ಹಾಲಿನೊಂದಿಗೆ ನೀರು ಕಲಬೆರಕೆ ಆರೋಪ: ಕ್ರಮಕ್ಕೆ ಒತ್ತಾಯ

| Published : Dec 07 2024, 12:32 AM IST

ಸಾರಾಂಶ

ಹಾಲು ಶೇಖರಣೆ ಮಾಡುವ ಟ್ಯಾಂಕರ್‌ಗೆ ಹಾಲಿನೊಂದಿಗೆ ನೀರು ಕಲಬೆರಕೆ ಮಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್ ಮೂಲಕ ಸೆರೆಹಿಡಿಯಲಾಗಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ತಾಲೂಕಿನ ಮಾಡಿಕೆರೆ ಎಂಪಿಸಿಎಸ್ ಬಿಎಂಸಿ ಕೇಂದ್ರದಲ್ಲಿ ಹಾಲು ಶೇಖರಣೆ ಮಾಡುವ ಟ್ಯಾಂಕರ್‌ನಲ್ಲಿ ಹಾಲಿನೊಂದಿಗೆ ನೀರು ಕಲಬೆರಕೆ ಮಾಡುವುದರ ಮೂಲಕ ಅಕ್ರಮವೆಸಗುತ್ತಿರುವುದಾಗಿ ಗ್ರಾಮಸ್ಥರು ಆರೋಪ ಮಾಡಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದ್ದು, ಅಕ್ರಮ ವೆಸಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿಕೆರೆಯ ರಾಜೇಶ್ ಒತ್ತಾಯಿಸಿದ್ದಾರೆ.

ಅವರು ನೀಡಿರುವ ಹೇಳಿಕೆಯಲ್ಲಿ ತಾಲೂಕು ಮಾಡಿಕೆರೆ ಎಂಪಿಸಿಎಸ್ ಬಿಎಂಸಿ ಕೇಂದ್ರದಲ್ಲಿ ಸಂಘದ ಕಾರ್ಯದರ್ಶಿ ಎಂ.ಜಿ.ರಾಜೇಶ್ ಹಾಗೂ ಸಹಾಯಕ ಚೇತನ್ ಹಾಲು ಶೇಖರಣೆ ಮಾಡುವ ಟ್ಯಾಂಕರ್‌ಗೆ ಹಾಲಿನೊಂದಿಗೆ ನೀರು ಕಲಬೆರಕೆ ಮಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದೇನೆಂದು ಹಾಗೂ ಇದರ ಜೊತೆಗೆ ಎಂಪಿಸಿಎಸ್‌ನಲ್ಲೂ ಅಕ್ರಮ ನಡೆಯುತ್ತಿದ್ದು, ಹಾಲಿನೊಂದಿಗೆ ನೀರು ಕಲಬೆರಕೆ ಮಾಡಿ ಹಾಲು ಉತ್ಪಾದಕ ರೈತರಿಗೆ ಮೋಸ ಮಾಡಿ ಅಕ್ರಮವೆಸುಗುತ್ತಿರುವ ಸಂಘದ ಕಾರ್ಯದರ್ಶಿ ಎಂ.ಜಿ.ರಾಜೇಶ್ ಹಾಗೂ ಸಹಾಯಕ ಚೇತನ್ ವಿರುದ್ಧ ಕ್ರಮ ಜರುಗಿಸಬೇಕೆಂದು ಮಾಡಿಕೆರೆ ಗ್ರಾಮದ ರಾಜೇಶ್ ಒತ್ತಾಯಿಸಿದ್ದಾರೆ.

ಅಕ್ರಮ ವೆಸಗಿರುವವರ ವಿರುದ್ಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಉಪವ್ಯವಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ವಿಡಿಯೋ ಸಮೇತ ದೂರು ನೀಡಿದ್ದರೂ ಯಾವುದೇ ರೀತಿಯ ಕ್ರಮ ಜರುಗಿಸಲ್ಲವೆಂದು ಆರೋಪಿಸಿರುವ ಅವರು ಮೇಲಾಧಿಕಾರಿಗಳು ಸಂಘದಲ್ಲಿನ ಸಿಸಿಟಿವಿ ಫೂಟೇಜ್‌ನ್ನು ಪರಿಶೀಲಿಸಿ ನಡೆಸಿ ಅಕ್ರಮವೆಸಗಿರುವವರ ವಿರುದ್ಧ ಕ್ರಮ ಕೈಗೊಂಡು ಸಂಘಕ್ಕೆ ಹಾಗೂ ಹಾಲು ಉತ್ಪಾದಕ ರೈತರಿಗೆ ಹಾಗುತ್ತಿರುವ ಮೋಸಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.