ಎಲ್ಲ ರಸ್ತೆಗಳೂ ಬಹುತೇಕ ಅಭಿವೃದ್ಧಿ

| Published : Sep 29 2025, 01:03 AM IST

ಸಾರಾಂಶ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ದಾವಣಗೆರೆ ನಗರ ಅಷ್ಟೇ ಅಲ್ಲ, ಜಿಲ್ಲೆಯ ಬಹುತೇಕ ರಸ್ತೆಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

- ಸಿಮೆಂಟ್‌ ರಸ್ತೆಗಳ ಕಾರಣದಿಂದ ಅತಿವೃಷ್ಟಿಯಿದ್ದರೂ ರಸ್ತೆಗಳು ಹಾಳಾಗಿಲ್ಲ: ಸಚಿವ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ದಾವಣಗೆರೆ ನಗರ ಅಷ್ಟೇ ಅಲ್ಲ, ಜಿಲ್ಲೆಯ ಬಹುತೇಕ ರಸ್ತೆಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ದೇಶದ ಬಹುತೇಕ ಕಡೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ದಾವಣಗೆರೆ ನಗರ ಮತ್ತು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಿಮೆಂಟ್ ರಸ್ತೆಗಳು ಇವೆ. ಆದಕಾರಣ ಅಷ್ಟೊಂದು ರಸ್ತೆಗಳು ಹಾಳಾಗಿಲ್ಲ. ರಸ್ತೆಗೆ ನೀರು ನುಗ್ಗದಂತೆ ಚರಂಡಿ ಮತ್ತು ರಾಜಕಾಲುವೆಗಳನ್ನು ಆಯಾ ಕಾಲಕ್ಕೆ ಅಭಿವೃದ್ಧಿಪಡಿಸಿದ್ದರಿಂದ ಇಂದು ಎಲ್ಲೂ ಮಳೆನೀರು ನಿಲ್ಲದೇ ಸರಾಗಿವಾಗಿ ಹರಿದಿದೆ. ಆದ್ದರಿಂದ ರಸ್ತೆಗಳಿಗೆ ತೊಂದರೆ ಆಗಿಲ್ಲ ಎಂದಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಜಾದ್ ನಗರ ಮುಖ್ಯ ರಸ್ತೆ, ಅಕ್ತರ್ ರಜಾ ಸರ್ಕಲ್, ಮೆಹಬೂಬ್ ನಗರ, ಎಚ್.ಕೆ.ಜಿ.ಎನ್. ಶಾದಿ ಮಹಲ್, ಬಾಷಾ ನಗರ, ಮಿಲ್ಲತ್ ಶಾಲೆ, ಶಿವನಗರ ಮುಖ್ಯ, ರಸ್ತೆ, 6ನೇ ಕ್ರಾಸ್, ಚಾರ್ಲಿ ಆಟೋ ಸ್ಟಾಂಡ್, ಜಗಳೂರು ಬಸ್ ಸ್ಟ್ಯಾಂಡ್, ಆಜಾದ್ ನಗರ 2ನೇ ಮೇನ್, ಮಾಗನಹಳ್ಳಿ ಮುಖ್ಯ ರಸ್ತೆ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾರದಾಂಬ ಸರ್ಕಲ್, ನಿಜಲಿಂಗಪ್ಪ ಬಡಾವಣೆ 1ನೇ ಮುಖ್ಯ ರಸ್ತೆ, ಕ್ಲಾಕ್ ಟವರ್ ಹತ್ತಿರ, ರಿಂಗ್ ರಸ್ತೆ, ಲಕ್ಷ್ಮೀ ಫ್ಲೋರ್ ಮಿಲ್ ಹತ್ತಿರ, ಲಾಯರ್ ರಸ್ತೆ, ಡಿ.ಸಿ.ಎಂ. ಲೇಔಟ್, ಕೆ.ಟಿ.ಜೆ. ನಗರ 3ನೇ ಮೇನ್, ಅವರಗೆರೆ ಮುಖ್ಯ ರಸ್ತೆಯಲ್ಲಿ. ಡಿ.ಸಿ.ಎಂ.ಯಿಂದ ಶಕ್ತಿ ನಗರಕ್ಕೆ ಹೋಗುವ ರಸ್ತೆ. ನಿಟುವಳ್ಳಿ ಮುಖ್ಯ ರಸ್ತೆ, ಸರಸ್ವತಿ ನಗರ ಚಿಕ್ಕಮಣಿ ಸರ್ಕಲ್ ಹತ್ತಿರ, ಸರಸ್ವತಿ ನಗರ 2ನೇ ಹಂತ 4 ಮತ್ತು 5ನೇ ಕ್ರಾಸ್, ಐ.ಟಿ. ಕಾಲೇಜ್ ರಿಂಗ್ ರಸ್ತೆ ಹತ್ತಿರ, ಐ.ಟಿ. ಕಾಲೇಜ್ ಸಿಗ್ನಲ್ ಹತ್ತಿರ ಮತ್ತು ಕಾಫಿ ಡೇ ಸರ್ಕಲ್ ಹತ್ತಿರ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಈಗಾಗಲೇ ಕಾರ್ಯೋಮುಖವಾಗಿದೆ. ಬಹುತೇಕ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಪ್ರಮುಖವಾಗಿ ಹದಡಿ ರಸ್ತೆ ಕಾಂಕ್ರೀಟಿಕರಣಕ್ಕೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಯೂ ಭರದಿಂದ ಸಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

- - -

(ಟಾಪ್‌ ಕೋಟ್‌) ಬಿಜೆಪಿಗರಿಗೇ ದಾವಣಗೆರೆ ಜನತೆಗೆ ಒಳಿತನ್ನು ಮಾಡಬೇಕೆಂಬ ಇಚ್ಛೆ ಇದ್ದಲ್ಲಿ ಉತ್ತಮ ಕಾಮಗಾರಿ ನಡೆಸಲು ಸಹಕರಿಸಬೇಕು. ದಾವಣಗೆರೆ ಮೊದಲಿನಿಂದಲೂ ಶಾಂತಿ, ಸೌಹಾರ್ದತೆಯಿಂದ ಕೂಡಿದ ನಗರವಾಗಿದೆ. ಅದನ್ನು ಉಳಿಸುವ ಕೆಲಸ ಮಾಡಿ. ಜಾತಿ-ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ.

- ಎಸ್‌.ಎಸ್‌.ಮಲ್ಲಿಕಾರ್ಜುನ, ಜಿಲ್ಲಾ ಸಚಿವ.

- - -

-28ಕೆಡಿವಿಜಿ48: ಎಸ್.ಎಸ್.ಮಲ್ಲಿಕಾರ್ಜುನ

-28ಕೆಡಿವಿಜಿ49, 50: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ರಸ್ತೆ ಕಾಮಗಾರಿ ನಡೆಯುತ್ತಿರುವುದು.