ಸಾರಾಂಶ
ಹುಕ್ಕೇರಿ ತಾಲೂಕಿನ ಗುಡಸ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ-ಉಪಾಧ್ಯಕ್ಷೆಯರ ಬದಲಾಗಿ ಅವರ ಪತಿಯರು ಅಧಿಕಾರ ಚಲಾಯಿಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸ್ವಚ್ಛತೆಗಾರರಾದ ಸಂತೋಷ ರಾಜಾಪೂರೆ, ಶ್ರೀಧರ ಹೆಗ್ಗಪ್ಪಗೋಳ ಆರೋಪಿಸಿದ್ದಾರೆ.
ಹುಕ್ಕೇರಿ: ತಾಲೂಕಿನ ಗುಡಸ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ-ಉಪಾಧ್ಯಕ್ಷೆಯರ ಬದಲಾಗಿ ಅವರ ಪತಿಯರು ಅಧಿಕಾರ ಚಲಾಯಿಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸ್ವಚ್ಛತೆಗಾರರಾದ ಸಂತೋಷ ರಾಜಾಪೂರೆ, ಶ್ರೀಧರ ಹೆಗ್ಗಪ್ಪಗೋಳ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಪಂನಲ್ಲಿ ಅಧ್ಯಕ್ಷೆ-ಉಪಾಧ್ಯಕ್ಷೆಯರ ಪತಿಯರು ದರ್ಪ ಮೆರೆಯುತ್ತಿದ್ದು, ಅವರಿಬ್ಬರು ನೀಡುತ್ತಿರುವ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ತಮ್ಮ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿದೆ ಎಂದು ಸ್ವಚ್ಛತೆಗಾರರು ಅಳಲು ತೋಡಿಕೊಂಡಿದ್ದಾರೆ.ಉಪಾಧ್ಯಕ್ಷೆ ಶೈಲಾ ಪರಗೌಡ ನೇರ್ಲಿ ಪರ ಪತಿ ಪರಗೌಡ ಅವರು ಅವಹೇಳನ ಮಾಡುತ್ತಿದ್ದು, ಹಲವು ಬಾರಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಸರ್ಕಾರಿ ನಿಯಮ ಗಾಳಿಗೆ ತೂರಿ ಪತ್ನಿಯ ಅಧಿಕಾರ ಚಲಾಯಿಸುತ್ತಿದ್ದಾರೆ. ಗ್ರಾಮದ ಸ್ವಚ್ಛತೆಯ ವಿಷಯದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.