ಸಾರಾಂಶ
ಕನ್ನಡಪ್ರಭ ವಾರ್ತೆ ಅಮೀನಗಡಶಿಕ್ಷಣ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವುದರ ಜೊತೆಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೂ ತಳಹದಿಯಾಗುತ್ತದೆ ಎಂದು ಸೂಳೇಬಾವಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಭಾರಿ ಉಪಪ್ರಾಚಾರ್ಯ ಎಚ್.ಎಂ.ಹಾಲನ್ನವರ ಹೇಳಿದರು.

ಸೂಳೇಬಾವಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಹತ್ತು ಹಲವು ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಯ ಸದುಪಯೋಗ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಕಿವಿಮಾತು ಹೇಳಿದರು.ಅತಿಥಿಯಾಗಿದ್ದ ಎಸ್‌ಡಿಎಂಸಿ ಸದಸ್ಯ ಕಾಶಿಂಸಾಬ ಬೂದಿಹಾಳ ಮಾತನಾಡಿ, ಮಕ್ಕಳು ತರಗತಿಗಳಿಗೆ ಹಾಜರಾಗುವುದರ ಮೂಲಕ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪಾಲಕರೂ ಎಚ್ಚರ ವಹಿಸುವಂತೆ ತಿಳಿಸಿದರು.ಎಸ್‌ಡಿಎಂಸಿ ಸದಸ್ಯರಾದ ಬಸವರಾಜ ಚಂದ್ರಾಯಿ, ಹಿರಿಯ ಶಿಕ್ಷಕಿ ಪಿ.ಎಸ್.ಗಿರಿಯಪ್ಪನವರ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಕ್ಕಳಿಗೆ ಪುಷ್ಪಗುಚ್ಚ ನೀಡಿ, ಸಿಹಿ ನೀಡಿ ಶಾಲೆಗೆ ಸ್ವಾಗತಿಸಲಾಯಿತು. ಶಿಕ್ಷಕ ಮಹಾದೇವ ಬಸರಕೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಲ್.ಎಸ್.ಬಾಲರೆಡ್ಡಿ ಸ್ವಾಗತ, ಅಶೋಕ ಲಮಾಣಿ ವಂದಿಸಿದರು.