ಹೋರಾಟಗಾರರನ್ನು ಸದಾ ಸ್ತುತಿಸಿ: ಶಾಸಕ ಆರ‍್ವಿಎನ್

| Published : Sep 20 2024, 01:31 AM IST

ಹೋರಾಟಗಾರರನ್ನು ಸದಾ ಸ್ತುತಿಸಿ: ಶಾಸಕ ಆರ‍್ವಿಎನ್
Share this Article
  • FB
  • TW
  • Linkdin
  • Email

ಸಾರಾಂಶ

Always praise the fighters: MLA RVN

ಕನ್ನಡಪ್ರಭ ವಾರ್ತೆ ಸುರಪುರ

ಭಾರತಕ್ಕೆ 1947ರಲ್ಲೇ ಸ್ವಾತಂತ್ರ್ಯ ದೊರೆತರೆ, ಹೈದರಾಬಾದಿನ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ 1978ರಲ್ಲಿ ದಾಸ್ಯದಿಂದ ಮುಕ್ತಿ ದೊರೆಯಿತು. ಇದಕ್ಕೆ ಅಂದಿನ ಗೃಹ ಸಚಿವ ಸರ್ದಾರ ವಲ್ಲಭಬಾಯಿ ಪಟೇಲ ಕಾರಣ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು. ನಗರದ ಸರ್ದಾರ ವಲ್ಲಭಬಾಯಿ ಪಟೇಲ ವೃತ್ತದ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭಾಗದ ಅರಸರು, ನಾಯಕರು, ಮುಖಂಡರು, ಹಿರಿಯರ ಹೋರಾಟ ಅವಿಸ್ಮರಣೀಯ. ವಿಮೋಚನೆಗಾಗಿ ಹೋರಾಟಗೈದು ಪ್ರಾಣ ತ್ಯಾಗ ಮಾಡಿದವರನ್ನು ಸದಾ ಸ್ತುತಿಸಬೇಕು ಎಂದರು. ಕಲ್ಯಾಣ ಕರ್ನಾಟಕ ಭಾಗವು ಸಾಕಷ್ಟು ಹಿಂದುಳಿದಿದೆ. ಅಭಿವೃದ್ಧಿಗೆ ನಾಯಕರು ಒತ್ತು ಕೊಡಬೇಕಿದೆ. ಸುರಪುರ ಮತಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ, ಶಿಕ್ಷಣ ಒತ್ತು ನೀಡಬೇಕಿದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ತಹಸೀಲ್ದಾರ್ ಎಚ್.ಎ. ಸರಕಾವಸ್ ಮಾತನಾಡಿದರು. ನಿವೃತ್ತ ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ ಉಪನ್ಯಾಸ ನೀಡಿದರು. ಯುವ ನಾಯಕರಾದ ರಾಜಾ ಸಂತೋಷ ನಾಯಕ, ರಾಜಾ ಕುಮಾರ ನಾಯಕ, ನಗರಸಭೆ ಅಧ್ಯಕ್ಷ ಹೀನಾ ಕೌಸರ್, ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ, ನಗರಯೋಜನೆ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ತಾಪಂ ಇಒ ಬಸವರಾಜ ಸಜ್ಜನ್, ಟಿಎಚ್‌ಒ ಡಾ. ಆರ್.ವಿ. ನಾಯಕ, ಪೌರಾಯುಕ್ತ ಜೀವನ್ ಕಟ್ಟಿಮನಿ, ಪೊಲೀಸ್ ಅಧಿಕಾರಿಗಳು, ನಗರಸಭೆಯ ಅಧಿಕಾರಿಗಳು ಇದ್ದರು.

----

18ವೈಡಿಆರ್11: ಸುರಪುರ ನಗರದ ಸರ್ದಾರ ವಲ್ಲಭಬಾಯಿ ಪಟೇಲ ಅವರ ಪ್ರತಿಮೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಪೂಜೆ ಸಲ್ಲಿಸಿದರು.