ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಗಾಣಿಗ ಸಮಾಜಕ್ಕೆ ನಾಗರೀಕ ಸೌಲಭ್ಯ ನಿವೇಶನ ಮಂಜೂರು ಮಾಡಿಸಿ ಕೊಡುವಂತೆ ಗಾಣಿಗ ಸಮುದಾಯದ ತಾಲೂಕು ಅಧ್ಯಕ್ಷ ಎ.ಆರ್.ತಿಪೇಸ್ವಾಮಿ ಗಾಣಿಗ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಂಸದ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್‍ರವರಿಗೆ ಮನವಿ ಮಾಡಿದರು.ಗಾಣಿಗ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯಂತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮಾಜವಾಗಿದ್ದು, ಗಾಣಿಗ ಸಮಾಜದ ಸರ್ವಾಂಗೀಣ ಏಳಿಗೆಗೆ ಮತ್ತು ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಆದ್ಯತೆ ನೀಡಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ಬರುವ ಶಂಕರ್ ಲಾಲ್ ಲೇಔಟ್, ಕೆಳಗೋಟೆ ಗ್ರಾಮದ ರಿ.ಸ.ನಂ: 64/1, 2, 3 , 4 ರ ಚಿತ್ರದುರ್ಗ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದಿತವಾಗಿ ವಸತಿ ವಿನ್ಯಾಸದಲ್ಲಿನ ನಾಗರೀಕ ಸೌಲಭ್ಯ ನಿವೇಶನವು ಚಿತ್ರದುರ್ಗ ನಗರಸಭೆ ವಶದಲ್ಲಿರುತ್ತದೆ. ಸದರಿ ನಾಗರೀಕ ಸೌಲಭ್ಯ ನಿವೇಶನವನ್ನಾಗಲಿ ಅಥವಾ ಚಿತ್ರದುರ್ಗ ನಗರದ ಆಯಕಟ್ಟಿನ ಪ್ರದೇಶದಲ್ಲಾಗಲಿ ಅಥವಾ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಯಾವುದಾದರೂ ಖಾಲಿ ನಿವೇಶನವನ್ನು ಗಾಣಿಗ ಸಮಾಜಕ್ಕೆ ಮಂಜೂರು ಮಾಡಿಸಿಕೊಟ್ಟು ಗಾಣಿಗ ಸಮಾಜದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಾಯ ಮಾಡಬೇಕೆಂದು.
ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜ್ಞಾನ ಮೂರ್ತಿ, ಉಪಾಧ್ಯಕ್ಷ ಶಿವಾನಂದ, ಸಹ ಕಾರ್ಯದರ್ಶಿ ಮುರುಗೇಶ್, ಮಂಜುನಾಥ್, ಸಂಚಾಲಕ ವಿರೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ವರದಶಂಕರ್, ಆಶೋಕ್, ನಿರ್ದೇಶಕರಾದ ಬಸಣ್ಣ .ಕೆ.ಟಿ, ವೀರೇಶ್.ಟಿ, ನಂದೀಶ್.ಜಿ.ಟಿ, ಕಿರಣ್‍ಶಂಕರ್, ವೀರಭದ್ರಪ್ಪ.ಎನ್.ಎಂ ಮಂಜುನಾಥ, ಎಸ್ ಮಂಜುನಾಥ್.ಟಿ, ಪ್ರಶಾಂತ್.ಬಿ.ಆರ್, ವಿರೂಪಕ್ತ, ರವಿ, ಬಸವರಾಜು, ಚನ್ನಬಸಪ್ಪ, ಮಂಜುನಾಥ್ ಉಪಸ್ಥಿತರಿದ್ದರು.