ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲಿನ 2025-26ನೇ ಸಾಲಿನ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಠ್ಯ ಶಿಕ್ಷಣದೊಂದಿಗೆ ಶಿಸ್ತು ಸಂಯಮ ಆತ್ಮವಿಶ್ವಾಸ ನಾಯಕತ್ವದ ಗುಣಗಳನ್ನು ಬೆಳೆಸುವ ಪ್ರಮುಖ ಪಾತ್ರ ವಹಿಸುವಲ್ಲಿ ಶಿಕ್ಷಕರು ಶ್ರಮ ವಹಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಮ್. ಎ. ಗೋಪಾಲಸ್ವಾಮಿ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಾದರಿ ಶಾಲೆಯಾಗಿ ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲ್ ಬೆಳೆಯುತ್ತಿದೆ ಎಂದರು. ಶಾಲೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಪೋಷಕರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಡೆದು ಹೋಬಳಿಯಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಹಾಗೆಯೇ ಸಾಂಸ್ಕೃತಿಕ ಚಟುವಟಿಕೆ ಸಾಹಿತ್ಯ ಕ್ರೀಡೆಯು ಅತ್ಯಗತ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿಯ ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲಿನ 2025-26ನೇ ಸಾಲಿನ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಠ್ಯ ಶಿಕ್ಷಣದೊಂದಿಗೆ ಶಿಸ್ತು ಸಂಯಮ ಆತ್ಮವಿಶ್ವಾಸ ನಾಯಕತ್ವದ ಗುಣಗಳನ್ನು ಬೆಳೆಸುವ ಪ್ರಮುಖ ಪಾತ್ರ ವಹಿಸುವಲ್ಲಿ ಶಿಕ್ಷಕರು ಶ್ರಮ ವಹಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಮ್. ಎ. ಗೋಪಾಲಸ್ವಾಮಿ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಾದರಿ ಶಾಲೆಯಾಗಿ ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲ್ ಬೆಳೆಯುತ್ತಿದೆ ಎಂದರು. ಶಾಲೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಪೋಷಕರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಡೆದು ಹೋಬಳಿಯಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಯಾಗಿದೆ ಎಂದರು. ಪದ್ಮಶ್ರೀ ಪುರಸ್ಕೃತೆ ಡಾ. ಬಿ ಮಂಜಮ್ಮ ಜೋಗತಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ನೋಡುವ ಹಾಗೂ ಬಳಸುವ ಬಗ್ಗೆ ಎಚ್ಚರ ವಹಿಸಬೇಕು. ಬಿಡುವಿನ ವೇಳೆ ರಾಮಾಯಣ ಮಹಾಭಾರತ ಕಥೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ತಂದೆತಾಯಿ, ಗುರುಗಳು ಹೇಳಿದ ಮಾತನ್ನು ಪಾಲನೆ ಮಾಡುವ ಶಿಸ್ತು ಸಂಯಮ ಕಲಿಸಬೇಕು. ಟಿವಿಯಲ್ಲಿ ಬರುವ ದಾರವಾಹಿಗಳನ್ನು ಕಡಿಮೆ ನೋಡಿ ಉಳಿದ ಸಮಯದಲ್ಲಿ ಮಕ್ಕಳೊಂದಿಗೆ ಸ್ವಲ್ಪ ಕಾಲ ಶಾಲೆಯ ಓದಿನ ಪಠ್ಯ ಪುಸ್ತಕಗಳ ಬಗ್ಗೆ ಗಮನಹರಿಸುವುದು ಸೂಕ್ತ ಎಂದು ತಿಳಿಸಿದರು.ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ. ಎನ್. ಅನಿಲ್ ಮಾತನಾಡಿ, ತಂದೆತಾಯಂದಿರು ಟೀವಿಗಿಂತ ಹೆಚ್ಚು ತಮ್ಮ ಮಕ್ಕಳ ಜೊತೆ ಶಾಲೆಯ ಓದಿನ ಪಠ್ಯ ಪುಸ್ತಕಗಳ ಬಗ್ಗೆ ಗಮನಹರಿಸಿ ಓದಲು ಪ್ರೋತ್ಸಾಹಿಸಿ ಎಂದು ತಿಳಿ ಹೇಳಿದರು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಎನ್. ದೀಪ, ಮೆಡಿಕಲ್ ಆಫೀಸರ್ ಡಾ. ಎಚ್. ಬಿ. ನಾಗೇಶ್, ಕೋಟೆಮನೆ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್ ಗೌಡ, ಕೋಟೆಮನೆ ಶಾಲೆಯ ಕಾರ್ಯದರ್ಶಿ ಎಚ್ ಜಿ. ಮಧುಕುಮಾರ್, ಮುಖ್ಯ ಶಿಕ್ಷಕಿ ಪವಿತ್ರ ಮಧುಕುಮಾರ್, ಶಿಕ್ಷಣ ಸಂಯೋಜಕ ಕರಿಯಪ್ಪ, ಸಿ.ಆರ್‌. ಪಿ. ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಆರ್‌. ದೊರೆಸ್ವಾಮಿ, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಕೃಷಿ ಪತ್ತಿನ ನಿರ್ದೇಶಕ ಸೋಮನಹಳ್ಳಿ ತಿಮ್ಮೇಗೌಡ, ಇತರರು ಹಾಜರಿದ್ದರು.