ಮಾರ್ಚ್‌ನಲ್ಲಿ ಅಳ್ನಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Jan 28 2025, 12:47 AM IST

ಮಾರ್ಚ್‌ನಲ್ಲಿ ಅಳ್ನಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಭಾಷಿಕರನ್ನು ಒಳಗೊಂಡಿರುವ ಅಳ್ನಾವರ ತಾಲೂಕು ಸಾಮರಸ್ಯಕ್ಕೆ ಹೆಸರಾಗಿದ್ದು, ನಾಡು-ನುಡಿಯ ಬಗ್ಗೆ ಸ್ಥಳೀಯರಲ್ಲಿ ಆಸಕ್ತಿ ಇದೆ. ನಿರಂತರವಾಗಿ ಕನ್ನಡ ಪರ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ.

ಅಳ್ನಾವರ:

ತಾಲೂಕಿನಲ್ಲಿ ಕನ್ನಡ ಭಾಷೆ, ನೆಲ-ಜಲದ ಸಂರಕ್ಷಣೆ, ಭಾಷಾಭಿಮಾನ ಹೆಚ್ಚಳಕ್ಕೆ ಪೂರಕವಾಗಿ ಮಾರ್ಚ್‌ ತಿಂಗಳಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಪದಾಧಿಕಾರಿಗಳ ಜತೆಗೆ ತಾಲೂಕು ಸಮ್ಮೇಳನದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಮಾತನಾಡಿದರು.

ವಿವಿಧ ಭಾಷಿಕರನ್ನು ಒಳಗೊಂಡಿರುವ ಅಳ್ನಾವರ ತಾಲೂಕು ಸಾಮರಸ್ಯಕ್ಕೆ ಹೆಸರಾಗಿದ್ದು, ನಾಡು-ನುಡಿಯ ಬಗ್ಗೆ ಸ್ಥಳೀಯರಲ್ಲಿ ಆಸಕ್ತಿ ಇದೆ. ನಿರಂತರವಾಗಿ ಕನ್ನಡ ಪರ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಸ್ಥಳೀಯ ಶಾಸಕರು, ಸಚಿವರನ್ನೊಳಗೊಂಡ ಸಮ್ಮೇಳನದ ಸಮಿತಿ ರಚಿಸಿಕೊಂಡು ಅಚ್ಚುಕಟ್ಟಾಗಿ ಮತ್ತು ಅದ್ಧೂರಿಯಾಗಿ ಸಮ್ಮೇಳನ ನಡೆಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಹೇಳಿದ ಅವರು, ಸರ್ಕಾರದಿಂದ ಯಾವುದೇ ಅನುದಾನ ಲಭ್ಯವಿಲ್ಲದ ಕಾರಣ ಸ್ಥಳೀಯವಾಗಿ ಸಂಪನ್ಮೂಲ ಕ್ರೋಡೀಕರಿಸಿ ಸಮ್ಮೇಳನ ನಡೆಸಲು ತಾಲೂಕು ಘಟಕದವರು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲರ ಸಹಾಯ-ಸಹಕಾರದಲ್ಲಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಪ್ರೊ. ಕೆ.ಎಸ್. ದೊಡಮನಿ, ಶಾಂತವೀರ ಬೇಟಗೇರಿ, ತಾಲೂಕಾಧ್ಯಕ್ಷ ಗುರುರಾಜ ಸಬನೀಸ, ನಿಕಟಪೂರ್ವ ಅಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ, ತಾಲೂಕು ಪದಾಧಿಕಾರಿಗಳಾದ ಸುರೇಂದ್ರ ಕಡಕೋಳ, ಪ್ರವೀಣ ಪವಾರ, ವೈ.ವಿ. ಶಿಂಪಿ, ಮಂಜುಳಾ ಅಂಬಡಗಟ್ಟಿ, ಮಾರ್ತಾಂಡಪ್ಪ ಕತ್ತಿ, ಶಿವಾಜಿ ಡೊಳ್ಳಿನ, ತುಕಾರಾಮ ಪಾಟೀಲ ಇನ್ನೀತರರು ಪಾಲ್ಗೊಂಡಿದ್ದರು.