ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಶ್ರೀರಾಮ ಸತ್ಯ, ಪ್ರಾಮಾಣಿಕತೆ ಮತ್ತು ನೈತಿಕತೆಯ ದ್ಯೋತಕ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಜಿಲ್ಲಾಧ್ಯಕ್ಷ ಎಂ. ರಾಮಚಂದ್ರ ಹೇಳಿದರು.ತಾಲೂಕಿನ ಜ್ಯೋತಿಗೌಡನಪುರದ ನಾಯಕರ ಬೀದಿಯಲ್ಲಿ ನಡೆದ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಶ್ರೀರಾಮ ನಮ್ಮೆಲ್ಲರ ಆರಾಧ್ಯ ದೈವರಾಗಿದ್ದು, ನಾಯಕ ಜನಾಂಗದವರು ರಾಮನ ಭಕ್ತರಾಗಿದ್ದಾರೆ. ಸಮುದಾಯದವರು ಪ್ರತಿ ಗ್ರಾಮದಲ್ಲೂ ಶ್ರೀರಾಮಮಂದಿರ ನಿರ್ಮಿಸಿಕೊಂಡು ಶ್ರೀರಾಮನನ್ನು ಆರಾಧಿಸಿಕೊಂಡು ಬಂದಿದ್ದಾರೆ. ಮರ್ಯಾದೆ ಪುರುಷ ಶ್ರೀರಾಮನ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಆಶಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು. ಆದಿಕವಿ ವಾಲ್ಮೀಕಿ ಅವರು ಬರೆದ ರಾಮಾಯಣ ಸರ್ವ ಕಾಲಕ್ಕೂ ಪ್ರಸ್ತುತ ವಾಗಿದೆ. ಸತ್ಯವನ್ನು ವ್ಯಕ್ತಿಗತಗೊಳಿಸಲಾಗಿದೆ, ಶ್ರೀರಾಮ ಎಲ್ಲಾ ರೀತಿಯಲ್ಲೂ ಅತ್ಯಂತ ಆದರ್ಶ ವ್ಯಕ್ತಿಯಾಗಿದ್ದಾರೆ. ರಾಮ ರಾಜ್ಯ ಸ್ಥಾಪನೆಯಲ್ಲಿ ಶ್ರಮಿಸಬೇಕು. ಸಹಬಾಳ್ವೆಯಿಂದ ಜೀವನ ಸಾಗುವ ಮೂಲಕ ರಾಮ ಸ್ಮರಣೆಯು ಮುಂದಿನ ಪೀಳಿಗೆಗೆ ತಲುಪಿಸುವ ಜೊತೆಗೆ ವಾಲ್ಮೀಕಿ ಬರೆದ ರಾಮಾಯಣ ಸರ್ವಕಾಲ, ಸರ್ವ ವ್ಯಾಪಿಯಾಗಿಸುವ ಮೂಲಕ ಜಗತ್ತಿಗೆ ರಾಮ ಸಂದೇಶವನ್ನು ತಲುಪಿಸೋಣ ಎಂದರು. ಈ ವೇಳೆ ಯಜಮಾನರಾದ ನಂಜುಂಡ ನಾಯಕ, ನಿಂಗನಾಯಕ, ಗುರುಲಿಂಗನಾಯಕ, ರಮೇಶನಾಯಕ, ರಾಮನಾಯಕ, ಹುಚ್ಚನಾಯಕ, ನಾಗನಾಯಕ, ಬಸವಣ್ಣನಾಯಕ, ವೀರಭದ್ರನಾಯಕ, ಮಣಿಕಂಠನಾಯಕ, ಗ್ರಾಪಂ ಸದಸ್ಯರಾದ ಚಿಕ್ಕಣ್ಣನಾಯಕ, ಯಶೋಧಕೃಷ್ಣನಾಯಕ, ನಿಂಗನಾಯಕ, ಮೀನಾವೆಂಕಟೇಶ್, ಕಮಲಮ್ಮ ಸುಬ್ಬನಾಯಕ, ಮುಖಂಡ ವೇಣುಗೋಪಾಲ್ ಹಾಗೂ ಕುಲಸ್ಥರು, ಗ್ರಾಮಸ್ಥರು ಹಾಜರಿದ್ದರು.