ಅಂಬೇಡ್ಕರ್‌ ಕಂಚಿನ ಪ್ರತಿಮೆಗೆ ಅದ್ಧೂರಿ ಸ್ವಾಗತ

| Published : Nov 01 2025, 01:45 AM IST

ಸಾರಾಂಶ

ಬೆಂಗಳೂರಿನಿಂದ ಪ್ರತಿಮೆ ಹೊತ್ತ ಲಾರಿ ಮೇಟಿಕೆರೆ ವೃತ್ತಕ್ಕೆ ಆಗಮಿಸಿದಾಗ ಶಾಸಕ ಸಿ.ಎನ್. ಬಾಲಕೃಷ್ಣ, ಮಾಜಿ ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ದಲಿತ ಸಂಘಟನೆಗಳ ಪದಾಧಿಕಾರಿಗಳು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಜೈ ಭೀಮ್ ಘೋಷಣೆಗಳನ್ನು ಕೂಗುತ್ತಾ, ನಾಸಿಕ್ ಡೋಲು ಸದ್ದಿಗೆ ಕುಣಿಯುತ್ತಾ, ಪ್ರತಿಮೆ ಮೆರವಣಿಗೆಯನ್ನು ಪ್ರಾರಂಭಿಸಿದರು. ರಾಜ್ಯ ಹೆದ್ದಾರಿ ೮ರಲ್ಲಿ ಸಾಗಿ, ಶ್ರೀಚೌಡೇಶ್ವರಿ ವೃತ್ತ, ಗ್ರಾಮ ಪಂಚಾಯಿತಿ ರಸ್ತೆ, ಶ್ರೀಕಂಠಯ್ಯ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪ್ರತಿಮೆ ಇರಿಸಿದ ಲಾರಿ ಚನ್ನರಾಯಪಟ್ಟಣದ ಕಡೆಗೆ ಸಾಗಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಷ್ಠಾಪನೆ ಆಗಲಿರುವ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಶುಕ್ರವಾರ ಜಿಲ್ಲೆಯ ಗಡಿ ಕಿರಿಸಾವೆಗೆ ಆಗಮಿಸಿದಾಗ ಜನಪ್ರತಿನಿಧಿಗಳು, ಸಂಘಟನೆಗಳ ಕಾರ್ಯಕರ್ತರು ಹೂವಿನ ಹಾರಗಳನ್ನು ಹಾಕಿ, ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸುವ ಮೂಲಕ ಸ್ವಾಗತಿಸಿದರು.

ಬೆಂಗಳೂರಿನಿಂದ ಪ್ರತಿಮೆ ಹೊತ್ತ ಲಾರಿ ಮಧ್ಯಾಹ್ನ ೧ ಗಂಟೆಗೆ ಮೇಟಿಕೆರೆ ವೃತ್ತಕ್ಕೆ ಆಗಮಿಸಿದಾಗ ಶಾಸಕ ಸಿ.ಎನ್. ಬಾಲಕೃಷ್ಣ, ಮಾಜಿ ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ದಲಿತ ಸಂಘಟನೆಗಳ ಪದಾಧಿಕಾರಿಗಳು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಜೈ ಭೀಮ್ ಘೋಷಣೆಗಳನ್ನು ಕೂಗುತ್ತಾ, ನಾಸಿಕ್ ಡೋಲು ಸದ್ದಿಗೆ ಕುಣಿಯುತ್ತಾ, ಪ್ರತಿಮೆ ಮೆರವಣಿಗೆಯನ್ನು ಪ್ರಾರಂಭಿಸಿದರು. ರಾಜ್ಯ ಹೆದ್ದಾರಿ ೮ರಲ್ಲಿ ಸಾಗಿ, ಶ್ರೀಚೌಡೇಶ್ವರಿ ವೃತ್ತ, ಗ್ರಾಮ ಪಂಚಾಯಿತಿ ರಸ್ತೆ, ಶ್ರೀಕಂಠಯ್ಯ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪ್ರತಿಮೆ ಇರಿಸಿದ ಲಾರಿ ಚನ್ನರಾಯಪಟ್ಟಣದ ಕಡೆಗೆ ಸಾಗಿತು.

ಜೈ ಭೀಮ್ ಘೋಷಣೆಗಳನ್ನು ಕೂಗುತ್ತಾ ನಾಸಿಕ್ ಡೋಲು ಸದ್ದಿಗೆ ಕುಣಿಯುತ್ತಾ, ಪ್ರತಿಮೆ ಮೆರವಣಿಗೆಯನ್ನು ಪ್ರಾರಂಭಿಸಿದರು. ರಾಜ್ಯ ಹೆದ್ದಾರಿ ೮ರಲ್ಲಿ ಸಾಗಿ, ಶ್ರೀಚೌಡೇಶ್ವರಿ ವೃತ್ತ, ಗ್ರಾಮ ಪಂಚಾಯಿತಿ ರಸ್ತೆ, ಶ್ರೀಕಂಠಯ್ಯ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪ್ರತಿಮೆ ಇರಿಸಿದ ಲಾರಿ ಚನ್ನರಾಯಪಟ್ಟಣದ ಕಡೆಗೆ ಸಾಗಿತು.ರಸ್ತೆ ಉದ್ದಕ್ಕೂ ಸಾರ್ವಜನಿಕರು ಹೂವಿನ ಹಾರ ಹಾಕಿ ಡಾ. ಅಂಬೇಡ್ಕರ್‌ ಪ್ರತಿಮೆಗೆ ನಮಿಸಿದರು.

ದಲಿತ ಮುಖಂಡರಾದ ಲಕ್ಷ್ಮಣ್‌ ಬಡಕನಹಳ್ಳಿ, ಕುಮಾರ್‌ ಛಲವಾದಿ, ಸೋಮಶೇಖರ್, ಬೆಳಗೀಹಳ್ಳಿ ಪುಟ್ಟಸ್ವಾಮಿ, ಕಾಂಗ್ರೆಸ್ ಮುಖಂಡ ಅಣತಿ ಆನಂದ್, ಬಿ.ಸಿ. ಕಿರಣ್, ಬ್ಯಾಡರಹಳ್ಳಿ ಯೋಗೇಶ್, ಪುರಸಾಭೆ ಅಧ್ಯಕ್ಷ ಮೋಹನ್ ಕೋಟೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಎನ್. ಮಂಜುನಾಥ್, ದಲಿತ ಸಂಘಟನೆಯ ಮಹಾದೇವ್, ಗೋವಿಂದರಾಜ್, ಮತಿಘಟ್ಟ ರಂಗಸ್ವಾಮಿ, ನಾಗೇಶ್, ಹಿರೀಸಾವೆ ಮಂಜುನಾಥ್ ಮೌರ್ಯ, ಮಧು ಸಾಣೇನಹಳ್ಳಿ, ಹೊಸಹಳ್ಳಿ ಅಣ್ಣಯ್ಯ ಸೇರಿದಂತೆ ಹೋಬಳಿಯ ದಲಿತ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.