ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಗೆಲುವು ಖಚಿತ: ಗೌತಮ್ ಗೌಡ

| Published : Mar 22 2024, 01:07 AM IST

ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಗೆಲುವು ಖಚಿತ: ಗೌತಮ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಚುನಾವಣೆ ಬಿಜೆಪಿ - ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಪ್ರಧಾನಿ ನರೇಂದ್ರಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅಚ್ಚುಮೆಚ್ಚಿನ ಅಭ್ಯರ್ಥಿಯಾಗಿರುವ ಮಂಜುನಾಥ್ ರವರು ಗೆಲುವು ಸಾಧಿಸುವುದರಲ್ಲಿ ಅನುಮಾನ ಇಲ್ಲ.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ನಿರ್ವಹಣಾ ಸಮಿತಿ ಮೂಲಕ ಸಂಘಟನೆ ಕಾರ್ಯ ನಡೆದಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಗೆಲ್ಲುವ ಮೂಲಕ ಡಿ.ಕೆ.ಸುರೇಶ್ ಅವರನ್ನು ಜನರು ಮನೆಗೆ ಕಳುಹಿಸಲಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಗೌತಮ್ ಗೌಡ ತಿಳಿಸಿದರು.

ಹಾರೋಹಳ್ಳಿ ಸಮೀಪದ ಹನುಮಂತನಗರ ಗೌತಮ್ ಗೌಡರ ನಿವಾಸದ ಆವರಣದಲ್ಲಿ ಬುಧವಾರ ಜರುಗಿದ ಬಿಜೆಪಿ ಬೂತ್ ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ಬಿಜೆಪಿ - ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಪ್ರಧಾನಿ ನರೇಂದ್ರಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅಚ್ಚುಮೆಚ್ಚಿನ ಅಭ್ಯರ್ಥಿಯಾಗಿರುವ ಮಂಜುನಾಥ್ ರವರು ಗೆಲುವು ಸಾಧಿಸುವುದರಲ್ಲಿ ಅನುಮಾನ ಇಲ್ಲ ಎಂದರು.

ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ರವರಿಗೆ ಈ ಬಾರಿ ಲೀಡ್ ಕಡಿಮೆಯಾಗಲಿದೆ. ಉಳಿದಂತೆ 3-4 ಕ್ಷೇತ್ರಗಳಲ್ಲಿ ಬಿಜೆಪಿಗೆ ಅತಿ ಹೆಚ್ಚು ಮತಗಳು ದೊರೆಯಲಿವೆ. ಕಾಂಗ್ರೆಸ್ ನವರು ಬಿಜೆಪಿ ಅಭ್ಯರ್ಥಿಯ ನೈತಿಕತೆ ಪ್ರಶ್ನೆಮಾಡುವ ಯೋಗ್ಯತೆಯನ್ನು ಹೊಂದಿಲ್ಲ, ಕ್ಷೇತ್ರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ನಮಗೆ ವ್ಯಕ್ತಿಯೂ ಅಲ್ಲ, ಶಕ್ತಿಯೂ ಅಲ್ಲ, ಇದರ ನಡುವೆ ನಮ್ಮ ನಿರಂತರ ಹೋರಾಟದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಪ್ಪ ಮಾತನಾಡಿ, ಈ ಬಾರಿ ಡಿ.ಕೆ.ಸಹೋದರರ ಸೋಲು ಖಚಿತವಾಗಿದೆ. ಅದೇ ಸೋಲಿನ ಭೀತಿಯಿಂದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಸೇರಿ ಸಣ್ಣಪುಟ್ಟ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ನಿಷ್ಠಾವಂತ ಮತದಾರರು ಮಾತ್ರ ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಮುರಳೀಧರ್, ಪಿಚ್ಚನಕೆರೆ ಜಗದೀಶ್, ವಕೀಲ ಚಂದ್ರಶೇಖರ್, ಎಸ್ಸಿ.ಎಸ್ಟಿ ಜಿಲ್ಲಾಧ್ಯಕ್ಷ ಚಂದ್ರು, ಕೃಷ್ಣ, ಪ್ರಕಾಶ್, ನಾಗರಾಜ್, ದೇವರಾಜು, ಹಲವರು ಉಪಸ್ಥಿತರಿದ್ದರು.