ದೇವರು ಹಾಗೂ ಪೋಷಕರನ್ನು ಸದಾಕಾಲ ಗೌರವದಿಂದ ಕಂಡು ಅವರಿಗೆ ವಿಧೆಯರಾಗಿ ನಡೆದುಕೊಳ್ಳುವುದರಿಂದ ನಾವು ಬಯಸುವ ಸಾಧನೆಯನ್ನು ಮಾಡಬಹುದು ಎಂದು ಬೆಟ್ಟಹಳ್ಳಿ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್

ದೇವರು ಹಾಗೂ ಪೋಷಕರನ್ನು ಸದಾಕಾಲ ಗೌರವದಿಂದ ಕಂಡು ಅವರಿಗೆ ವಿಧೆಯರಾಗಿ ನಡೆದುಕೊಳ್ಳುವುದರಿಂದ ನಾವು ಬಯಸುವ ಸಾಧನೆಯನ್ನು ಮಾಡಬಹುದು ಎಂದು ಬೆಟ್ಟಹಳ್ಳಿ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕೆ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ನಿರ್ಮಾಣ ಮಾಡಿರುವ ಪಟ್ಟಲದಮ್ಮನ ವಿಶೇಷವಾದ ರಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜದಲ್ಲಿ ಪ್ರತಿದಿನ ನಾನು ನನ್ನದು ಎಂಬ ಸ್ವಾರ್ಥ ವಿಚಾರಗಳಿಗೆ ಬದುಕುವ ಈ ಸಂದರ್ಭದಲ್ಲೂ ಸಹ ಹಲವಾರು ಭಕ್ತರು ದೈವ ಧರ್ಮ ಹೀಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಭರತ ಭೂಮಿಯ ಶಕ್ತಿ ಇನ್ನೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಅರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ ಧರ್ಮವನ್ನು ನಾವು ರಕ್ಷಿಸಿದಾಗ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ, ಒಂದು ಕಲ್ಲನ್ನು ಪೂಜಿಸಿದ ಫಲವಾಗಿ ಹಲವರು ತಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಅವರ ಬೇಡಿಕೆಗಳನ್ನ ಈಡೇರಿಸಿಕೊಂಡಿದ್ದಾರೆ ಎಂದರು, ಬಿಜೆಪಿ ಮುಖಂಡ ರಾಜೇಶ್ ಗೌಡ ಮಾತನಾಡಿ, ಉತ್ತಮರಿಂದ ಸಮಾಜಕ್ಕೆ ಒಳಿತಾಗುತ್ತಿದೆ ಎನ್ನುವುದಕ್ಕೆ ಇಂದು ನಡೆಯುತ್ತಿರುವ ಉತ್ಸವವೇ ಸಾಕ್ಷಿ ಎಂದರು. ಜೆಡಿಎಸ್ ಮುಖಂಡ ಡಾ. ರವಿ ಬಾಬು ಮಾತನಾಡಿ, ಇಂತಹ ದೇವರ ಕಾರ್ಯಕ್ರಮಗಳಿಗೆ ಸಾವಿರಾರು ಜನ ಬಂದು ಭಾಗವಹಿಸಿ ತಮ್ಮ ಭಕ್ತಿಯ ಸಮರ್ಪಣೆ ಮಾಡಿದ್ದಾರೆ. ಪ್ರತಿ ಗ್ರಾಮದಲ್ಲಿ ಈ ರೀತಿಯ ಆಚರಣೆಗಳಿಂದ ಸಹಬಾಳ್ವೆ ಹಾಗೂ ಪ್ರತಿಯೊಬ್ಬರ ಕಷ್ಟ ಸುಖಗಳು ಮುಕ್ತಿ ಕಾಣಲಿವೆ ಎಂದರು.ಸಾಂಪ್ರದಾಯಿಕವಾಗಿ ಹಲವಾರು ಮಹಿಳೆಯರು ವಿಶೇಷ ಆರತಿಗಳನ್ನ ನೆರವೇರಿಸಿ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕುಡಿಯುವ ನೀರು ಸೇರಿದಂತೆ ಸಕಲವನ್ನು ದೇವಾಲಯದ ವತಿಯಿಂದ ಮಾಡಲಾಗಿತ್ತು .ಈ ಸಂದರ್ಭದಲ್ಲಿತುರುವೇಕೆರೆ ಮಾಜಿ ಶಾಸಕರಾದ ಮಸಾಲೆ ಜಯರಾಮ ಧ್ವಜಾರೋಹಣ ನಡೆಸಿದರು. ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವದೂತ ಸ್ವಾಮೀಜಿ,

ಓಂಕಾರ ಆಶ್ರಮದ ಶ್ರೀ ಮಧುಸೂದನಂದ ಪುರಿ ಸ್ವಾಮೀಜಿ, ಗವಿಸಿದ್ದೇಗೌಡ ಕೆಂಪೇಗೌಡ, ಮಾಸ್ತಿಗೌಡ ಕುಟುಂಬದ ಸದಸ್ಯರು, ಬಿ ಏನ್ ಜಗದೀಶ್, ರಂಗಣ್ಣ ಗೌಡ, ಬಿ ದೇವರಾಜು, ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಸ್ಥರು ಭಕ್ತಾದಿಗಳು ಇದ್ದರು.