ಸಾರಾಂಶ
ಪತ್ರಿಭೆ ಬಡತನದಲ್ಲಿ ಹುಟ್ಟಿ ಸಾಧನೆ ಮಾಡಿ ವೈದ್ಯಕೀಯ ಸೀಟು ಗಿಟ್ಟಿಸಿಕೊಂಡಿದ್ದು ಖುಷಿ ತಂದಿದೆ. ಪ್ರತಿಭಾವಂತ ಬಡ ಮಕ್ಕಳ ಬೆನ್ನೆಲುಬಾಗಿ ನಿಲ್ಲುವ ಮನಸ್ಸು ನನ್ನದು ಎಂದು ಬಾದಾಮಿಯ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ವಿಭಾಗದ ರಾಜ್ಯ ಕಾರ್ಯದರ್ಶಿ ಮಹೇಶ ಹೊಸಗೌಡರ ಹೇಳಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಪತ್ರಿಭೆ ಬಡತನದಲ್ಲಿ ಹುಟ್ಟಿ ಸಾಧನೆ ಮಾಡಿ ವೈದ್ಯಕೀಯ ಸೀಟು ಗಿಟ್ಟಿಸಿಕೊಂಡಿದ್ದು ಖುಷಿ ತಂದಿದೆ. ಪ್ರತಿಭಾವಂತ ಬಡ ಮಕ್ಕಳ ಬೆನ್ನೆಲುಬಾಗಿ ನಿಲ್ಲುವ ಮನಸ್ಸು ನನ್ನದು ಎಂದು ಬಾದಾಮಿಯ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ವಿಭಾಗದ ರಾಜ್ಯ ಕಾರ್ಯದರ್ಶಿ ಮಹೇಶ ಹೊಸಗೌಡರ ಹೇಳಿದರು.ಸೋಮವಾರ ಪಟ್ಟಣದ ಶಿಕ್ಷಕ ನಗರದ ನಿವಾಸಿ ಅಟೋರಿಕ್ಷಾ ಚಾಲಕ ಹನುಮಂತ ಕ್ಯಾದಿಗೇರಿ ಅವರ ಪುತ್ರ ಪರಶುರಾಮ ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ 655 ಅಂಕಗಳಿಸಿ ವೈದ್ಯಕೀಯ ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಪ್ರಯುಕ್ತ ಅವನ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ₹ 5 ಸಾವಿರ ಮೊತ್ತದ ಚೆಕ್ ವಿತರಿಸಿ ಮಾತನಾಡಿ, ಬಡತನದ ಸಂಕಷ್ಟದಲ್ಲಿ ಈ ಸಾಧನೆ ಮಾಡಿದ ನೀನು ಭಾವಿ ಜೀವನದಲ್ಲಿ ವೈದ್ಯನಾಗಿ ಹೆತ್ತವರಿಗೆ ಹೆಸರು ತಂದು ಸಮಾಜ ಸೇವೆ ಮಾಡಬೇಕು. ವೈದ್ಯಕೀಯ ವ್ಯಾಸಂಗ ಸಂದರ್ಭದಲ್ಲಿ ಏನಾದರೂ ಅನಾನುಕೂಲ ಆದರೆ ನನಗೆ ಸಂಪರ್ಕಿಸುವಂತೆ ವಿದ್ಯಾರ್ಥಿಯಲ್ಲಿ ಆತ್ಮವಿಶ್ವಾಸ ತುಂಬಿದರು. ಕುರಹಟ್ಟಿ ಗುರುಗಳು, ಗೋಪಾಲ ಜಾಧವ, ಶರಣು ಜೋಗೂರ, ವಿದ್ಯಾರ್ಥಿಯ ತಂದೆ ಹನುಮಂತ, ತಾಯಿ ಯಲ್ಲವ್ವ, ಅಜ್ಜಿ ಸೇರಿದಂತೆ ಇತರರು ಇದ್ದರು.