ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ನೇತೃತ್ವದಲ್ಲಿ ನಾಲ್ಕು ಅನಾಥಾಶ್ರಮಗಳಿಗೆ ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಅಂಬಲಪಾಡಿ ದೇವಸ್ಥಾನದ ಮುಂಬಾಗದಲ್ಲಿ ಜಯಂತಿ ಅಂಬಲಪಾಡಿಯವರು ದೇವರ ಪ್ರಸಾದ ಹಚ್ಚಿ ಶುಭ ಹಾರೈಸಿದರು.
ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ನೇತೃತ್ವದಲ್ಲಿ ನಾಲ್ಕು ಅನಾಥಾಶ್ರಮಗಳಿಗೆ ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಅಂಬಲಪಾಡಿ ದೇವಸ್ಥಾನದ ಮುಂಬಾಗದಲ್ಲಿ ಜಯಂತಿ ಅಂಬಲಪಾಡಿಯವರು ದೇವರ ಪ್ರಸಾದ ಹಚ್ಚಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಗಣ್ಯರಾದ ಕೃಷ್ಣ ಅಂಬಲಪಾಡಿ ಆಡಂಬರರಹಿತ ಜನಸೇವೆಯೇ ನಿಜಾರ್ಥದಲ್ಲಿ ದೇವರ ಪೂಜೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಶು ಶೆಟ್ಟಿ ಅವರಿಂದ ಕೃಷ್ಣಜನ್ಮಾಷ್ಟಮಿಯ ಆಚರಣೆ ಅರ್ಥಪೂರ್ಣವಾಗಿ ಎಂದರು.
ಉಡುಪಿ ನಗರದಲ್ಲಿ ನಾನಾ ಕಾರಣಗಳಿಂದ ಅಸಹಾಯಕರಾಗಿ ಜೀವಿಸಲು ಅಸಾಧ್ಯವಾದ ನೂರಾರು ಜನರಿಗೆ ಉಡುಪಿ ಸುತ್ತಮುತ್ತಲಿನ ಆಶ್ರಮಗಳು ಆಶ್ರಯ ನೀಡಿದ್ದು, ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಪ್ರಯುಕ್ತ, ಈ ಆಶ್ರಮಗಳಿಗೆ ಅಕ್ಕಿ ನೀಡುತ್ತಿರುವುದಾಗಿ ವಿಶು ಶೆಟ್ಟಿ ಹೇಳಿದರು. ಹಿತೈಷಿಗಳ ನೆರವಿನಿಂದ 3126 ಕೆಜಿ ಅಕ್ಕಿ ಸಂಗ್ರಹ ವಾಗಿದ್ದು, 1,500 ಕೆಜಿ ಅಕ್ಕಿ ಹೊಸಬೆಳಕು ಆಶ್ರಮಕ್ಕೆ, 1,000 ಕೆಜಿ ಸ್ವರ್ಗ ಆಶ್ರಮಕ್ಕೆ, ಉಳಿದ ಅಕ್ಕಿಯನ್ನು ಕಾರುಣ್ಯ, ಮತ್ತು ಸ್ಪಂದನ ಆಶ್ರಮಕ್ಕೆ ನೀಡಲಾಯಿತು. ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದರು.