ಸಾರಾಂಶ
ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಯ ವಿವರ, ಅಭ್ಯರ್ಥಿಗಳ ವಿವರ, ಚುನಾವಣಾ ವೇಳಾಪಟ್ಟಿ ಸೇರಿ ಹಲವು ಮಾಹಿತಿಗಳನ್ನು ಕುಳಿತಲ್ಲೇ ಮತದಾರರು ಬೆರಳ ತುದಿಯಲ್ಲಿ ಮೊಬೈಲ್ ಅಪ್ಲಿಕೇಷನ್ ಗಳ ಮೂಲಕ ಪಡೆಯಬಹುದಾಗಿದೆ.
ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಮತ್ತು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವ ಜೊತೆಗೆ ಮತದಾರರಿಗೆ ಚುನಾವಣೆಯ ಅಗತ್ಯ ಮಾಹಿತಿಗಳು ಸುಲಭವಾಗಿ ಸಿಗಲೆಂಬ ಉದ್ದೇಶದಿಂದ ಚುನಾವಣಾ ಆಯೋಗ ಚುನಾವಣಾ ಅಪ್ಲಿಕೇಶನ್‌ಗಳನ್ನು ರೂಪಿಸಿದೆ. ಮತದಾರರು ಈ ಆ್ಯಪ್ ನ ನೆರವಿನಿಂದ ಸುಲಭವಾಗಿ ಮತದಾನದಲ್ಲಿ ಭಾಗವಹಿಸಬಹುದು. ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಗಾಲಿಕುರ್ಚಿ ವ್ಯವಸ್ಥೆ, ಮತದಾನದ ಪ್ರಮಾಣ, ಮತಗಟ್ಟೆಯ ಸುತ್ತಮುತ್ತಲಿನ ಆಸ್ಪತ್ರೆ, ಪೊಲೀಸ್ ಠಾಣೆ ವಿವರ ಸೇರಿ ಎಲ್ಲ ಉಪಯುಕ್ತ ಮಾಹಿತಿಗಳು ಈ ಆ್ಯಪ್‌ನಲ್ಲಿ ದೊರೆಯಲಿವೆ. ಚುನಾವಣೆಯ ನಂತರವೂ ಹತ್ತಿರದ ಪೊಲೀಸ್ ಠಾಣೆ ಹಾಗೂ ಆರೋಗ್ಯ ಕೇಂದ್ರಗಳ ಮಾಹಿತಿ ಪಡೆಯಲು ಜನರು ಈ ಆ್ಯಪ್ ಬಳಸಬಹುದು.ಗೂಗಲ್ ಪ್ಲೇಸ್ಟೋರ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಲಭ್ಯವಿದ್ದು, ಮತದಾರರು ತಮ್ಮ ಕ್ಷೇತ್ರ, ಮತದಾನದ ಬೂತ್, ತಲುಪುವ ಬಗ್ಗೆ, ದೂರ ಇತ್ಯಾದಿ ಎಲ್ಲ ರೀತಿಯ ಮಾಹಿತಿ ಪಡೆದುಕೊಳ್ಳುವಂತೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ಚುನಾವಣಾ ಶಾಖೆ ಅಧಿಕಾರಿಗಳು.cVIGIL ಆ್ಯಪ್ :
cVIGIL ಆ್ಯಪ್‌ನ ಸಹಾಯದಿಂದ ಮತದಾರರು ಮತಗಟ್ಟೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಅಕ್ರಮ ನಡೆಯುತ್ತಿದ್ದರೆ ಅದನ್ನು ಸುಲಭದಲ್ಲಿ ದೂರು ನೀಡಬಹುದು. ಅಭ್ಯರ್ಥಿ ಯಾರನ್ನಾದರೂ ಆಮಿಷ ಒಡ್ಡುತ್ತಿದ್ದರೆ ಇದನ್ನು ಸಹ ಬಹಿರಂಗ ಪಡಿಸಬಹುದು. ಫೋಟೋ, ವಿಡಿಯೋ, ಆಡಿಯೋ ಅಪ್‌ಲೋಡ್ ಮಾಡುವ ಮತ್ತು ತಕ್ಷಣ ದೂರು ದಾಖಲಿಸುವ ಫೀಚರ್ಸ್ ಇದರಲ್ಲಿದೆ. ಇದು ದೂರು ಸ್ವೀಕರಿಸಿದ 100 ನಿಮಿಷಗಳಲ್ಲಿ ಪ್ರತಿಕ್ರಿಯೆಯನ್ನು ನೀಡುತ್ತದೆ.(ಫೋಟೋ 19ಕೆಆರ್ ಎಂಎನ್ 3.ಜೆಪಿಜಿ)KYC ಆಪ್ :
ಚುನಾವಣಾ ಆಯೋಗವು ''ನೋ ಯುವರ್ ಕ್ಯಾಂಡಿಡೇಟ್'' (KYC) ಎಂಬ ಹೆಸರಿನ ಈ ಅಪ್ಲಿಕೇಶನ್ ಮೂಲಕ ಮತದಾರರು ಅಭ್ಯರ್ಥಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಅಭ್ಯರ್ಥಿಯು ಚುನಾವಣಾಧಿಕಾರಿಗೆ ನೀಡಿದ ದಾಖಲೆಗಳನ್ನು ಈ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಸಾಮಾನ್ಯ ನಾಗರಿಕರು ತಮ್ಮ ಮೊಬೈಲ್‌ನಲ್ಲಿ ಅವುಗಳನ್ನು ವೀಕ್ಷಿಸಬಹುದು. ಈ ಆ್ಯಪ್ ಮೂಲಕ ಮತದಾರ ತನ್ನ ಅಭ್ಯರ್ಥಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಅಭ್ಯರ್ಥಿಯು ಅಪರಾಧ ಇತಿಹಾಸ, ಆಸ್ತಿ, ಶಿಕ್ಷಣದ ಬಗ್ಗೆ ಮಾಹಿತಿಯನ್ನು ಸಹ ಪಡೆಯಬಹುದು.(ಫೋಟೋ 19ಕೆಆರ್ ಎಂಎನ್ 4.ಜೆಪಿಜಿ)
Saksham-ECI ಅಪ್ಲಿಕೇಶನ್:ವಿಕಲಚೇತನ ಮತದಾರರು ಈಗ ಸುಲಭವಾಗಿ ಮತ ಚಲಾಯಿಸಬಹುದು. ಇದಕ್ಕಾಗಿ, ಈ ಅಪ್ಲಿಕೇಶನ್ ಅವರಿಗೆ ಸಹಾಯ ಮಾಡುತ್ತದೆ. ಇದರ ಮೂಲಕ, ವಿಕಲಾಂಗ ವ್ಯಕ್ತಿಗಳು ನೋಂದಾಯಿಸಿಕೊಳ್ಳಬಹುದು ಮತ್ತು ತಿದ್ದುಪಡಿಗಳನ್ನು ಮಾಡಬಹುದು. ಇದಲ್ಲದೇ ಈ ಆ್ಯಪ್ ಮೂಲಕ ಅಂಗವಿಕಲರು ತಮ್ಮ ಮನೆಯಲ್ಲೇ ಕುಳಿತು ಮತದಾನ ಮಾಡುವ ಸೌಲಭ್ಯವನ್ನು ಹೊಂದಿದ್ದಾರೆ.
(ಫೋಟೋ 19ಕೆಆರ್ ಎಂಎನ್ 5.ಜೆಪಿಜಿ)SUVIDHA CANDIDATE ಆಪ್ :
ಚುನಾವಣಾ ಆಯೋಗವು ''ಸುವಿಧಾ ಅಭ್ಯರ್ಥಿ ಆ್ಯಪ್'' ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ಮೂಲಕ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ. ಅಪ್ಲಿಕೇಶನ್‌ಗೆ ಲಾಗ್ ಇನ್ ಆದ ನಂತರ ಅಭ್ಯರ್ಥಿಗಳು ಅಫಿಡವಿಟ್, ಪ್ರಪೋಸರ್ ಮಾಹಿತಿ, ನಾಮನಿರ್ದೇಶನ ಮಾಹಿತಿಯನ್ನು ಪಡೆಯಬಹುದು. ಅಭ್ಯರ್ಥಿಗಳು ತಮ್ಮ ನಾಮನಿರ್ದೇಶನ ಸ್ಥಿತಿ, ಚುನಾವಣಾ ಪ್ರಚಾರಕ್ಕಾಗಿ ಕೋರಿದ ಅನುಮತಿಗಳನ್ನು ಪರಿಶೀಲಿಸಬಹುದು.(ಫೋಟೋ 19ಕೆಆರ್ ಎಂಎನ್ 6.ಜೆಪಿಜಿ)Voter Helpline ಆಪ್ :
ಈ ಆ್ಯಪ್ ಮೂಲಕ ನೀವು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬಹುದು, ಹೆಸರು ವಿಳಾಸ ಸಂಪಾದಿಸಬಹುದು, ಹೆಸರು ಅಳಿಸಬಹುದು, ಆಧಾರ್‌ನೊಂದಿಗೆ ಮತದಾರರ ಐಡಿ ಲಿಂಕ್ ಮಾಡಬಹುದು.(ಫೋಟೋ 19ಕೆಆರ್ ಎಂಎನ್ 7.ಜೆಪಿಜಿ)VOTER ಅಪ್ಲಿಕೇಶನ್ :
ಮತದಾರರ ಪಟ್ಟಿಯಲ್ಲಿ ಹೆಸರು, ಮತದಾನ ಕೇಂದ್ರದ ವಿವರಗಳನ್ನು ಹುಡುಕಬಹುದು, ಇ-ಎಪಿಕ್ ಕಾರ್ಡ್ ಡೌನ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್‌ನೊಂದಿಗೆ ಒಬ್ಬ ವ್ಯಕ್ತಿಯು ತನ್ನ ವೋಟರ್ ಐಡಿಯನ್ನು ಮನೆಯಲ್ಲಿ ಕುಳಿತು ಪಡೆಯಬಹುದು.(ಫೋಟೋ 19ಕೆಆರ್ ಎಂಎನ್ 8.ಜೆಪಿಜಿ)
Voter Turnout ಆಪ್ :ಈ ಆ್ಯಪ್ ಮೂಲಕ ಸಾಮಾನ್ಯ ಜನರು ಮತದಾನದ ದಿನದಂದು ಮತದಾನದ ಶೇಕಡಾವಾರು ಪ್ರಮಾಣವನ್ನು ಪರಿಶೀಲಿಸಬಹುದು. ಇದರಿಂದ ಮತದಾನದ ಮಾದರಿ ತಿಳಿಯಲಿದೆ.
(ಫೋಟೋ 19ಕೆಆರ್ ಎಂಎನ್ 9.ಜೆಪಿಜಿ)ಬಾಕ್ಸ್..................ಪ್ರಮುಖ ಅಂಶಗಳು
-ಆಪ್ ಮೂಲಕ ಇಡೀ ರಾಜ್ಯದ ಭೌಗೋಳಿಕ ಮಾಹಿತಿ ವ್ಯವಸ್ಥೆ ನೋಡಲು ಸಾಧ್ಯವಿದೆ-ಮತ ಕೇಂದ್ರಗಳು ಮತ್ತು ಅವುಗಳ ಮ್ಯಾಪ್ (ನಕಾಶೆ) ನೋಡಬಹುದು
-ಎಪಿಕ್ ಕಾರ್ಡ್ ನಲ್ಲಿರುವ ಮಾಹಿತಿಗಳನ್ನು ನಮೂದಿಸಿ ನಿಮ್ಮ ಮತಗಟ್ಟೆಯನ್ನು ತಿಳಿದುಕೊಳ್ಳುವುದರ ಜೊತೆಗೆ ತಲುಪುವ ಮಾರ್ಗವನ್ನು ತಿಳಿಸಿಕೊಡುತ್ತದೆ.-ಮತಗಟ್ಟೆಯಲ್ಲಿರುವ ದಟ್ಟಣೆ ಮತ್ತು ಸರದಿ ಸಾಲಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
-ಬೂತ್ ಮಟ್ಟದ ಅಧಿಕಾರಿಗಳಿಂದ ಹಿಡಿದು ವಿವಿಧ ಶ್ರೇಣಿಯ ಅಧಿಕಾರಿಗಳ ಮಾಹಿತಿ ಲಭ್ಯ.-ಹಿರಿಯ ನಾಗರೀಕರು ಮತ್ತು ವಿಶೇಷಚೇತನರಿಗಾಗಿ ವ್ಹೀಲ್ ಚೇರ್ ಅನ್ನು ಕಾಯ್ದಿರಿಸಲು ಅವಕಾಶ
-ನಿಮ್ಮ ಹತ್ತಿರದ ಪೊಲೀಸ್ ಠಾಣೆ ಮತ್ತು ಆರೋಗ್ಯ ಕೇಂದ್ರದ ಮಾಹಿತಿ-ನಿಮ್ಮ ಮತ ಕ್ಷೇತ್ರದಲ್ಲಿ ನಡೆಯುವ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಮಾಹಿತಿ
ಕೋಟ್ .........ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಸಾರ್ವಜನಿಕರ ಸಹಕಾರವೂ ಅಗತ್ಯ. ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಿ, ನೈತಿಕ ಚುನಾವಣೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೊರತಂದಿರುವ ಸಿ-ವಿಜಿಲ್, ಸುವಿಧಾ ಆ್ಯಪ್ ಸೇರಿ ಎಲ್ಲ ಚುನಾವಣಾ ಆಪ್ ಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
- ಅವಿನಾಶ್, ಚುನಾಣಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ.