ಒಂದು ವೇಳೆ ಸ್ವಚ್ಛತಾ ಸಿಬ್ಬಂದಿಯಿಂದ ಇಂತಹ ಕೆಲಸಗಳನ್ನು ಮಾಡಿಸಿ ಯಾವುದೇ ರೋಗಿಗೆ ಜೀವಕ್ಕೆ ಅಪಾಯ ಉಂಟಾದರೆ, ನೇರ ಎಂದು ಹೊಣೆಗಾರರಾಗಬೇಕಾಗುತ್ತದೆ ಮನವಿಯಲ್ಲಿ ಎಚ್ಚರಿಸಲಾಗಿದೆ.

ದಾಂಡೇಲಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೆಂಘೀ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿದ್ದು, ಆದರೆ ರೋಗಿಗಳಿಗೆ ವೈದ್ಯಕೀಯ ತರಬೇತಿ ಇಲ್ಲದ ಸ್ವಚ್ಛತಾ ಸಿಬ್ಬಂದಿಯಿಂದ ಪ್ರಥಮ ಚಿಕಿತ್ಸೆ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಅಹಿಂದ ಅತೆ ರಕ್ಷಣಾ ಸಮಿತಿ ತಾಲೂಕು ಸಮಿತಿ ಆಸ್ಪತ್ರೆಯ ವೈದ್ಯಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದೆ.ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಚಂದ್ರು ದೇವದಾನಂ ಆರ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ದಾಂಡೇಲಿಯಲ್ಲಿ ಡೆಂಘೀ ಜ್ವರ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಆಸ್ಪತ್ರೆಯ ಆವರಣದಲ್ಲಿಯೂ ಸ್ವಚ್ಛತೆ ಕಾಪಾಡುವ ಅಗತ್ಯವಿದೆ. ಆಸ್ಪತ್ರೆಯ ಒಳಾಂಗಣದಲ್ಲಿ ಹುಲ್ಲು ಬೆಳೆದಿದ್ದು, ಇದರಿಂದ ಸೊಳ್ಳೆಗಳ ಉತ್ಪತ್ತಿಗೆ ಹಾಗೂ ಡೆಂಘೀ ಮತ್ತಷ್ಟು ಹರಡುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.ವೈದ್ಯಕೀಯ ಹಾಗೂ ನರ್ಸಿಂಗ್ ತರಬೇತಿ ಪಡೆದ ಸಿಬ್ಬಂದಿ ನಿರ್ವಹಿಸಬೇಕಾದ ಡ್ರೆಸ್ಸಿಂಗ್ ಮಾಡುವುದು, ಸಲೈನ್ ಡ್ರಿಪ್ ಹಚ್ಚುವುದು ಸೇರಿದಂತೆ ಪ್ರಥಮ ಚಿಕಿತ್ಸಾ ಮಾಡಿಸುವುದು ಕೆಲಸಗಳನ್ನು ತರಬೇತಿ ಇಲ್ಲದ ಸ್ವಚ್ಛತಾ ಸಿಬ್ಬಂದಿಯಿಂದ ನಿಯಮಬಾಹಿರವಾಗಿದೆ ಎಂದು ಸಮಿತಿ ಆಕ್ಷೇಪಿಸಿದೆ. ಸ್ವಚ್ಛತಾ ಸಿಬ್ಬಂದಿಯ ಕರ್ತವ್ಯ ಆಸ್ಪತ್ರೆಯ ಆವರಣ, ವಾರ್ಡ್, ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಹಾಗೂ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಸೀಮಿತವಾಗಿದೆ. ವೈದ್ಯಕೀಯ ತರಬೇತಿ ಇಲ್ಲದ ಸಿಬ್ಬಂದಿಯಿಂದ ಇಂತಹ ಕೆಲಸಗಳನ್ನು ಮಾಡಿಸುವುದರಿಂದ ರೋಗಿಗಳ ಆರೋಗ್ಯ ಹಾಗೂ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸ್ವಚ್ಛತಾ ಕಾರ್ಯ ಹೊರತುಪಡಿಸಿ ಯಾವುದೇ ವೈದ್ಯಕೀಯ ಕೆಲಸಗಳನ್ನು ಅವರಿಂದ ಮಾಡಿಸಬಾರದು ಎಂದು ಸಮಿತಿ ಅಗ್ರಹಿಸಿದೆ.ಒಂದು ವೇಳೆ ಸ್ವಚ್ಛತಾ ಸಿಬ್ಬಂದಿಯಿಂದ ಇಂತಹ ಕೆಲಸಗಳನ್ನು ಮಾಡಿಸಿ ಯಾವುದೇ ರೋಗಿಗೆ ಜೀವಕ್ಕೆ ಅಪಾಯ ಉಂಟಾದರೆ, ನೇರ ಎಂದು ಹೊಣೆಗಾರರಾಗಬೇಕಾಗುತ್ತದೆ ಮನವಿಯಲ್ಲಿ ಎಚ್ಚರಿಸಲಾಗಿದೆ.ಈ ಸಂದರ್ಭದಲ್ಲಿ ಕರ್ನಾಟಕ ಅಹಿಂದ ರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ವಿಜಯ ಹರಿಜನ, ಶೇಖರ ಅರ್ಯ, ಮೋಹನ ಸಿಂಗ್, ಗುರಪ್ಪ ಅಸುಂಡಿ, ರಾಜನ್ ನಾಯ್ತು. ಸಹದೇವ ಕಾಮದೋಳ್ಳರ, ಗಂಗಾಧರ ಅರಳಿ, ನಿಲೇಶ ನಾಯ್ಕ, ಮುರ್ಗೇಶ ನಾಯರ, ರಾಜೇಶ ರೆಡ್ಡಿ ಹಾಗೂ ಪಾಸ್ಕಲ್ ಉಪಸ್ಥಿತರಿದ್ದರು.