ಸಾರಾಂಶ
ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಜನವರಿಯಲ್ಲಿ ನಡೆಸಿದ ಸ್ನಾತಕೋತ್ತರ ಅಂತಿಮ ವರ್ಷದ ಪರೀಕ್ಷೆಗಳ ರ‍್ಯಾಂಕ್ ಪಟ್ಟಿ ಪ್ರಕಟಗೊಳಿಸಿದ್ದು, ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಶೇಕಡ ೧೦೦ ಫಲಿತಾಂಶವನ್ನು ದಾಖಲಿಸಿದೆ. ಆ ಮೂಲಕ ಕಾಲೇಜಿನ ೧೫ ಸ್ನಾತಕೋತ್ತರ ವಿಭಾಗದ ೪೦ ವಿದ್ಯಾರ್ಥಿಗಳು ಅತ್ಯುತ್ತಮ ಮತ್ತು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಪ್ರತ್ಯೇಕ ವಿಭಾಗಗಳಲ್ಲಿ ೧೧ ರ‍್ಯಾಂಕ್ ಪಡೆದಿರುತ್ತಾರೆ. ಒಟ್ಟು ವಿವಿಧ ವಿಭಾಗದಲ್ಲಿ ಮೂರು ಪ್ರಥಮ , ಎರಡು ದ್ವಿತೀಯ , ತಲಾ ಒಂದು ಮೂರನೇ, ನಾಲ್ಕನೇ ಮತ್ತು ಐದನೇ ರ‍್ಯಾಂಕ್ ಹಾಗೂ ಮೂರು ಒಂಬತ್ತನೆ ರ‍್ಯಾಂಕ್ ಗಳಿಸಿದ್ದಾರೆ.
ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಪೃಥ್ವಿ ಎನ್. ಭಟ್ ಪ್ರಥಮ ರ‍್ಯಾಂಕ್ ಪಡೆಯುವುದರ ಜೊತೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಚಿನ್ನದ ಪದಕ ವಿಜೇತರಾಗಿದ್ದಾರೆ. ಕ್ರಿಯಾ ಶರೀರ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಶೆಟ್ಟಿ ಸುಪ್ರೀತಾ ಸುಂದರ್ ಪ್ರಥಮ ರ‍್ಯಾಂಕ್, ರಚನಾ ಶರೀರ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಸೌ ಮ್ಯ ಎಸ್. ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ರೋಗನಿದಾನ ಸ್ನಾತಕೋತ್ತರ ವಿಭಾಗದಲ್ಲಿ ಡಾ.ರಶ್ಮಿ ಆರ್ ಹೆಗ್ಡೆ ದ್ವಿತೀಯ ರ‍್ಯಾಂಕ್, ಕ್ರಿಯಾ ಶರೀರ ಸ್ನಾತಕೋತ್ತರ ವಿಭಾಗದಲ್ಲಿ ಡಾ. ರಮ್ಯ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಅಗದ ತಂತ್ರ ಸ್ನಾತಕೋತ್ತರ ವಿಭಾಗದಲ್ಲಿ ಡಾ. ದೀಪಿಕಾ ಜೆ.ಆರ್. ಮೂರನೇ ರ‍್ಯಾಂಕ್, ಮಾನಸ ರೋಗ ಸ್ನಾತಕೋತ್ತರ ವಿಭಾಗದಲ್ಲಿ ಡಾ. ನಿಶಾ ಸಿ.ಎನ್. ೪ನೇ ರ‍್ಯಾಂಕ್, ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಶಿಬ್ಲಾ ಎಂ. ೫ನೇ ರ‍್ಯಾಂಕ್, ಅಗದ ತಂತ್ರ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಚಾಂದಿನಿ ಮಹೇಂದ್ರನ್ ೯ನೇ ರ‍್ಯಾಂಕ್, ಶಲ್ಯ ಸಾಮಾನ್ಯ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಜಾನವ್ವ ಹನಜಹಟ್ಟಿ ೯ನೇ ರ‍್ಯಾಂಕ್, ಕೌಮಾರಭೃತ್ಯ ಸ್ನಾತಕೋತ್ತರ ವಿಭಾಗದಲ್ಲಿ ಡಾ. ರಮೇಶ್ ಜಿ. ಹಾಲಳ್ಳಿ ೯ನೇ ರ‍್ಯಾಂಕ್ ಗಳಿಸಿದ್ದಾರೆ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮತ್ತು ಪ್ರಾಂಶುಪಾಲ ಡಾ.ಸಜಿತ್ ಎಂ ಸ್ನಾತಕೋತ್ತರ ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿದ್ದಾರೆ. ಸ್ಪೆಷಲ್ ಒಲಂಪಿಕ್ಸ್ ಕ್ರೀಡಾ ಶಿಬಿರ: ಅಫ್ರೀನಾ ಆಯ್ಕೆ
ಮೂಡುಬಿದಿರೆ: ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ ವತಿಯಿಂದ ಜ.31ಮತ್ತು ಫೆ.1ರಂದು ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಕರ್ನಾಟಕ ತಂಡಕ್ಕೆ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿನಿ ಫಾತಿಮತ್ ಆಫ್ರಿನಾ ಆಯ್ಕೆಯಾಗಿದ್ದಾರೆ.ಫೆ.25 ರಿಂದ 28ರ ವರೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಕ್ರೀಡಾ ಶಿಬಿರದಲ್ಲಿ ಭಾಗವಹಿಲಿದ್ದಾರೆ. ಮೂಡುಬಿದಿರೆಯ ಅರಮನೆ ಬಾಗಿಲಿನಲ್ಲಿರುವ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿನಿಯಾಗಿದ್ದಾರೆ.