂಲದಾಯಕವಾಗಲಿದೆ. ರಾಜ್ಯ ಸರ್ಕಾರ ಬಜೆಟ್‌ನಿಂದ ಮತ್ತು ಭಾಗಶಃ ನಾಗರಿಕ ಸಂಸ್ಥೆಗಳ ಬಜೆಟ್‌ನಿಂದ ಇಂದಿರಾ ಕ್ಯಾಂಟೀನ್ ಗೆ ತಳಮಟ್ಟದ ಸಮುದಾಯಗಳ ಮತ್ತು ಕೂಲಿ ಕಾರ್ಮಿಕರ ಮತ್ತು ಹಿರಿಯ ನಾಗರಿಕರ ಸವಲತ್ತಿಗಾಗಿ ಪ್ರತಿ ತಾಲೂಕು ಕೇಂದ್ರದಲ್ಲಿ ಇಂದಿನ ಕ್ಯಾಂಟೀನ್ ತೆರೆದು ಹಸಿವು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಇದರಿಂದಾಗಿ ಪಟ್ಟಣದಲ್ಲಿ ಕಳೆದ 7 ವರ್ಷಗಳಿಂದಲೂ ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಇಲ್ಲದೆ ಇರುವುದರಿಂದ ಮನಗಂಡ ಶಾಸಕರು ಕೇಂದ್ರ ಸ್ಥಾನದ ಬಸ್ ನಿಲ್ದಾಣದ ಬಳಿಯೇ ನಾಗರಿಕರ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸುವ ಮೂಲಕ ಉದ್ಘಾಟನೆಗೆ ಸಜ್ಜಾಗಿದೆ. ಬಹುತೇಕ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್ ತೆರೆದು ರಿಯಾಯಿತಿ ದರದಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹಸಿವು ಮುಕ್ತಗೊಳಿಸಲು ತೆರೆಯಲಾಗಿದೆ.
ಮಲೆಮಾದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ಮುಗಿಸಿ ಪಟ್ಟಣದ ಪ್ರಜಾಸೌಧ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮುನ್ನ ಇಂದಿರಾ ಕ್ಯಾಂಟೀನ್ ಅನ್ನು ಸಿಎಂ ಲೋಕಾರ್ಪಣೆಗೊಳಿಸಲಿದ್ದಾರೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ 25ರಂದು ಉದ್ಘಾಟನೆ ಮಾಡಿ ಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.ಎಂ.ಆರ್.ಮಂಜುನಾಥ್, ಹನೂರು ಶಾಸಕ