ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಮಾವತ್ತೂರು ಗ್ರಾಪಂ ತಾಲೂಕಿನಲ್ಲಿಯೇ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿ ಕಾರ್ಯಗಳಲ್ಲಿ ಉತ್ತಮ ಪಂಚಾಯಿತಿ ಎಂದು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಬಂದಿದ್ದು ಕೆಲವರ ಸುಳ್ಳು ಹೇಳಿಕೆಗಳು ಮನಸ್ಸಿಗೆ ನೋವುಂಟು ಮಾಡಿದೆ ಎಂದು ಅಧ್ಯಕ್ಷೆ ಅನಿತಾಲಕ್ಷ್ಮಿನಾಗರಾಜು ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಮಾವತ್ತೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುರುಳುಗೆರೆ ಕ್ಷೇತ್ರದ ಸದಸ್ಯೆಯಾಗಿದ್ದು ಹುರುಳುಗೆರೆ ಗ್ರಾಮದ ಶಾಲೆಗೆ ಕಾಪೌಂಡ್, ಶೌಚಾಲಯ, ಸಿಸಿ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಆದರೆ ಗ್ರಾಮಕ್ಕೆ ಹೊಂದಿಕೊಂಡಿರುವ ಹೊಲದಲ್ಲಿ ಮನೆ ಕಟ್ಟಿಕೊಂಡಿರುವ ೧೨ ಮನೆಗಳ ಜನರು ಓಡಾಡಲು ಖಾಸಗಿ ಜಮೀನಿನಲ್ಲಿ ರಸ್ತೆ ಹಾದು ಹೋಗುವುದರಿಂದ ಹಲವಾರು ವರ್ಷಗಳಿಂದ ರಸ್ತೆ ಸಮಸ್ಯೆ ಇದೆ. ಈಗ ಆ ಸಮಸ್ಯೆಯನ್ನು ಜಮೀನು ಮಾಲೀಕರು ಮತ್ತು ಜನರು ಬಗೆಹರಿಕೊಂಡಿದ್ದು ರಸ್ತೆ ಮಾಡಿಕೊಡಲು ನಮ್ಮ ಗ್ರಾಪಂ ಬದ್ಧವಾಗಿದೆ.ಧಾಅದರೆ ಕೆಲವರು ವಿನಾಕಾರಣ ಯಾವ ಅಭಿವೃದ್ಧಿ ಆಗಿಲ್ಲ ಎನ್ನುವ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದರು.
ಸದಸ್ಯ ಟಿ.ಮಂಜುನಾಥ್ ಮಾತನಾಡಿ ಮಾವತ್ತೂರು ಗ್ರಾಪಂ ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರು ಲಕ್ಷಾಂತರ ರು. ಅನುದಾನ ನೀಡಿ ಸಹಕರಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಸಿಂಗಲೀಕಪುರದಿಂದ ಹುರುಳುಗೆರೆ ಹೋಗುವ ರಸ್ತೆಗೆ ಶಾಸಕರು ೧.೧೦ ಕೋಟಿ ರು.ಗಳ ವಿಶೇಷ ಅನುದಾನವನ್ನು ನೀಡಿದ್ದಾರೆ, ಹುರುಳುಗೆರೆಯ ಜಮೀನಿಲ್ಲಿ ಕಟ್ಟಿಕೊಂಡಿರುವ ೧೨ ಮನೆಗಳ ರಸ್ತೆ ಸಮಸ್ಯೆಯನ್ನು ಅವರೆ ಬಗೆಹರಿಸಿಕೊಂಡಿದ್ದು ಆ ಜಾಗವನ್ನು ರಸ್ತೆ ಮಾಡಿಕೊಡುವ ಕೆಲಸವನ್ನು ಪಂಚಾಯಿತಿ ಮಾಡುತ್ತದೆ. ಎಂದರು.ಉಪಾಧ್ಯಕ್ಷ ನವೀನ್‌ಕುಮಾರ್ ಮಾತನಾಡಿ ನಮ್ಮ ಪಂಚಾಯಿತಿಯಲ್ಲಿ ಸುಮಾರು ೩೫೦೦ ಮೀಟರ್‌ಗಳಷ್ಟು ಹೊಸದಾಗಿ ಚರಂಡಿ ಕಾಮಗಾರಿಗಳನ್ನು ಮಾಡಲಾಗಿದೆ. ೫೦೦ ಮೀಟರ್ ಗಳಷ್ಟು ಸಿಸಿ ರಸ್ತೆ ಮಾಡಲಾಗಿದೆ, ಇದರೊಂದಿಗೆ ಶಾಲಾ ಕಾಲೇಜುಗಳ ಕಾಮಗಾರಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವುದಕ್ಕಾಗಿ ನಮಗೆ ಸರ್ಕಾರದಿಂದ ನರೇಗಾ ಯೋಜನೆಯಲ್ಲಿ ೨೦೨೫-೨೬ ಸಾಲಿನ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ಲಭಿಸಿದೆ. ಪಂಚಾಯಿತಿಯಲ್ಲಿ ಕೆಲಸವೇ ಆಗಿಲ್ಲ, ಶಾಸಕರು ಅನುದಾನ ನೀಡಿಲ್ಲ ಎಂಬುವ ಸುಳ್ಳು ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದರು. ಪ್ರತಿಕಾ ಗೋಷ್ಠಿಯಲ್ಲಿ ಕುಮಾರ್, ಮಹಾಲಿಂಗಯ್ಯ ಸೇರಿದಂತೆ ಕೆಲ ಸದಸ್ಯರು ಹಾಜರಿದ್ದರು.