ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂಡಳಿಗೆ ‘ಶ್ರೇಷ್ಠ ಭಜನಾ ಮಂಡಳಿ ಪುರಸ್ಕಾರ’

| Published : Oct 07 2025, 01:03 AM IST

ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂಡಳಿಗೆ ‘ಶ್ರೇಷ್ಠ ಭಜನಾ ಮಂಡಳಿ ಪುರಸ್ಕಾರ’
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 27ನೇ ವರ್ಷದ ಭಜನಾ ಕಮ್ಮಟದಲ್ಲಿ ಉಡುಪಿ ತಾಲೂಕಿನ ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂಡಳಿಯು ತಾಲೂಕಿನ ‘ಶ್ರೇಷ್ಠ ಭಜನಾ ಮಂಡಳಿ ಪುರಸ್ಕಾರ’ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 27ನೇ ವರ್ಷದ ಭಜನಾ ಕಮ್ಮಟದಲ್ಲಿ ಉಡುಪಿ ತಾಲೂಕಿನ ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂಡಳಿಯು ತಾಲೂಕಿನ ‘ಶ್ರೇಷ್ಠ ಭಜನಾ ಮಂಡಳಿ ಪುರಸ್ಕಾರ’ ಪಡೆದುಕೊಂಡಿದೆ.ಈ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆ ಹಾಗೂ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ವಿಠೋಬ ಭಜನಾ ಮಂಡಳಿಗೆ ಈ ಪುರಸ್ಕಾರವನ್ನು ಹಸ್ತಾಂತರಿಸಿದರು.ಈ ಸಂದರ್ಭ ಶ್ರೀ ವಿಠೋಬ ಭಜನಾ ಮಂಡಳಿ ಅಧ್ಯಕ್ಷ ಶಿವದಾಸ್ ಪಿ., ಭಜನಾ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಉಪಾಧ್ಯಕ್ಷ ಎ. ಮುದ್ದಣ್ಣ ಪೂಜಾರಿ, ಮಾಜಿ ಅಧ್ಯಕ್ಷ ಸುಧಾಕರ ಎ., ಪ್ರಧಾನ ಕಾರ್ಯದರ್ಶಿ ರಾಜೇಶ್, ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ವಿನಯ್ ಕುಮಾರ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ರಾಜ್ಯ ಸಂಚಾಲಕ ಜಿ. ಸುಬ್ರಮಣ್ಯ ಪ್ರಸಾದ್, ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್. ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.