ಸಾರಾಂಶ
- ಪೌರಕಾರ್ಮಿಕರಿಗೆ ಉಪಾಹಾರ ವ್ಯವಸ್ಥೆಗೆ ಚಾಲನೆ ನೀಡಿ ಶಾಸಕ ಶಾಂತನಗೌಡ ಸಲಹೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ನಗರ ಸ್ವಚ್ಛತೆ ಮೂಲಕ ನಾಗರೀಕರ ಸ್ವಾಸ್ಥ್ಯ ಕಾಪಾಡುವ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ನಾಗರೀಕರಾದ ನಾವೂ ಗಮನಹರಿಸಬೇಕು. ಇದು ನಮ್ಮ ಸಾಮಾಜಿಕ ಜವಾಬ್ದಾರಿ ಕೂಡ ಆಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಸೋಮವಾರ ಪುರಸಭೆ ಆವರಣದಲ್ಲಿ ಪೌರ ಕಾರ್ಮಿಕರಿಗೆ ಬೆಳಗಿನ ಉಪಾಹಾರ ಮತ್ತು ಸ್ವಚ್ಛತಾ ಕೆಲಸಕ್ಕೆ ಅಗತ್ಯವಾದ ಹೆಲ್ಮೆಟ್, ಗ್ಲೌಸ್, ರೈನ್ ಕೋಟ್, ರೇಡಿಯಂ ಜಾಕೇಟ್ ಹಾಗೂ ಯೂನಿಫಾರಂಗಳನ್ನು ವಿತರಿಸಿ ಅವರು ಮಾತನಾಡಿದರು.
ಸಾಮಾನ್ಯ ನಾಗರೀಕರು ಯಾರೂ ಮಾಡಲಾಗದ ಸ್ವಚ್ಛತಾ ಕೆಲಸಗಳನ್ನು ತಮ್ಮ ಆರೋಗ್ಯದ ಹಂಗು ತೊರೆದು ಪೌರಕಾರ್ಮಿಕರು ಮಾಡುತ್ತಾರೆ. ಸತ್ತ ಪ್ರಾಣಿಗಳು, ಕೆಟ್ಟ ಮತ್ತು ಕೊಳೆತ ತ್ಯಾಜ್ಯಗಳ ತುಂಬಿದ ಚರಂಡಿ ಹೀಗೆ ನಗರವನ್ನು ದಿನಂಪ್ರತಿ ಬಿಸಿಲು, ಚಳಿ, ಮಳೆ ಎನ್ನದೇ ಸ್ವಚ್ಛಗೊಳಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಸಾಧ್ಯತೆಗಳು ಇರುತ್ತವೆ. ಇದನ್ನು ನಾಗರೀಕರಾದ ನಾಯ್ಯಾರೂ ಮರೆಯಬಾರದು. ಸರ್ಕಾರ ಇದೇ ಕಾರಣಕ್ಕೆ ಅವರ ಬಗ್ಗೆ ಹೆಚ್ಚಿ ಕಾಳಜಿ ವಹಿಸುತ್ತಿದೆ ಎಂದು ಹೇಳಿದರು.ಬೆಳಗಿಜಾವದಿಂದ ಪಟ್ಟಣ ಸ್ವಚ್ಛತಾ ಕಾಯಕ ಆರಂಭಗೊಳ್ಳುವುದರಿಂದ ಅವರಿಗೆ ಮನೆಯಲ್ಲಿ ಉಪಾಹಾರ ದೊರೆಯದೇ ಇರಬಹುದು. ಈ ಕಾರಣಕ್ಕೆ ಪುರಸಭೆ ವತಿಯಿಂದ ಪ್ರತಿದಿನ ಬೆಳಗ್ಗೆ ಉತ್ತಮ ಗುಣಮಟ್ಟದ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಇದು ವಿಶೇಷವಾಗಿ ತನಗೆ ಸಮಾಧಾನ ತಂದಿದೆ. ಪುರಸಭೆ ಆಧಿಕಾರಿಗಳು ಪೌರಕಾರ್ಮಿಕರಿಗೆ ನೀಡುವ ಉಪಾಹಾರ ಉತ್ತಮ ಗುಣಮಟ್ಟದ್ದಾಗಿರುವಂತೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಬಗ್ಗೆ ಯಾರಿಂದಲೂ ದೂರು ಬರಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪೌರಕಾರ್ಮಿಕರು ಸರಕ್ಷತೆಯಿಂದ ಕೆಲಸ ಮಾಡಲು ಹೆಲ್ಮೆಟ್, ಹ್ಯಾಂಡ್ ಗ್ಲೌಸ್, ರೈನ್ ಕೋಟ್, ರೇಡಿಯಂ ಜಾಕೇಟ್ ಬೂಟ್, ಯೂನಿಫಾರಂಗಳನ್ನು ನೀಡಲಾಗುತ್ತಿದೆ. ಪೌರ ಕಾರ್ಮಿಕರು ಇವುಗಳ ಸದುಪಯೋಗ ಪಡೆದು, ಕರ್ತವ್ಯದ ವೇಳೆ ಧರಿಸಬೇಕು ಎಂದು ಹೇಳಿದರು.ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸದಸ್ಯರಾದ ಧರ್ಮಪ್ಪ, ರಾಜೇಂದ್ರ, ನಾಮನಿರ್ದೇಶಿತ ಸದಸ್ಯ ರವಿ ಬೂದಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ಎಂಜಿನಿಯರ್ ದೇವರಾಜ್, ಸಿಬ್ಬಂದಿ ಇದ್ದರು.
- - --17ಎಚ್.ಎಲ್.ಐ2:
ಹೊನ್ನಾಳಿ ಪುರಸಭೆ ಆವರಣದಲ್ಲಿ ಸೋಮವಾರ ಪೌರಕಾರ್ಮಿಕರಿಗೆ ಶಾಸಕ ಡಿ.ಜಿ. ಶಾಂತನಗೌಡ ಬೆಳಗಿನ ಉಪಾಹಾರ ವ್ಯವಸ್ಥೆಗೆ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿ, ಸಿಬ್ಬದಿಗಳು ಇದ್ದರು.-17ಎಚ್.ಎಲ್.ಐ2ಎ.:
ಹೊನ್ನಾಳಿ ಪುರಸಬೆ ಆವರಣದಲ್ಲಿ ಸೋಮವಾರ ಪೌರಕಾರ್ಮಿಕರಿಗೆ ಶಾಸಕ ಡಿ.ಜಿ. ಶಾಂತನಗೌಡ ಅವರು ಸ್ವಚ್ಛತಾ ಪರಿಕರಗಳನ್ನು ವಿತರಿಸಿದರು. ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿ, ಸಿಬ್ಬಂದಿ ಇದ್ದರು.)
)
;Resize=(128,128))
;Resize=(128,128))
;Resize=(128,128))