ಓತಿಹಾಳ ಪಿಕೆಪಿಎಸ್‌ನಲ್ಲಿ ಹಣ ದುರುಪಯೋಗ ಆರೋಪ

| Published : Nov 17 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಕಳೆದ ಒಂದು ವಾರದಿಂದ ಓತಿಹಾಳ ಪಿಕೆಪಿಎಸ್ ಸಂಘದಲ್ಲಿ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿಗೆ ಮೇಲಾಧಿಕಾರಿಗಳು ಕ್ರಮಕೈಗೊಳ್ಳದಿರುವುದನ್ನು ಗಮನಿಸಿದರೆ ಇನ್ನಷ್ಟು ಹಣ ದುರುಪಯೋಗದ ಹುನ್ನಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಬಾಬು ನಾಟೀಕಾರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಕಳೆದ ಒಂದು ವಾರದಿಂದ ಓತಿಹಾಳ ಪಿಕೆಪಿಎಸ್ ಸಂಘದಲ್ಲಿ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿಗೆ ಮೇಲಾಧಿಕಾರಿಗಳು ಕ್ರಮಕೈಗೊಳ್ಳದಿರುವುದನ್ನು ಗಮನಿಸಿದರೆ ಇನ್ನಷ್ಟು ಹಣ ದುರುಪಯೋಗದ ಹುನ್ನಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಬಾಬು ನಾಟೀಕಾರ ಆರೋಪಿಸಿದರು.

ತಾಲೂಕಿನ ಓತಿಹಾಳ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ಹಮ್ಮಿಕೊಂಡ ಅನಿರ್ಧಿಷ್ಠಾವದಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಇಲಾಖೆಯಿಂದ ಸಾಬೀತಾಗಿ ಸಂಘದಿಂದ ವಜಾಗೊಂಡ ಮಾಜಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಅಂಬಣ್ಣ ಹೂಗಾರ ಅವರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿಕೊಂಡ ಸದ್ಯದ ಆಡಳಿತ ಮಂಡಳಿಯವರು ಇವರನ್ನು ವಜಾಗೊಳಿಸಬೇಕು. ಕಾನೂನು ಬಾಹಿರವಾಗಿ ಅವರನ್ನು ನೇಮಕ ಮಾಡಿಕೊಂಡ ವ್ಯವಸ್ಥೆಯ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ನಮ್ಮ ಧರಣಿ ಸತ್ಯಾಗ್ರಹಕ್ಕೆ ಮೇಲಾಧಿಕಾರಿಗಳು ಕಾನೂನಾತ್ಮಕವಾಗಿ ಸೂಕ್ತ ನ್ಯಾಯವನ್ನು ಒದಗಿಸದಿರುವುದನ್ನು ನೋಡಿದರೆ ಇದರಲ್ಲಿ ಮೇಲಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಕೆಲ ಸದಸ್ಯರು ಶಾಮಿಲಾಗಿರಬೇಕು ಎಂದು ಮೇಲ್ನೊಟಕ್ಕೆ ಕಾಣುತ್ತಿದೆ. ಕೂಡಲೇ ಮೇಲಾಧಿಕಾರಿಗಳು ಗಮನ ಹರಿಸಿ ರೈತರಿಗಾಗುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ಮಣೂರ, ಸೋಮಣ್ಣ ಪೂಜಾರಿ, ಭೀಮರಾಯಿ ಮಕಣಾಪೂರ, ನೀಲಮ್ಮ ನಾಕೆತ್ತಿನ, ಸಂಗಮ ಕೊರಬು, ಸಿದ್ದಮ್ಮ ನಾಟೀಕಾರ, ಗ್ರಾಪಂ ಸದಸ್ಯರಾದ ಸುವರ್ಣಾ ಮಕಣಾಪೂರ, ಜಗದೀಶ ಮಾಲೇಗಾರ, ಮಲ್ಲು ನಾಕೆತ್ತಿನ, ಆಸೀಫ್ ಗುಂಜಟ್ಟಿ, ರಾಜು ವಠಾರ, ಗ್ರಾಮದ ರೈತ ಮುಖಂಡ ಮಲ್ಲನಗೌಟ ಪಾಟೀಲ, ಬಾಬು ನಾಟೀಕಾರ, ಶಂಕರಗೌಡ ಜುಮನಾಳ, ಶಿವಾನಂದ ಸಾಳಿಮಠ ಸೇರಿದಂತೆ ಅನೇಕರು ಇದ್ದರು.