ಅಂಬಾಗಿಲು ರಾ.ಹೆ. ಮೇಲ್ಸೆತುವೆ ತಕ್ಷಣ ಆರಂಭಿಸಲು ಸ್ಥಳೀಯಕ ಒತ್ತಾಯ

| Published : Dec 15 2024, 02:01 AM IST

ಸಾರಾಂಶ

ಅಂಬಲಪಾಡಿ ಜಂಕ್ಷನ್ ರಾ.ಹೆ. ಕಾಮಗಾರಿ ಬಗ್ಗೆ ಸಮಾಲೋಚನೆ ಸಭೆಯು ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಶನಿವಾರ ಅಂಬಲಪಾಡಿಯ ವಸಂತ ಮಂಟಪದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಅಂಬಲಪಾಡಿ ಜಂಕ್ಷನ್ ರಾ.ಹೆ. ಕಾಮಗಾರಿ ಬಗ್ಗೆ ಸಮಾಲೋಚನೆ ಸಭೆಯು ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಶನಿವಾರ ಅಂಬಲಪಾಡಿಯ ವಸಂತ ಮಂಟಪದಲ್ಲಿ ನಡೆಯಿತು.ಸಭೆಯಲ್ಲಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಮುಂದಿನ 50 - 100 ವರ್ಷಗಳ ಚಿಂತನೆಯನ್ನಿಟ್ಟುಕೊಂಡು ಅಂಬಲಪಾಡಿ ಫ್ಲೈ ಓವರ್ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಈ ಮೂಲಕ ವ್ಯವಸ್ಥಿತವಾಗಿ ಕಾಮಗಾರಿ ಪೂರ್ಣಗೊಳ್ಳಬೇಕು. ಶೀಘ್ರದಲ್ಲಿ ಅಂಬಲಪಾಡಿ ಫ್ಲ್ಯೆ ಓವರ್ ನಿರ್ಮಾಣಗೊಂಡು ಇಲ್ಲಿನ ಜಂಕ್ಷನ್ ಸಮಸ್ಯೆಗೆ ಮುಕ್ತಿ ಸಿಗಬೇಕು ಎಂದರು.ವೇದಿಕೆಯ ಸಂಚಾಲಕ ಭಾಸ್ಕರ ಶೆಟ್ಟಿ ಕಡೆಕಾರು ಮಾತನಾಡಿ, ಕೂಡಲೇ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆದ್ದಾರಿ ಇಲಾಖೆಗೆ ಸೂಚನೆ ನೀಡಬೇಕು. ಯಾವುದೇ ಒತ್ತಡಕ್ಕೆ ಮಣಿದು ಕಾಮಗಾರಿಯನ್ನು ವಿಳಂಭ ಅಥವಾ ಮರುವಿನ್ಯಾಸ ಮಾಡಬಾರದು. ಡಿ.16 ಕ್ಕೆ ಕಾಮಗಾರಿಯನ್ನು ಆರಂಭಿಸಬೇಕು ಎಂದರು.ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕಡೆಕಾರು ಗ್ರಾ.ಪಂ‌.ಅಧ್ಯಕ್ಷ ಜಯಕರ ಶೇರಿಗಾರ್, ಅಂಬಲಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಯೋಗೀಶ್ ಶೆಟ್ಟಿ, ನಗರಸಭೆ ಸದಸ್ಯ ಹರೀಶ್ ಶೆಟ್ಟಿ, ಹೆದ್ದಾರಿ ಇಲಾಖೆಯ ಸಹಾಯಕ ಅಭಿಯಂತರ ಸಾಹು, ರೆಸಿಡೆಂಟ್ ಎಂಜಿನಿಯರ್ ರವಿಕುಮಾರ್ ಸಹಿತ ಅಂಬಲಪಾಡಿಯ ನಾಗರಿಕರು ಉಪಸ್ಥಿತರಿದ್ದರು.23.53 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಡಿ.16 ರಿಂದ ಆರಂಭಗೊಳ್ಳಲಿದೆ. 1.28 ಕಿ.ಮೀ.ಉದ್ದ ಮೇಲ್ಸೇತುವೆ ಇದಾಗಿದೆ. 22 ಮೀಟರ್ ಅಗಲ ಇರಲಿದೆ. 5.5ಮೀ.ಎತ್ತರದಲ್ಲಿ ಮೇಲ್ಸೇತುವೆ ಇರಲಿದೆ. ಕಾರ್ಲ ಕನ್ಸ್ಟ್ರಕ್ಷನ್ ಇದರ ಗುತ್ತಿಗೆ ವಹಿಸಿಕೊಂಡಿದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.