ನೈಜ ವರದಿ ಬಿತ್ತರಿಸುವ ಕನ್ನಡಪ್ರಭ ದಿನಪತ್ರಿಕೆ ಮಕ್ಕಳ ದಿನಾಚಾರಣೆ ನಿಮಿತ್ತ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು ಸಂತಸ ತಂದಿದೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಮಾನವನ ಮೂಲ ಭಾಷೆ ಚಿತ್ರಕಲೆ. ಭಾಷೆಯ ಬರುವುದಕ್ಕೂ ಮುಂಚೆ ಮಾನವ ತನ್ನ ಭಾವನೆಗಳನ್ನು ಚಿತ್ರದ ಮೂಲಕವೇ ವ್ಯಕ್ತ ಪಡಿಸುತ್ತಿದ್ದ ಎಂದು ಪಟ್ಟಣದ ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.

ಪಟ್ಟಣದ ಎಚ್.ಜಿ ಪ.ಪೂ ಮಹಾ ವಿದ್ಯಾಲಯದಲ್ಲಿ ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್‌ ವತಿಯಿಂದ ಪ್ರೌಢ ಶಾಲಾ ಮಕ್ಕಳಿಗೆ ಆಯೋಜಿಸಿರುವ ಕರ್ನಾಟಕದ ಅರಣ್ಯ ಪ್ರದೇಶಗಳು ಮತ್ತು ವನ್ಯ ಜೀವಿಗಳು ವಿಷಯದ ಕುರಿತಾದ ತಾಲೂಕುಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಗು ರೇಖೆಗಳಿಂದಲೇ ಕಲಿಕೆ ಪ್ರಾರಂಭ ಮಾಡುತ್ತಾನೆ. ಸಿಂದಗಿ ತಾಲೂಕು ಈ ನಾಡಿಗೆ ಬಹುದೊಡ್ಡ ಕಲಾವಿದರನ್ನು ನೀಡಿದ ತಾಲೂಕು. ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಈರಣ್ಣ ರುಕೂಂಪೂರ ನಮ್ಮ ಊರಿನವರು ಎನ್ನುವುದು ನಮ್ಮ ಹೆಮ್ಮೆ. ಶಾಲಾ ಕಾಲಾಜುಗಳಲ್ಲಿ ಬೆರಳೆಣಿಕೆಯಷ್ಟೆ ಚಿತ್ರಕಲಾ ಶಿಕ್ಷಕರಿದ್ದಾರೆ. ಸರ್ಕಾರ ಚಿತ್ರಕಲಾ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಕಲೆಯಲ್ಲಿ ಪ್ರೊತ್ಸಾಹಿಸಬೇಕು. ನೈಜ ವರದಿ ಬಿತ್ತರಿಸುವ ಕನ್ನಡಪ್ರಭ ದಿನಪತ್ರಿಕೆ ಮಕ್ಕಳ ದಿನಾಚಾರಣೆ ನಿಮಿತ್ತ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು ಸಂತಸ ತಂದಿದೆ. ಕನ್ನಡಪ್ರಭ ಇನ್ನು ಬೇರೆ ಬೇರೆ ಚಟುವಟಿಕೆ ಮಾಡಲಿ. ನಮ್ಮ ಸಂಸ್ಥೆ ಸದಾ ಸಹಕಾರ ನೀಡುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಮಕ್ಕಳಲ್ಲಿರುವ ಕಲಾತ್ಮಕ ಸ್ವಯಂ ವ್ಯಕ್ತಿತ್ವಕ್ಕಾಗಿ ಕನ್ನಡಪ್ರಭ ಆಯೋಜಿಸಿರುವ ಈ ಕಾರ್ಯ ಶ್ಲಾಘನೀಯ. ಚಿತ್ರಕಲೆ ಇಂದು ವೈಜ್ಞಾನಿಕ ಜಗತ್ತಿನಲ್ಲಿ ಸೊರಗುತ್ತಿದೆ. ಚಿತ್ರಕಲಾ ಸ್ಪರ್ಧೆಗಳು ನಿರಂತರವಾಗಿ ನಡೆಯುವುದರ ಮೂಲಕ ಮಕ್ಕಳ ಸೃಜನಶೀಲತೆ ಪ್ರೋತ್ಸಾಹಿಸಬೇಕು ಎಂದರು.

ವೇದಿಕೆ ಮೇಲೆ ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಗುರುಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಅರಣ್ಯ ಇಲಾಖೆ ಮುತ್ತಪ್ಪ, ಜ್ಞಾನಭಾರತಿ ಪ್ರೌಢ ಶಾಲೆಯ ಮುಖ್ಯಗುರು ಜಗದೀಶ ಪಾಟೀಲ, ಬಿ.ಎಸ್.ಬಿರಾದಾರ, ಮುತ್ತು ಪಟ್ಟಣಶೆಟ್ಟಿ, ಚಿತ್ರಕಲಾ ಶಿಕ್ಷಕ ಶರಣಪ್ಪ ಕೇಸರಿ, ಶಿಕ್ಷಣ ಸಂಯೋಜಕರು ಸತ್ಯಪ್ಪ ಕಪ್ಪನಿಂಬರಗಿ, ಡಿ.ಎಂ.ಮುಲ್ಲಾ, ಎಸ್.ವೈ.ಯರಲಡ್ಡಿ, ಸಿದ್ದಲಿಂಗ ಚೌಧರಿ, ಬಸವರಾಜ ಅಗಸರ, ಸಿದ್ದಲಿಂಗ ಕಿಣಗಿ ಸೇರಿದಂತೆ ಇತರರು ಇದ್ದರು.

ಸಿಂದಗಿ ತಾಲೂಕಿನ ವಿವಿಧ ಪ್ರೌಢ ಶಾಲೆಗಳ ಸುಮಾರು 80ಕ್ಕೂ ಅಧಿಕ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯ ನಿರ್ಣಾಯಕರಾಗಿ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರಾದ ವೈ.ಕೆ.ಚೊರಗಸ್ತಿ, ಮೀನಾಕ್ಷಿ ವಾಗ್ಮೋರೆ, ಎಸ್.ಎಸ್.ಗುಣಾರಿ, ನರೇಂದ್ರರೆ ಬಿನಾಳ, ರಜಪೂತ ಕಾರ್ಯ ನಿರ್ವಹಿಸಿದರು.

ಗಮನಸೆಳೆದ ಸ್ಪರ್ಧೆ:

ಸಿಂದಗಿ ತಾಲೂಕಿನ ವಿವಿಧ ಶಾಲೆಗಳ ಸುಮಾರು 80ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಕೆಲವರ ಚಿತ್ರಗಳು ಅತ್ಯಂತ ವಿಶಿಷ್ಟತೆಯಿಂದ ಕೂಡಿತ್ತು. ನಿರ್ಣಾಯಕರೆ ಬೇರಗಾಗುವ ಚಿತ್ರಗಳು ಅಲ್ಲಿ ಕಂಡು ಬಂದವು.

ವಿಜೇತ ವಿದ್ಯಾರ್ಥಿಗಳು

8ನೇ ತರಗತಿ ವಿಭಾಗದಲ್ಲಿ ಗಣಿಹಾರ ಗ್ರಾಮದ ಸರ್ಕಾರಿ ಎಂ.ಪಿ.ಎಸ್ ಶಾಲೆ ವಿದ್ಯಾರ್ಥಿನಿ ಸಮಿನಾ ಪ್ರಥಮ, ಭಂಟನೂರ ಗ್ರಾಮದ ಹೀರಾಮಾತಾ ಪ್ರೌಢ ಶಾಲೆ ತನುಶ್ರೀ ಚವ್ಹಾಣ ದ್ವಿತೀಯ, ಸಿಂದಗಿ ಜ್ಞಾನ ಭಾರತಿ ಶಾಲೆಯ ನವೀನ ಸ್ವಾಮಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

9ನೇ ತರಗತಿ ವಿಭಾಗದಲ್ಲಿ ಮಲಘಾಣದ ಎಸ್.ಬಿ.ಎಚ್.ಎಸ್ ಶಾಲೆಯ ಮಹೇಶ ಹಡಪದ ಪ್ರಥಮ, ಹಂದಿಗನೂರ ಗ್ರಾಮದ ಜಿ.ಎಚ್.ಎಸ್ ಶಾಲೆಯ ಪ್ರಶಾಂತ ಹತ್ತರಕಿಹಾಳ, ಕೊಕಟನೂರ ಗ್ರಾಮದ ಆರ್‌ಎಂಎಸ್ಎ ಶಾಲೆಯ ಪ್ರಜ್ವತಿ ತಂಬಾಕೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

10ನೇ ತರಗತಿ ವಿಭಾಗದಲ್ಲಿ ಸಿಂದಗಿಯ ಪೂಜ್ಯ ಶ್ರೀ ಚೆನ್ನವೀರ ಸ್ವಾಮಿಜಿ ಪ್ರೌಢ ಶಾಲೆಯ ವಿಕಾಶ ಪತ್ತಾರ ಪ್ರಥಮ, ಪ್ರೇರಣಾ ಪಬ್ಲಿಕ ಶಾಲೆಯ ಶ್ರೇಯಾ ಅಗಸರ, ಭಂಟನೂರ ಹೀರಾಮಾತಾ ಶಾಲೆಯ ಸಮೀರ ಬಾಗವಾನ ತೃತೀಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವೇಳೆ ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಕೊಡಮಾಡುವ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಅಭಿನಂದನೆಗಳು:

ಚಿತ್ರಕಲಾ ಸ್ಪರ್ಧೆಗೆ ಸಹಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಮತ್ತು ನಿರ್ಣಾಯಕರಾಗಿ ಆಗಮಿಸಿದ ಚಿತ್ರಕಲಾ ಶಿಕ್ಷಕರಾದ ವೈ.ಕೆ.ಚೊರಗಸ್ತಿ, ಮೀನಾಕ್ಷಿ ವಾಗ್ಮೋರೆ, ಎಸ್.ಎಸ್.ಗುಣಾರಿ, ನರೇಂದ್ರ ರೆಬಿನಾಳ, ರಜಪೂತ, ಶರಣಪ್ಪ ಕೇಸರಿ ಅವರನ್ನು ಕನ್ನಡಪ್ರಭ ವರದಿಗಾರ ಸಿದ್ದಲಿಂಗ ಕಿಣಗಿಗೆ ಅಭಿನಂದನೆ ಸಲ್ಲಿಸಿದರು.

ಮಕ್ಕಳ ಪ್ರತಿಭೆ ಅನಾವರಣಗೊಳಿಸುವುದೆ ಸಮಾಜದ ಮುಖ್ಯ ಕಾರ್ಯ. ಅಂತ ಕಾರ್ಯವನ್ನು ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ಮಾಡುತ್ತಿರುವುದು ಅತ್ಯಂತ ಖುಷಿ ತಂದಿದೆ. ಶಾಲಾ ಕಾಲೇಜುಗಳು ಮಾಡುವ ಕಾರ್ಯವನ್ನು ಕನ್ನಡಪ್ರಭ ದಿನಪತ್ರಿಕೆ ಸಮಾಜಮುಖಿಯಾಗಿ ಮಾಡುತ್ತಿದೆ. ಇಂದು ತಂತ್ರಜ್ಞಾನ ಬಂದ ಮೇಲೆ ಮಕ್ಕಳು ಸ್ವಕಲಿಕೆ ಮರೆಯುತ್ತಿದ್ದಾರೆ. ಹಿಂತಾ ಕಾರ್ಯಗಳು ಸದಾ ಮೇಲಿಂದ ಮೇಲೆ ನಡೆಯಬೇಕು. ನಮ್ಮ ಸಂಸ್ಥೆಯಿಂದ ಕನ್ನಪ್ರಭ ದಿನಪತ್ರಿಕೆಗೆ ಅಭಿನಂದನೆಗಳು. ಚಂದ್ರಶೇಖರ ಪೂಜಾರಿ, ಅಧ್ಯಕ್ಷರು ಗುರುಕುಲ ಶಿಕ್ಷಣ ಸಂಸ್ಥೆ ಸಿಂದಗಿಸಮಾಜದ ಅಂಕುಕೊಂಕುಗಳನ್ನು ತಿದ್ದುವ ಪತ್ರಿಕೆ ಶಾಲಾ ಮಕ್ಕಳಿಗೆ ಶೈಕ್ಷಣಿಕ ವಿಚಾರಧಾರೆ ನೀಡುತ್ತಿರುವುದು ಉತ್ತಮವಾಗಿದೆ. ಚಿತ್ರಕಲೆಗೆ ತನ್ನದೆ ಆದ ವಿಶಿಷ್ಠ ಗುಣವಿದೆ. ಚಿತ್ರಕಲೆಯಿಂದ ಅದೇಷ್ಟೋ ಜನರು ಸ್ವಾವಲಂಬಿಗಳಾಗಿದ್ದಾರೆ. ಇಂದು ಸರ್ಕಾರ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಇಂತಹ ಕಲೆಗಳನ್ನು ಸ್ಪಷ್ಟವಾಗಿ ಕಲಿತಿದ್ದಲ್ಲಿ ನಮ್ಮ ಬದುಕನ್ನು ಬೆಳೆಸಿಕೊಳ್ಳಬಹುದು. ಅನೀಲ (ಮುತ್ತು) ಪಟ್ಟಣಶೆಟ್ಟಿ, ಯುವ ಮುಖಂಡರು ಸಿಂದಗಿ

ಕಲೆ ಯಾರ ಸೊತ್ತು ಅಲ್ಲ ಮತ್ತು ಕಲೆಯನ್ನು ಯಾರು ಕಸಿದು ಕೊಳ್ಳಲು ಸಾಧ್ಯವಿಲ್ಲ. ಮಕ್ಕಳಿಗೆ ಹಿಂತಾ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಕನ್ನಡ ಪ್ರಭ ಮತ್ತು ಸುವರ್ಣ ಟಿ.ವಿ ಸದಾ ಸಮಾಜಮುಖಿ ಕಾರ್ಯ ಮಾಡುತ್ತಲೆ ಬರುತ್ತಿದೆ. ಸಾಧಕರನ್ನು, ಉದ್ಯಮಿಗಳನ್ನು, ರೈತರನ್ನು, ಆದರ್ಶ ಮಹಿಳೆಯರನ್ನು, ಅಭಿಯಂತರರ ಸೇವೆ ಗುರುತಿಸಿ ಅವರಿಗೆ ಗೌರವಿಸುವ ಕಾರ್ಯ ಮಾಡುವ ಮಧ್ಯದಲ್ಲಿ ಇಂದು ಮಕ್ಕಳಿಗೆ ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿದ್ದು ದೊಡ್ಡ ವಿಚಾರವಾಗಿದೆ. ಮಹಾಂತೇಶ ಯಡ್ರಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂದಗಿ

ನಾವು ಕೇವಲ ಶಾಲಾ ಮಟ್ಟದಲ್ಲಿ ಮಾತ್ರ ಚಿತ್ರಕಲೆ ಬಿಡಿಸುತ್ತಿದ್ದೇವು ಆದರೆ ಇಂದು ಕನ್ನಡಪ್ರಭ ನಮಗಾಗಿ ಈ ಕಾರ್ಯ ಆಯೋಜನೆ ಮಾಡಿ ನಮಗೆ ಭಾಗವಹಿಸಲು ಅವಕಾಶ ನೀಡಿದೆ. ಇದರಿಂದ ನಮ್ಮ ಖುಷಿಗೆ ಪಾರವೇ ಇಲ್ಲದಂತಾಗಿದೆ. ವಿಕಾಶ ಪತ್ತಾರ, 10 ನೇ ತರಗತಿ ವಿದ್ಯಾರ್ಥಿ ಪೂಜ್ಯ ಶ್ರೀ ಚೆನ್ನವೀರ ಸ್ವಾಮಿಜಿ ಪ್ರೌಢ ಶಾಲೆ ಸಿಂದಗಿ