ಸಾರಾಂಶ
ನೆಲಮಂಗಲ: ಜೆಡಿಎಸ್-ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ ಬೇಡ, ಬೆಂಗಳೂರು ಗ್ರಾಮಾಂತರ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ರಂಗನಾಥ್ ಅವರನ್ನು ಗೆಲ್ಲಿಸೋಣ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಕರೆ ನೀಡಿದರು.
ತಾಲೂಕಿನ ಹಂಚಿಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಅವರು, ರಂಗನಾಥ್ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಷ್ಟೆ ಅಲ್ಲ. ಪ್ರದಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ. ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ರಂಗನಾಥ್ ವಕೀಲರ ಸಂಘದಲ್ಲಿ ಮಾಜಿ ಅಧ್ಯಕ್ಷರೂ ಆಗಿದ್ದ ಅನುಭವವಿದೆ. ಮೈತ್ರಿಯಾದ ಮೊದಲ ಚುನಾವಣೆ ಇದಾಗಿದ್ದು ಎರಡೂ ಪಕ್ಷದ ಮುಖಂಡರು ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು. ರಂಗನಾಥ್ ಮೂಲ ಬಿಜೆಪಿಯವರಾಗಿದ್ದು ಎಬಿವಿಪಿಯಲ್ಲಿ ಕೆಲಸ ಮಾಡಿದ್ದಾರೆ. ಕೇವಲ ಅಧಿಕಾರ ಹಣದ ಆಸೆಯಿಂದ ಪಕ್ಷಾಂತರ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬಾರದು ಎಂದು ತಿಳಿಸಿದರು.
ಮೈತ್ರಿಕೂಟದ ಅಭ್ಯರ್ಥಿ ರಂಗನಾಥ್ ಮಾತನಾಡಿ, 2026ವರೆಗೂ ತಮ್ಮ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದು ಮತ್ತು ಶಿಕ್ಷಣ ಕ್ಷೇತ್ರದ ಬದಲಾವಣೆ ಉದ್ದೇಶದಿಂದ ಪುಟ್ಟಣ್ಣ ಅವರನ್ನು ಶಿಕ್ಷಕರು ಆಶೀರ್ವಾದ ಮಾಡಿದ್ದರು. ಆದರೆ ಅವಧಿಗೂ ಮುನ್ನ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಪುಟ್ಟಣ್ಣ ಉಪಚುನಾವಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. 2020ರ ಚುನಾವಣೆಯಲ್ಲಿ ಅತ್ಯಧಿಕ ಮತ ನೀಡಿದ ಶಿಕ್ಷಕರನ್ನು ಮರೆಯುವಂತಿಲ್ಲ. ಎನ್‌ಡಿಎ ಅಬ್ಯರ್ಥಿಯಾಗಿರುವ ನನಗೆ ಉಳಿದಿರುವ ಎರಡೂವರೆ ವರ್ಷದ ಅವಧಿಗೆ ಅವಕಾಶ ಮಾಡಿಕೊಡಬೇಕು. ಶಿಕ್ಷಕರ ಆಶೋತ್ತರಗಳನ್ನು ಈಡೇರಿಸುವುದಾಗಿ ತಿಳಿಸಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಬಿಜೆಪಿ ಮುಖಂಡ ಸಪ್ತಗಿರಿ ಶಂಕರ್ ನಾಯಕ್, ತಾಲೂಜು ಜೆಡಿಎಸ್ ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಉಪಾಧ್ಯಕ್ಷ ಹನುಮಂತಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಹೇಮಂತ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ಜಗದೀಶ್ ಚೌದರಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ನಾಗರಾಜು, ಬಿಜೆಪಿ ಮಹಿಳಾ ಘಟದ ಜಿಲ್ಲಾಧ್ಯಕ್ಷೆ ಸೌಮ್ಯ, ವರದನಾರಾಯಣ್, ಮೋಹನ್ ಕುಮಾರ್, ದೇಗನಹಳ್ಳಿ ಸುರೇಶ್, ಆರ್.ಬಿ.ಐ ರಾಜಣ್ಣ, ಎಲ್.ಜಿ.ಕೃಷ್ಣಪ್ಪ, ಸುರೇಶ್, ವಕೀಲ ಕನಕರಾಜು, ಎಂ.ಎಂ.ಗೌಡ್ರು, ಮಿಣ್ಣಾಪುರ ಕಾಂತರಾಜು, ನಾರಾಯಣ್, ಬಿಜೆಪಿ ವಕ್ತಾರ ಎನ್.ಸತೀಶ್, ಬೈರೇಗೌಡ್ರು, ನಗರಸಭೆ ಸದಸ್ಯ ಶಿವಕುಮಾರ್, ಎನ್.ಗಣೇಶ್, ಆಂಜಿನಪ್ಪ, ಪಾಪಣ್ಣಿ, ನಾರಾಯಣ್ ರಾವ್ ಇತರರಿದ್ದರು.
ಪೊಟೊ-14ಕೆ ಎನ್‌ಎಲ್ಎಮ್1-
ನೆಲಮಂಗಲ ತಾಲೂಕಿನ ಹಂಚಿಪುರದಲ್ಲಿ ಬಿಜೆಪಿ ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಕರಪತ್ರ ಬಿಡುಗಡೆ ಮಾಡಿದರು. ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ಇತರರಿದ್ದರು.