ಸಾರಾಂಶ
ವಿಕಲಚೇತನರಿಗೆ ಅವಕಾಶಗಳನ್ನು ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು. ವಿಕಲಚೇತನರು ಅಂಗಾಂಗಳ ವಿಫಲತೆಯಿಂದ ಬಳಲುತ್ತಿದ್ದಾಯೇ ಹೊರತು ಅವರಲ್ಲಿ ವಿಚಾರ ಶಕ್ತಿ, ಜ್ಞಾನ, ವಿದ್ಯೆ ಇತ್ಯಾಧಿಗಳಿಗೆ ಯಾವುದೇ ಕೊರತೆ ಇಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಅವರನ್ನು ಮುಖ್ಯವಾಹಿನಿಗೆ ತರಬೇಕು.
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ವಿಶೇಷಚೇತನರ ಬಗ್ಗೆ ಅನುಕಂಪ ತೋರುವ ಬದಲಿಗೆ ಅವರಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಮಂಜುನಾಥಾಚಾರಿ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ಮತ್ತು ವಿಕಲಚೇತನರ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷಚೇತನರಿಗೆ ಬೆಂಬಲ ಮಾಡುವಂತಹ ಕೆಲಸಕ್ಕೆ ಮುಂದಾಗಬೇಕು ಎಂದರು.
ವಿಶೇಷಚೇತನರಿಗೆ ಶಕ್ತಿ ತುಂಬಿದೇವರು ನಮಗೆ ಕೈ ಕಾಲು, ಶಕ್ತಿಯನ್ನು ಕೊಟ್ಟಿದ್ದಾನೆ. ಶಕ್ತಿಯ ನೆರವು ಇರುವವರು ಆ ಶಕ್ತಿಯನ್ನು ವಿಶೇಷಚೇತನರಿಗೆ ತುಂಬುವಂತಹ ಕೆಲಸ ಮಾಡಬೇಕು. ಮನುಷ್ಯ ಸಹಕಾರ ಮಾಡಿ ಜೀವನ ಮಾಡಬೇಕು ದೇವರು ಎಲ್ಲವನ್ನು ಕೊಟ್ಟಿದ್ದಾನೆ ನಾನು ಒಬ್ಬನೇ ಬದುಕಬೇಕು ಎನ್ನುವುದನ್ನು ಮನಸಿನಿಂದ ತೊಲಗಿಸಿ ಬಾಳಬೇಕೆಂದರು.
ವಿಕಲಚೇತನರಿಗೆ ಬೇಕಾಗಿರುವುದು ಅನುಕಂಪವಲ್ಲ ಅವರಿಗೆ ಬೇಕಾಗಿರುವುದು ಅವಕಾಶಗಳು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ವಿಷೇಶ ಸ್ಥಾನ ಮಾನಗಳನ್ನು ಮುಂಚೂಣಿಯಲ್ಲಿ ಇಡಬೇಕಾದ ಅಗತ್ಯವಿದೆ. ವಿಕಲಚೇತನರಿಗೆ ಅವಕಾಶಗಳನ್ನು ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು. ವಿಕಲಚೇತನರು ಅಂಗಾಂಗಳ ವಿಫಲತೆಯಿಂದ ಬಳಲುತ್ತಿದ್ದಾಯೇ ಹೊರತು ಅವರಲ್ಲಿ ವಿಚಾರ ಶಕ್ತಿ, ಜ್ಞಾನ, ವಿದ್ಯೆ ಇತ್ಯಾಧಿಗಳಿಗೆ ಯಾವುದೇ ಕೊರತೆ ಇಲ್ಲ. ಅವರಿಗೆ ಅಗತ್ಯ ಸೌಲಭ್ಯಗಳನ್ನು ಹಾಗೂ ಅವಕಾಶಗಳನ್ನು ಕಲ್ಪಿಸಿದರೆ ಅವರು ನಮಗಿಂತ ಪ್ರಭಲರಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಏಡ್ಸ್ ಕುರಿತು ಅರಿವು ಮೂಡಿಸಿ
ಏಡ್ಸ್ ಅತ್ಯಂತ ವಿನಾಶಕಾರಿ ಕಾಯಿಲೆಯಾಗಿದ್ದು ಈ ಸೊಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ಎಡ್ಸ್ ಬಗ್ಗೆ ಜನರು ಭಯಪಡಬೇಕಾದ ಅಗತ್ಯವಿಲ್ಲ ಆದರೆ ಎಚ್ಚರವಹಿಸಬೇಕು, ಜಾಗೃತರಾಗಿರಬೇಕು ಎಂದ ಅವರು ಸೊಂಕಿತರನ್ನು ಯಾವುದೇ ಕಾರಣಕ್ಕೂ ಕೀಳರಿಮೆಯಿಂದ ಕಾಣಬೇಡಿ ಅವರಿಗೆ ಬೆಂಬಲವಾಗಿ ನಿಲ್ಲುವಂತಾಗಬೇಕೆಂದರು.ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಟಿ.ಎಚ್,ಓ ಡಾ.ಸತ್ಯನಾರಾಯಣರೆಡ್ಡಿ, ಸಿಡಿಪಿ ರಾಮಚಂದ್ರ, ಪ್ರಾಂಶುಪಾಲ ನಂಜಿರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಕಾರ್ಯದರ್ಶಿ ಪ್ರಸನ್ನಕುಮಾರ್, ವಕೀಲರಾದ ವೆಂಕಟೇಶ್ ಮತ್ತಿತರರು ಇದ್ದರು.