ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮಳೆ ವಿಳಂಬ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರೈತರಿಗೆ ಕೃಷಿ ಇಲಾಖೆ, ಜಿಪಂ ಹಾಗೂ ಕೃಷಿ ಸಮಾಜ ಅಭಿವೃದ್ಧಿ ಸಂಸ್ಥೆ ಸಂಯುಕ್ತವಾಗಿ ಹವಾಮಾನ ವೈಪರೀತ್ಯಕ್ಕೆ ಪರ್ಯಾಯ ಬೆಳೆ ಯೋಜನೆ ಜಾರಿಗೆ ತಂದಿದೆ.ಮುಂಗಾರು ಮತ್ತು ಪೂರ್ವ ಮುಂಗಾರಿನಲ್ಲಿ ಸುಮಾರು ೯೫ ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರಿಗೆ ಸೂಚಿಸಲಾಗಿದ್ದು, ಮಳೆ ಆಧರಿತ ಮತ್ತು ನೀರಾವರಿ ಪ್ರದೇಶಗಳೆರಡಕ್ಕೂ ಪ್ರತ್ಯೇಕ ಬೆಳೆ ಕ್ರಮ ಸೂಚಿಸಲಾಗಿದೆ.ಮುಖ್ಯ ಸಲಹೆ:ಮಳೆ ಆಧರಿತ ಪ್ರದೇಶಗಳಿಗೆ: ರಾಗಿ-MAH 14-5, MAH 14-138, ಸಜ್ಜೆ-HA-5, HA-3, HA-4, ಅಲಸಂದೆ - KBC-12, KBC-9 ಜೊತೆಗೆ ML-365, ML-322, KMR-204, KMR-340, KMR-630, KMR-316 ಸೇರಿದಂತೆ ವಿವಿಧ ಹವಾಮಾನ ನಿರೋಧಕ ತಳಿಗಳಾಗಿವೆ.ಬೀಜ ಸಂಸ್ಕರಣೆ:ಬಿತ್ತನೆಗೆ ಮುನ್ನ ಬೀಜ ಗಟ್ಟಿಗೊಳಿಸುವಿಕೆ ಕಡ್ಡಾಯವಾಗಿದ್ದು, 1 ಕೆಜಿ ಬೀಜಕ್ಕೆ 20 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ಅಥವಾ 10 ಗ್ರಾಂ ಪೊಟ್ಯಾಷಿಯಂ ಕ್ಲೋರೈಡ್ ದ್ರಾವಣದಲ್ಲಿ 6 ಗಂಟೆ ನೆನೆಸಿ, ನೆರಳಿನಲ್ಲಿ ಒಣಗಿಸಿ ಬಿತ್ತಬೇಕು. ಇದರಿಂದ ಮೊಳಕೆಯೊಡೆಯುವಿಕೆ ಮತ್ತು ಬರ ಸಹಿಷ್ಣುತೆ ಹೆಚ್ಚುತ್ತದೆ.ಬರ ನಿರ್ವಹಣೆ:15-20 ದಿನ ಮಳೆ ಬಾರದಿದ್ದಲ್ಲಿ ಡ್ರೈ ಸ್ಪೆಲ್ ನಿರ್ವಹಣೆಗೆ ಸಾಲಿನಲ್ಲಿ ಮಲ್ಚಿಂಗ್, ಅಂತರ ಕಳೆ ತೆಗೆಯುವುದು ಹಾಗೂ ರಕ್ಷಣಾತ್ಮಕ ನೀರಾವರಿಗೆ ಸಲಹೆಯಾಗಿದೆ.ನೀರಾವರಿ ಪ್ರದೇಶಗಳಿಗೆ:

ಅಧಿಕ ನೀರು ಬೇಡುವ ಭತ್ತ ಮತ್ತು ಕಬ್ಬಿನ ಬದಲು ಕಡಿಮೆ ನೀರಿನಲ್ಲಿ ಬೆಳೆಯುವ ರಾಗಿ, ಸಜ್ಜೆ, ಮೆಕ್ಕೆಜೋಳ, ಉದ್ದು, ಹೆಸರು, ಮಿನುಗಡ್ಲೆ ಮುಂತಾದ ಬೆಳೆಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ.ಬೆಳೆ ಕ್ಯಾಲೆಂಡರ್‌:

ರಾಗಿ, ಸಜ್ಜೆ, ಜೋಳ, ತೊಗರಿ, ಉದ್ದು, ಹೆಸರು ಬೆಳೆಗಳಿಗೆ ಪ್ರತ್ಯೇಕ ಸಮಯ ಸೂಚಿಸಲಾಗಿದೆ. ರೈತರಿಗೆ ಹೆಚ್ಚಿನ ಮಾಹಿತಿ ಮತ್ತು ತಾಂತ್ರಿಕ ಮಾರ್ಗದರ್ಶನಕ್ಕಾಗಿ ತಮ್ಮ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.ಗುಂಡ್ಲುಪೇಟೆ (8277930774 ), ಕೃಷಿ ವಿಜ್ಞಾನ ಕೇಂದ್ರ, ಹರದನಹಳ್ಳಿ ಹಾಗೂ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಮಂಡ್ಯ ತಾಂತ್ರಿಕ ಬೆಂಬಲ ನೀಡಲಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಹವಾಮಾನ ವೈಪರೀತ್ಯದ ಸವಾಲನ್ನು ಅವಕಾಶವಾಗಿ ಪರಿವರ್ತಿಸಿ, ಪರ್ಯಾಯ ಬೆಳೆಗಳ ಮೂಲಕ ಇಳುವರಿ ಮತ್ತು ಆದಾಯವನ್ನು ಕಾಪಾಡಿಕೊಳ್ಳಲು ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ಸಹಾಯಕ ನಿರ್ದೇಶಕ ಶಶಿಧರ್‌ ಮನವಿ ಮಾಡಿದೆ.