ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ, ಇದು ಅವರಿಗೆ ಶೋಭೆಯಲ್ಲ, ಅವರು ಆಡಳಿತದ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ, ಇದು ಅವರಿಗೆ ಶೋಭೆಯಲ್ಲ, ಅವರು ಆಡಳಿತದ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ನಂತರ ಸುದೀರ್ಘಾವಧಿಯ ಸಿಎಂ ಸಿದ್ದರಾಮಯ್ಯ ದಾಖಲೆ ವಿಚಾರಕ್ಕೆ ಪ್ರತಿಕ್ರಿಯಿಸಿದರು, ದಾಖಲೆ ಎಲ್ಲರೂ ಮಾಡುತ್ತಾರೆ. ಅರಸು ಅವರ ಕಾಲಘಟ್ಟವೇ ಬೇರೆ ಸಿದ್ದರಾಮಯ್ಯ ಕಾಲಘಟ್ಟವೇ ಬೇರೆ. ಆಡಳಿತದ ಮೇಲೆ ಸಿದ್ದರಾಮಯ್ಯನವರು ಹಿಡಿತ ಇಟ್ಟುಕೊಂಡರೆ ಒಳ್ಳೆಯದು, ಅವರ ಆಪ್ತರ ಮೇಲೆ ಇರುವ ಭ್ರಷ್ಟಾಚಾರದ ಆರೋಪಗಳು ಮುಖ್ಯಮಂತ್ರಿಗೆ ಶೋಭೆಯಲ್ಲ, ಎಲ್ಲವನ್ನು ಸರಿ ಮಾಡಿ ಪಾರದರ್ಶಕವಾಗಿರಲಿ ಎಂದರು.

ಅವರು ಅಹಿಂದ ನಾಯಕರು ಒಳ್ಳೆಯದಾಗಲಿ, ಅಭಿನಂದನೆಗಳು ಎಂದ ಪ್ರಕಾಶ್‌ರಾಜ್ ನಾನು ಬರಿ ಹೊಗಳು ಭಟ್ಟ ಅಲ್ಲ, ಪ್ರಶ್ನೆಯನ್ನು ಕೇಳುತ್ತೇನೆ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ನಾನು ನಿರಂತರ ವಿರೋಧ ಪಕ್ಷ ಎಂದರು.