ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದ ಜಕಣಾಚಾರಿ

| Published : Jan 02 2025, 12:31 AM IST

ಸಾರಾಂಶ

ಅಮರಶಿಲ್ಪಿ ಜಕಣಾಚಾರಿ ಅವರು ನಿರ್ಮಿಸಿರುವ ಬೇಲೂರು, ಹಳೇಬೀಡು, ದೇವಾಲಯಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದು ದೇಶದ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ

ಕನ್ನಡಪ್ರಭ ವಾರ್ತೆ ನಂಜನಗೂಡುಅಮರ ಶಿಲ್ಪಿ ಜಕಣಾಚಾರಿ ಅವರು ದೇಶದ ಕಲೆ, ವಾಸ್ತುಶಿಲ್ಪಕ್ಕೆ, ಅಪಾರ ಕೊಡುಗೆ ನೀಡಿದ್ದಾರೆಎಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಮರಶಿಲ್ಪಿ ಜಕಣಾಚಾರಿ ಅವರು ನಿರ್ಮಿಸಿರುವ ಬೇಲೂರು, ಹಳೇಬೀಡು, ದೇವಾಲಯಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದು ದೇಶದ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಅಮರಶಿಲ್ಪಿ ಜಕಣಾಚಾರಿ ಅವರು ನಿರ್ಮಿಸಿರುವ ಕಲ್ಲಿನ ಪ್ರತಿಮೆಗಳ ಮೂರ್ತಿಗಳು ಪ್ರೇಕ್ಷಕರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ. ಈ ಕಲೆ, ವಾಸ್ತುಶಿಲ್ಪ ವೈಭವ ನಮ್ಮ ಮುಂದಿನ ಪೀಳಿಗೆಗೂ ತಿಳಿಸುವಂತಾಗಬೇಕು ಎಂದರು.ಮುಖ್ಯ ಭಾಷಣಕಾರರಾಗಿದ್ದ ವಿನಯ್ ವಿಶ್ವಕರ್ಮ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಅವರ ಕಲೆ, ಶಿಲ್ಪಕಲೆ ಇತಿಹಾಸ ಇಂದಿನ ಪೀಳಿಗೆಗೆ ತಿಳಿದಿಲ್ಲ. ಆದ್ದರಿಂದ ಮುಂದಿನ ಪೀಳಿಗೆಗೂ ಅವರ ಇತಿಹಾಸ ತಿಳಿಯುವಂತೆ ಆಗಲು ಪಠ್ಯಪುಸ್ತಕಗಳಲ್ಲಿ ಅವರ ಜೀವನ ಚರಿತ್ರೆ ಸೇರಿಸಬೇಕು ಎಂದರು.ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಚಂದ್ರು ಮಾತನಾಡಿ, ವಿಶ್ವಕರ್ಮ ಸಮಾಜ ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಬಹಳ ಹಿಂದುಳಿದಿದೆ. ಸಂಘಟನೆಯ ಕೊರತೆಯಿಂದಾಗಿಯೂ ಸಹ ಜನಾಂಗಕ್ಕೆ ರಾಜಕೀಯ ಸ್ಥಾನಮಾನ ದೊರಕುತ್ತಿಲ್ಲ. ಸಮಾಜದ ಬಂಧುಗಳು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಬೇಕು ಎಂದು ಹೇಳಿದರು.ಸಮಾರಂಭದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಸಿದ್ದಾಚಾರ್, ಉಪಾಧ್ಯಕ್ಷ ಶ್ರೀಕಂಠ, ಮುಖಂಡರಾದ ಅನಂತ್, ಬಸವರಾಜು, ಮಲ್ಲೇಶ, ಮಂಜು, ನಾಗಣ್ಣ, ಪಾಪಣ್ಣ, ಶಶಿ, ಪುಟ್ಟಣ್ಣ, ಗುರು, ಬಿಇಒ ಮಹೇಶ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಮೊದಲಾದವರು ಇದ್ದರು.