ಸಾರಾಂಶ
ಶಹಾಪುರ ತಾಲೂಕಿನ ಕಾಟಮನಹಳ್ಳಿ ಗ್ರಾಮದ ಎಸ್‌ಸಿ ಕಾಲೊನಿಯಲ್ಲಿ ನಡೆದ ಕಾಮಗಾರಿಯನ್ನು ಯಾದಗಿರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮೇಲಧಿಕಾರಿಳಿಗೆ ದೂರು । ಸ್ಥಳಕ್ಕೆ ಸಹಾಯಕ ಅಭಿಯಂತ್ರರರು ಭೇಟಿ ಪರಿಶೀಲನೆ । ಅಧಿಕಾರಿಗಳಿಗೆ ತರಾಟೆ
ಕನ್ನಡಪ್ರಭ ವಾರ್ತೆ ಶಹಾಪುರತಾಲೂಕಿನ ಕಾಟಮನಹಳ್ಳಿಯ ಎಸ್‌ಸಿ ಕಾಲೋನಿಯಲ್ಲಿ 2023-24 ನೇ ಸಾಲಿನ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 10 ಲಕ್ಷ ರು. ಅನುದಾನದಲ್ಲಿ ಕೈಗೊಂಡ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಎಂದು ಡಾ. ಪರಮೇಶ್ವರ ಯುವ ಸೈನ್ಯ ಜಿಲ್ಲಾಧ್ಯಕ್ಷ ಮೌನೇಶ್ ಆರೋಪಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಯಾದಗಿರಿ ಇವರಿಂದ ಕೈಗೊಂಡ ಕಾಮಗಾರಿಗೆ ಸುತ್ತಮುತ್ತಲಿನ ಹಳ್ಳದ ಮಣ್ಣು ಮಿಶ್ರಿತ ಮರಳು ಬಳಕೆ ಮಾಡಿ, ಚರಂಡಿ ಮಾಡದೆ ಬಿಲ್ ಪಾಸ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.ಈ ದೂರನ್ನು ಆಧರಿಸಿ ಯಾದಗಿರಿಯ ಸಹಾಯಕ ಅಭಿಯಂತ್ರರರು ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ಪಲಿಶೀಲಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆತಗೆದುಕೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕಳಪೆ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮೇಲಧಿಕಾರಿಗಳಿಗೆ ಮನವಿ ಮಾಡಿದರು.ಈ ವೇಳೆ ಗ್ರಾಪಂ ಸದಸ್ಯರಾದ ಮಲ್ಲಯ್ಯ ಕಾಟಮನಹಳ್ಳಿ, ವಿಶ್ವ ಕೊಂಗಂಡಿ, ಪರ್ವತರೆಡ್ಡಿ ಪೊಲೀಸ್ ಪಾಟೀಲ್, ಪರ್ವತಯ್ಯಸ್ವಾಮಿ ಹಿರೇಮಠ, ಭೀಮರಾಯ ತಳವಾರ, ಭೀಮಾಶಂಕರ ನಾಟೇಕಾರ ಸೇರಿ ಇತರರಿದ್ದರು.