ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಕಳೆದೆರಡು ವರ್ಷಗಳಲ್ಲಿ ತಲಾ 40ಕ್ಕೂ ಹೆಚ್ಚು ಕ್ಲಬ್‌ಗಳು ಸ್ಥಾಪನೆಯಾಗಿವೆ. ಬೇರೆ ಬೇರೆ ಜಿಲ್ಲೆಗಳಲ್ಲೂ ಇದೇ ರೀತಿ ಬೆಳೆಯುತ್ತಿವೆ. ಇತರೆ ಕ್ಲಬ್‌ಗಳಿಗೆ ಹೋಲಿಸಿದಲ್ಲಿ ಕಡಿಮೆ ಶುಲ್ಕ ಇರುವುದು ಹಾಗೂ ಸಮಾಜ ಸೇವಾ ಕಾರ್ಯಗಳಿಗೆ ಹೆಚ್ಚು ಹಾಗೂ ಮುಕ್ತ ಅವಕಾಶ ಇರುವುದು ಇದಕ್ಕೆ ಕಾರಣ.
ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯರೇ ಸ್ಥಾಪಿಸಿರುವ ಅಲೆಯನ್ಸ್ ಸಂಸ್ಥೆ ತ್ವರಿತಗತಿಯಲ್ಲಿ ಬೆಳೆಯುತ್ತಿದೆ ಎಂದು ಅಂತಾರಾಷ್ಟ್ರೀಯ ಕಾರ್ಯದರ್ಶಿ ನಾಗರಾಜ ವಿ. ಬೈರಿ ಹೇಳಿದರು.ಭಾನುವಾರ ನಡೆದ ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ-255-ಎಸ್ ರ ವ್ಯಾಪ್ತಿಯ ವಿಜಯನಗರ, ನೇತಾಜಿ, ವಲ್ಲಭಬಾಯ್, ಕೃಷ್ಣದೇವರಾಯ, ತಿಲಕ್, ಸಿರಿ ಸಂಭ್ರಮ, ಸಿರಿ ಫೀನಿಕ್ಸ್, ಸಿರಿ ಸಪ್ತಸ್ವರ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸ್ಥಾಪಿಸಿದವರು ಹಾಗೂ ನೇತೃತ್ವ ವಹಿಸಿದವರು ವಿದೇಶಿಯರು. ಆದರೆ ಆಲೆಯನ್ಸ್ ಕ್ಲಬ್ ಸಂಸ್ಥಾಪಕರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇತೃತ್ವ ವಹಿಸುವವರು ಭಾರತೀಯರು. ಈ ಸಂಸ್ಥೆ ಸ್ಥಾಪನೆಯಾದ ಅತಿಕಡಿಮೆ ಅವಧಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದರು.
ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಕಳೆದೆರಡು ವರ್ಷಗಳಲ್ಲಿ ತಲಾ 40ಕ್ಕೂ ಹೆಚ್ಚು ಕ್ಲಬ್‌ಗಳು ಸ್ಥಾಪನೆಯಾಗಿವೆ. ಬೇರೆ ಬೇರೆ ಜಿಲ್ಲೆಗಳಲ್ಲೂ ಇದೇ ರೀತಿ ಬೆಳೆಯುತ್ತಿವೆ. ಇತರೆ ಕ್ಲಬ್‌ಗಳಿಗೆ ಹೋಲಿಸಿದಲ್ಲಿ ಕಡಿಮೆ ಶುಲ್ಕ ಇರುವುದು ಹಾಗೂ ಸಮಾಜ ಸೇವಾ ಕಾರ್ಯಗಳಿಗೆ ಹೆಚ್ಚು ಹಾಗೂ ಮುಕ್ತ ಅವಕಾಶ ಇರುವುದು ಇದಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದರು.ಜಿಲ್ಲಾ ರಾಜ್ಯಪಾಲ ಮಹಾಬಲೇಶ್ವರ ಬೈರಿ ಮುಖ್ಯ ಅತಿಥಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಗೌರವ ಅತಿಥಿಯಾಗಿದ್ದರು. ಆಕಾಶ್ ಬೈರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ರಾಜ್ಯಪಾಲರಾದ ಎಸ್. ವೆಂಕಟೇಶ್, ಸಿರಿ ಬಾಲು, ಎರಡನೇ ಉಪ ರಾಜ್ಯಪಾಲ ನ. ಗಂಗಾಧರಪ್ಪ, ಜಿಲ್ಲಾ ಸಂಪುಟ ಕಾರ್ಯದರ್ಶಿ ಸಿ.ಬಿ. ಶ್ರೀಶೈಲ, ಖಜಾಂಚಿ ಇಂದಿರಾ ವೆಂಕಟೇಶ್, ಮೂರನೇ ಉಪ ರಾಜ್ಯಪಾಲೆ ಶಾಲಿನಿ ನಾಗರಾಜ್, ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣೋಜಿರಾವ್, ರಾಯಭಾರಿ ಶೋಭಾ ಸಿರಿಬಾಲು, ಪ್ರಾದೇಶಿಕ ಅಧ್ಯಕ್ಷರಾದ ಡಿ. ಮಹದೇವ್, ಡಾ.ಕೆ.ಬಿ. ಲಿಂಗರಾಜು, ವಲಯ ಅಧ್ಯಕ್ಷರಾದ ಶ್ರೀನಿವಾಸ್, ವೆಂಕಟೇಶ್, ಕೆ.ಕೆ. ಜಯರಾಂ, ಪದಾಧಿಕಾರಿಗಳಾದ ಮಂಜುನಾಥ್, ಕವಿತಾ ಶಿರೂರ್, ಪನ್ನಗ ವಿಜಯಕುಮಾರ್, ಶ್ರೀಧರಮೂರ್ತಿ, ಪನ್ನಗ ವಿಜಯಕುಮಾರ್, ಲಕ್ಷ್ಮಣ್, ರಾಜು, ನೇತ್ರ ರಾವ್, ಶಾಂತಿ, ಪದ್ಮನಾಭ, ಟಿ. ರಮೇಶ್, ಆನಂದ್, ಜಯಕುಮಾರ್, ಶ್ರುತಿ ಪ್ರಸನ್ನ, ರೇಖಾ, ಮಹದೇವಪ್ಪ, ರಾಕೇಶ್ ಅರಸ್, ಆರ್. ಮನು, ಕೃಪಾ, ಸರಸ್ವತಿ ಹಲಸಗಿ, ತನುಜಾ ಅಶೋಕ್, ಗೌರಿ, ಎಸ್. ಮಾದಪ್ಪ, ಪ್ರಸನ್ನಕುಮಾರ್, ರಾಜೇಶ್ವರಿ, ಕಾವೇರಿ ಪ್ರಕಾಶ್, ಅಂಥೋಣಿ ಪೌಲ್ ರಾಜ್ ಮೊದಲಾದವರು ಇದ್ದರು.