ಆಳ್ವಾಸ್ ರೀಚ್ -2025 ರಜತ ಮಹೋತ್ಸವ: ರಾಷ್ಟ್ರೀಯ ವಿಚಾರಸಂಕಿರಣ

| Published : Apr 30 2025, 12:34 AM IST

ಆಳ್ವಾಸ್ ರೀಚ್ -2025 ರಜತ ಮಹೋತ್ಸವ: ರಾಷ್ಟ್ರೀಯ ವಿಚಾರಸಂಕಿರಣ
Share this Article
  • FB
  • TW
  • Linkdin
  • Email

ಸಾರಾಂಶ

ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಸಮಾಜ ಕಾರ್ಯ ವಿಭಾಗದ ರಜತ ಮಹೋತ್ಸವ ಅಂಗವಾಗಿ ಕುವೆಂಪು ಸಭಾಂಗಣದಲ್ಲಿ ಶನಿವಾರ ‘ಸಾಮೂಹಿಕ ಅಭ್ಯುದಯಕ್ಕಾಗಿ ಸಮಾಜಕಾರ್ಯ’ ಹಳೆ ವಿದ್ಯಾರ್ಥಿಗಳು ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಅನೇಕ ಸಮುದಾಯಗಳಿಗೆ, ವಿದ್ಯಾರ್ಥಿಗಳಿಗೆ ಯಶಸ್ಸು ನೀಡುವ ದೀವಿಗೆಯಾಗಿ ಆಳ್ವಾಸ್ ರೀಚ್ ಕಾರ್ಯಕ್ರಮ ಮೂಡಿ ಬರಲಿ ಎಂದು ಎಸ್ಸೇ ಡಿಜಿಟ್ರೋನಿಕ್ಸ್ ಪ್ರೈವೆಟ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್ (2005 ಬ್ಯಾಚ್ ಹಳೆ ವಿದ್ಯಾರ್ಥಿ) ಶಾಲಿನಿ ಗಿರೀಶ ಹೇಳಿದರು. ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಸಮಾಜ ಕಾರ್ಯ ವಿಭಾಗದ ರಜತ ಮಹೋತ್ಸವ ಅಂಗವಾಗಿ ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ‘ಸಾಮೂಹಿಕ ಅಭ್ಯುದಯಕ್ಕಾಗಿ ಸಮಾಜಕಾರ್ಯ’ ಹಳೆ ವಿದ್ಯಾರ್ಥಿಗಳು ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ರಾಷ್ಟ್ರೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ ಶ್ರೀದೇವಿ ಕೆ ಮಾತನಾಡಿ, ಮಾನಸಿಕ ಆರೋಗ್ಯ, ಸಮುದಾಯ ನಿರ್ಮಾಣ, ಸಾಮಾಜಿಕ ಉದ್ಯಮಶೀಲತೆ ಮತ್ತು ಯುವ ಸಬಲೀಕರಣ ಈ ವಿಚಾರ ಸಂಕಿರಣದ ಮುಖ್ಯ ಉದ್ದೇಶ ಎಂದರು.

ಮಂಗಳೂರಿನ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಿರಿಯ ಮನೋವೈದ್ಯಕೀಯ ಸಮಾಲೋಚಕ ಶ್ರೀಪತಿ ಭಟ್ ಕೆ ಮಾತನಾಡಿ, ಸಮಾಜಕಾರ್ಯ ವಿಭಾಗ ಕೇವಲ ಉದ್ಯೋಗವನ್ನು ಅರಸುವುದಲ್ಲ, ಬದಲಾಗಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವ ಕೋರ್ಸ್ ಆಗಿ ಬದಲಾಗಬೇಕು ಎಂದು ಆಶಿಸಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ , ಮನುಷ್ಯ ನಿರಂತರವಾಗಿ ಸಮಾಜಮುಖಿಯಾದ್ದರಿಂದ, ನಿಜವಾದ ಸಮಾಜ ಕಾರ್ಯಕರ್ತರನ್ನು ಬೆಂಬಲಿಸುವುದು ಬಹಳ ಮುಖ್ಯ ಎಂದು ಹೇಳಿದರು.

ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, 25 ವರ್ಷಗಳ ಸುದೀರ್ಘ ಪಯಣದಲ್ಲಿ ಕಲಿಸಿದ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಪ್ರಾದ್ಯಾಪಕರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿರುವುದು ಗುರುವಿಗೆ ಸಂದ ಶ್ರೇಷ್ಠ ಗೌರವ ಎಂದರು.ಬಳಿಕ ನಡೆದ ವಿವಿಧ ವಿಚಾರಗೋಷ್ಠಿಗಳಲ್ಲಿ ಹಳೆ ವಿದ್ಯಾರ್ಥಿಗಳಾದ ಶಾಲಿನಿ ಗಿರೀಶ್, ಅಶೋಕ ವಿಠ್ಠಲ್, ಡಾ ರಾಯನ್, ಗಣೆಶ್ ಶೆಟ್ಟಿ, ಸುದಿನ್ ಹೆಗ್ಡೆ, ಸುರೇಶ್ ಕುಡುಮಲ್ಲಿಗೆ, ಆತ್ಮೀಯಾ ಜೆ ಕಡಂಬ ವಿಷಯಗಳನ್ನು ಪ್ರಸ್ತುತ ಪಡಿಸಿದರು. ರಜತ ಮಹೋತ್ಸವದ ಅಂಗವಾಗಿ ವಿವಿಧ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ವೆರೈಟಿ ಸ್ಪರ್ಧೆ (ನೃತ್ಯ), ಫೋಟೋಗ್ರಫಿ ಸ್ಪರ್ಧೆ ಮತ್ತು ಪೋಸ್ಟರ್ ತಯಾರಿಕಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ ಮಧುಮಾಲ ಕೆ, ಸಹಪ್ರಾಧ್ಯಾಪಕ ಕೃಷ್ಣಮೂರ್ತಿ ಬಿ, ಕಾರ್ಯಕ್ರಮ ಸಂಯೋಜಕಿ ಡಾ ಸಪ್ಮ ಆಳ್ವ, ಆಡಳಿತಾಧಿಕಾರಿ ಬಾಲಕೃಷ್ಣ, ವಿದ್ಯಾರ್ಥಿ ಸಂಯೋಜಕರಾದ ಲಾವಣ್ಯ ಮತ್ತು ಆನ್ಸನ್ ಪಿಂಟೋ ಇದ್ದರು. 2011 ಬ್ಯಾಚ್ ಸಮಾಜ ಕಾರ್ಯ ವಿಭಾಗದ ಹಳೆ ವಿದ್ಯಾರ್ಥಿ ಸಂಗೀತಾ ಹೆಗ್ಡೆ ನಿರೂಪಿಸಿದರು. ಆಳ್ವಾಸ್ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರಾ ಪ್ರಸಾದ್ ಸ್ವಾಗತಿಸಿ, ಆಳ್ವಾಸ್ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಯೋಮಿ ಮೋರಿಸ್ ವಂದಿಸಿದರು.