ಸುವರ್ಣ ಮಾಲೆಗಿಂತ ವರ್ಣಮಾಲೆ ಶ್ರೇಷ್ಠ: ಮಹಾಂತ ಶ್ರೀ

| Published : Apr 30 2024, 02:12 AM IST

ಸಾರಾಂಶ

ದೇವರಹಿಪ್ಪರಗಿ: ಗುರು ಮತ್ತು ಶಿಷ್ಯರದ್ದು ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರಮಠದ ವಾಮದೇವ ಮಹಾಂತ ಸ್ವಾಮೀಜಿ ಹೇಳಿದರು.

ದೇವರಹಿಪ್ಪರಗಿ: ಗುರು ಮತ್ತು ಶಿಷ್ಯರದ್ದು ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರಮಠದ ವಾಮದೇವ ಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಮಲ್ಲಯ್ಯ ದೇವಸ್ಥಾನ ಆವರಣದಲ್ಲಿ ಜರುಗಿದ ಬಿಎಲ್‌ಡಿಇ ಸಂಸ್ಥೆಯ ದಿ.ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ೧೯೯೦-೯೧ ನೇ ಸಾಲಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಸುವರ್ಣಮಾಲೆ ಧರಿಸಿದವರಿಗಿಂತ ವರ್ಣಮಾಲೆ ಧರಿಸಿದವರು ಶ್ರೇಷ್ಠರು. ಶಿಕ್ಷಣವೇ ಶ್ರೇಷ್ಠ ಸಂಪತ್ತು ಜೊತೆಗೆ ಸ್ನೇಹಕ್ಕಿಂತ ಹಿರಿದಾದದ್ದು ಯಾವುದು ಇಲ್ಲ ಎಂದರು.ಬೆಂಗಳೂರು ವಿಭೂತಿಪುರ ವೀರಸಿಂಹಾಸನ ಸಂಸ್ಥಾನಮಠದ ಮಹಾಂತಲಿಂಗಶ್ರೀಗಳು ಮಾತನಾಡಿ, ಅಕ್ಷರ ಜ್ಞಾನ ನೀಡಿದ ಗುರುಗಳ ಉಪಕಾರವನ್ನು ಸ್ಮರಿಸುವ ಮೂಲಕ ಗುರುವಂದನೆ ನಡೆಸುತ್ತಿರುವುದು ಶ್ಲಾಘನೀಯ. ಇಂದು ನಾವೆಲ್ಲ ಏನಾಗಿದ್ದೇವೆಯೋ ಅದಕ್ಕೆಲ್ಲ ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕ ವರ್ಗ. ಇವರಿಂದ ಶಾಲೆಯ ಪಾಠ ಮಾತ್ರವಲ್ಲ, ಭವಿಷ್ಯದ ಬದುಕಿನ ಪಾಠವು ಭೋದಿಸಲ್ಪಡುತ್ತದೆ ಎಂದು ಅಭಿಪ್ರಾಯಪಟ್ಟರು.ನಿವೃತ್ತ ಪ್ರಾಚಾರ್ಯ ಎಸ್.ಬಿ.ಮಿರ್ಜಿ, ತಹಸೀಲ್ದಾರ್‌ ಪ್ರಕಾಶ ಸಿಂದಗಿ, ಅಂಕಣಕಾರ ಮಂಜುನಾಥ ಜುನಗೊಂಡ, ಶಿಕ್ಷಕ ಎಸ್.ಎಂ.ಶೆಟ್ಟೆಣ್ಣವರ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಎ.ಆರ್.ಭತಗುಣಕಿ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರಾದ ಬಿ.ಸಿ.ಹಿರೇಮಠ, ಬಿ.ಜಿ.ಅರಳಮಟ್ಟಿ, ಎಸ್.ಎಸ್.ರಾಮಗೊಂಡ, ವಿ.ಎಮ್.ಕೌಲಗಿ, ಬ್ರಹ್ಮಾನಂದ ಪಾಟೀಲ, ಸುಶೀಲಾಬಾಯಿ ಹದನೂರ, ಶಕುಂತಲಾ ಭಂಡಕ್ಕ, ಎಸ್.ಎಸ್.ಹುರಕಡ್ಲಿ, ಮಲ್ಲಮ್ಮ ನಾಯ್ಕೋಡಿ, ಅಶೋಕ ಗಚ್ಚಿನಮಠ, ಜೆ.ಆರ್.ದಾನಗೊಂಡ, ಶಾಂತಪ್ಪ ದೇಸಾಯಿ, ಎಸ್.ಎಂ.ಬಟವಾಲ್ ಹಾಗೂ ಜಿ.ಜಿ.ಜುಮನಾಳರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಅಗಲಿದ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವಾನಂದ ಅಸಂತಾಪೂರ, ಸುರೇಶ ನಾಯಿಕ್, ವಸಂತ ನಾಡಗೌಡ, ಸಂಜೀವ ವಗ್ಗರ, ರಾಜು ನಾಯ್ಕರ್, ರಮೇಶ ಮಣೂರ, ಬಸನಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಭಾರತಿ ನಾಡಗೌಡ, ಸುಜಾತಾ ಈಳಗೇರ, ಕಾಶೀಬಾಯಿ ಪಾಟೀಲ, ಕಾವೇರಿ ಬಡಿಗೇರ, ನಾಗಮ್ಮ ಕೋರಿ, ಸುನೀತಾ ನಾಡಗೌಡ ಸೇರಿದಂತೆ ಇತರರು ಇದ್ದರು.