ಸ್ವಯಂ ಸೇವಾ ಕ್ಷೇತ್ರ ಕೈ ಬಿಟ್ಟು ‘ಸಮೀಕ್ಷೆ’: ಆರೋಪ

| Published : Sep 28 2025, 02:00 AM IST

ಸ್ವಯಂ ಸೇವಾ ಕ್ಷೇತ್ರ ಕೈ ಬಿಟ್ಟು ‘ಸಮೀಕ್ಷೆ’: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಕ್ಕೆ ಎನ್‌ಜಿಒಗಳ ಇರುವಿಕೆಯನ್ನು ದಾಖಲು ಮಾಡಬೇಕಿದೆ, ಆದ್ದರಿಂದ ಕೋಲಾರ ಜಿಲ್ಲೆಯಲ್ಲಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಈ ಸಂದರ್ಭ ಬಳಸಿಕೊಂಡು ಸಮೀಕ್ಷೆದಾರರು ತಮ್ಮ ತಮ್ಮ ಮನೆಗಳಿಗೆ ಬಂದಾಗ ಈ ಕೆಳಕಂಡ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಮಾಹಿತಿಗಳನ್ನು ದಾಖಲು ಮಾಡಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2025 ನ್ನು ಸೆಃ 22 ರಂದು ರಾಜ್ಯದಲ್ಲಿ ಪ್ರಾರಂಭಿಸಿರುವುದು ಸ್ವಾಗತಾರ್ಹ, ಆದರೆ ಸರ್ಕಾರ ಸಂವಿಧಾನದ 5ನೇ ಅಂಗವೆಂದು ಗುರುತಿಸಲ್ಪಟ್ಟಿರುವ ಸ್ವಯಂ ಸೇವಾ ಕ್ಷೇತ್ರ ವಲಯವನ್ನು ಸಮೀಕ್ಷೆಯಿಂದ ಕೈ ಬಿಟ್ಟಿದೆ ಎಂದು ಸ್ವಯಂ ಸೇವಾ ಸಂಸ್ಥೆಗಳ ಕೋಲಾರ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಅ.ನಾ ಹರೀಶ್ ಅವರು ಅಸಮಾಧಾನವ್ಯಕ್ತಪಡಿಸಿದರು. ಪಟ್ಟಣದ ಫೋಕಸ್ ಸ್ವಯಂ ಸೇವಾ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಅವರು ಸರ್ಕಾರದ ಒಂದು ಭಾಗವಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿರುವ ಎನ್‌ಜಿಒ ಸದಸ್ಯ ಕಾರ್ಯಕರ್ತರನ್ನು ಪರಿಗಣಿಸಿಲ್ಲ ಎಂದು ಟೀಕಿಸಿದರು.

ಎನ್‌ಜಿಒಗಳ ಕಡೆಗಣನೆ

ಸರ್ಕಾರಕ್ಕೆ ಎನ್‌ಜಿಒಗಳ ಇರುವಿಕೆಯನ್ನು ದಾಖಲು ಮಾಡಬೇಕಿದೆ, ಆದ್ದರಿಂದ ಕೋಲಾರ ಜಿಲ್ಲೆಯಲ್ಲಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಈ ಸಂದರ್ಭ ಬಳಸಿಕೊಂಡು ಸಮೀಕ್ಷೆದಾರರು ತಮ್ಮ ತಮ್ಮ ಮನೆಗಳಿಗೆ ಬಂದಾಗ ಈ ಕೆಳಕಂಡ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಮಾಹಿತಿಗಳನ್ನು ದಾಖಲು ಮಾಡಬೇಕಾಗಿದೆ ಎಂದರು. ಎನ್‌ಜಿಒ ಉದ್ಯೋಗಿ ಎಂದು ಬರೆಸಿ

ಜಿಲ್ಲೆಯಲ್ಲಿನ ಎನ್‌ಜಿಒ ಮುಖ್ಯಸ್ಥರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿ ಕಡ್ಡಾಯವಾಗಿ ನೋಂದಣಿ ಮಾಡಿಸಲು ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಸ್ವಯಂಸೇವಾ ಸಂಸ್ಥೆಯಲ್ಲಿನ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಸಂಸ್ಥಾಪಕರು, ಸಿಬ್ಬಂದಿ, ಗೌರವಧನ ಪಡೆಯುತ್ತಿರುವವರು ಬೆಂಬಲ ಸಂಸ್ಥೆಗಳು ಧಾನಿಗಳು, ಈ ಬಗ್ಗೆ ಗಮನಹರಿಸಿ ಸಮೀಕ್ಷೆಯ ಕುಟುಂಬದ ಮಾಹಿತಿ ನಮೂನೆ ಅನುಬಂಧ 01, ಕುಟುಂಬದ ಮಾಹಿತಿಯಲ್ಲಿ ಉದ್ಯೋಗ ಕಲಂ 28 ರಲ್ಲಿ ಸ್ವಯಂ ಸೇವಾ ಸಂಸ್ಥೆಯ ಉದ್ಯೋಗಿ ಎಂದು ನಮೂದಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಸಮೀಕ್ಷೆಯ ಅನುಬಂಧ -2 ರಲ್ಲಿ ಕುಟುಂಬದ ಅನುಸೂಚಿತ ಕಲಂ 27 ರಲ್ಲಿ ಉದ್ಯೋಗದ 2ನೇ ಸಾಲಿನಲ್ಲಿ ಸ್ವಯಂ ಸೇವಾ ಕ್ಷೇತ್ರ ಇತರೆ ಎಂದು ದಾಖಲು ಮಾಡಬೇಕು, ಕಲಂ 27 ರಲ್ಲಿ ಮಾಸಿಕ ವೇತನದ ಆಧಾರದ ಮೇಲೆ ಉದ್ಯೋಗದಲ್ಲಿರುವವರು, ಕ್ರಮ ಸಂಖ್ಯೆ 12 ರಲ್ಲಿ ಇತರೆ ಎಂಬ ಕಾಲಂನಲ್ಲಿ ಸ್ವಯಂ ಸೇವಾ ಕ್ಷೇತ್ರ ವಲಯ ಎಂದು ದಾಖಲಿಸಿ, ಆಡಳಿತ ವರ್ಗ, ಸಿಬ್ಬಂದಿ ವರ್ಗ ಎಂಬಲ್ಲಿ ತಮ್ಮ ಉದ್ಯೋಗದ ಮಾಹಿತಿ ದಾಖಲಿಸಬೇಕೆಂದು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಖಜಾಂಚಿ ಮುಳಬಾಗಿಲು ಗ್ರಾಮಭಾರತಿ ಸಂಸ್ಥೆ ಎಂ.ಬಿ. ಕೃಷ್ಣಮೂರ್ತಿ, ಜಿಲ್ಲಾ ಸಮಿತಿಯ ಸದಸ್ಯರಾದ ಕೋಲಾರ ರೋಷನ್ ಸಂಸ್ಥೆಯ ಎಂ.ಡಿ ಷಂಷೀರ್, ಕೆಜಿಎಫ್ ಜನ್ಮಭೂಮಿ ಸಂಸ್ಥೆಯ ವಿ. ಸುಬ್ರಮಣಿ ಅವರು ಭಾಗವಹಿಸಿದ್ದರು.