ದೇಶದ ಅಭಿವೃದ್ಧಿಗೆ ಶಿಕ್ಷಣದ ಜೊತೆಗೆ ಗುರು ಮಾರ್ಗದರ್ಶನ ಅನಿವಾರ್ಯ: ರಮೇಶ ಬಂಡಿಸಿದ್ದೇಗೌಡ

| Published : Sep 25 2024, 12:50 AM IST / Updated: Sep 25 2024, 12:51 AM IST

ದೇಶದ ಅಭಿವೃದ್ಧಿಗೆ ಶಿಕ್ಷಣದ ಜೊತೆಗೆ ಗುರು ಮಾರ್ಗದರ್ಶನ ಅನಿವಾರ್ಯ: ರಮೇಶ ಬಂಡಿಸಿದ್ದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಪರಿಕಲ್ಪನೆ ಶಿಕ್ಷಣದ ವ್ಯವಸ್ಥೆ ಮೇಲೆ ನಿಂತಿದೆ. ಮಕ್ಕಳ ಭವಿಷ್ಯವೂ ಸಹ ಶಿಕ್ಷಕರ ಮೇಲಿದೆ. ಗುರು ಮಾರ್ಗದರ್ಶನ ಆರೋಗ್ಯಕರ ಸಮಾಜ ನಿರ್ಮಾಣ ಶಿಕ್ಷಕರ ನಿಸ್ವಾರ್ಥ ಸೇವೆ ಅಗತ್ಯ. ದೇಶದ ಅಭಿವೃದ್ಧಿಗೆ ಶಿಕ್ಷಣ ಅಗತ್ಯದ ಜೊತೆಗೆ ಶಿಕ್ಷಕರೇ ಬೆನ್ನೆಲುಬಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದೇಶದ ಅಭಿವೃದ್ಧಿಗೆ ಶಿಕ್ಷಣ ಅಗತ್ಯದ ಜೊತೆಗೆ ಶಿಕ್ಷಕರೇ ಬೆನ್ನೆಲುಬಾಗಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಗುರು ಮಾರ್ಗದರ್ಶನ ಅನಿವಾರ್ಯವಾಗಿದೆ ಎಂದು ಶಾಸಕ, ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಅಂಗವಾಗಿ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ದೇಶದ ಪರಿಕಲ್ಪನೆ ಶಿಕ್ಷಣದ ವ್ಯವಸ್ಥೆ ಮೇಲೆ ನಿಂತಿದೆ. ಮಕ್ಕಳ ಭವಿಷ್ಯವೂ ಸಹ ಶಿಕ್ಷಕರ ಮೇಲಿದೆ. ಗುರು ಮಾರ್ಗದರ್ಶನ ಆರೋಗ್ಯಕರ ಸಮಾಜ ನಿರ್ಮಾಣ ಶಿಕ್ಷಕರ ನಿಸ್ವಾರ್ಥ ಸೇವೆ ಸ್ಮರಿಸಿದರು.

ಸಾಹಿತಿ ಹಾಗೂ ಶಿಕ್ಷಕ ಬಿ.ಆರ್.ಲಕ್ಷ್ಮಣ್ ರಾವ್ ಮಾತನಾಡಿ, ವಿಚಾರವಂತಿಕೆ ಇಲ್ಲದ ಬದುಕು ಅಪಾಯಕಾರಿ. ನಾಗರಿಕತೆ ಹಾಗೂ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಹಾಗೂ ವಿಮರ್ಶೆ ಮಾಡುವ ಮನೋಭಾವವನ್ನು ಬೆಳೆಸುವಂತೆ ಸಲಹೆ ನೀಡಿದರು.

ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ಆಶೀರ್ವಚನ ನೀಡಿ, ಶಿಕ್ಷಣ ನೀಡುವ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವ ಸಾಮರ್ಥ್ಯ ಶಿಕ್ಷಕರಿಗಿದೆ. ದೇಶ ಕಟ್ಟುವಲ್ಲಿ ಶಿಕ್ಷಕರ ಸೇವೆ ಅಮೂಲ್ಯವಾದದ್ದು ಎಂದರು.

ಶಿಕ್ಷಕ ವೃತ್ತಿಯಿಂದ ನಿವೃತ್ತಿಗೊಂಡು ಚ.ನಾರಾಯಣಸ್ವಾಮಿ, ನೂರ್ ಖುರೇಶಿ, ಅಯೂಬ್ ಪಾಷ, ರವಿಕುಮಾರ್ ಸ್ವಾಮಿ, ಸುವರ್ಣ ಸೇರಿದಂತೆ ಪದವಿ ಪೂರ್ವ ತರಗತಿಯ 3, ಪ್ರೌಢಶಾಲಾ ವಿಭಾಗದ 8 ಹಾಗೂ ಪ್ರಾಥಮಿಕ ಶಾಲಾ ವಿಭಾಗದ 11 ಶಿಕ್ಷಕರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.

ಈ ವೇಳೆ ಮನ್ಮುಲ್ ಅಧ್ಯಕ್ಷ ಬಿ.ಬೋರೇಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್, ಬಿಆರ್‌ಸಿ ಡಾ, ಪ್ರಭ ನಂಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಚನ್ನಕೃಷ್ಣ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ. ರಮೇಶ್, ಸಂಘಟನಾ ಕಾರ್ಯದರ್ಶಿ ನಾಗರಾಜ್, ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಸೀತಾರಾಮು, ಕಸಾಪ ಅಧ್ಯಕ್ಷ ಎಂ.ಬಿ.ಕುಮಾರ್, ಕಜಾಪ ಅಧ್ಯಕ್ಷ ಸಿದ್ದಲಿಂಗು, ಇಸಿಒ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಡಾ.ಪ್ರತಿಮಾ, ಆಯುಬ್ ಖಾನ್ ಸೇರಿದಂತೆ ಇತರರು ಹಾಜರಿದ್ದರು.