ದೇಶಕ್ಕೆ ಅನನ್ಯತೆ ತಂದುಕೊಟ್ಟ ಅಂಬೇಡ್ಕರ್

| Published : Apr 15 2024, 01:18 AM IST / Updated: Apr 15 2024, 01:19 AM IST

ಸಾರಾಂಶ

ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿಕೊಟ್ಟು ಭಾರತಕ್ಕೆ ಅನನ್ಯತೆಯನ್ನು ತಂದುಕೊಟ್ಟ ಮಹಾನ್ ಚೇತನ ಎಂದೆನಿಸಿದ್ದಾರೆ

ಕನ್ನಡಪ್ರಭ ವಾರ್ತೆ ತುಮಕೂರುಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿಕೊಟ್ಟು ಭಾರತಕ್ಕೆ ಅನನ್ಯತೆಯನ್ನು ತಂದುಕೊಟ್ಟ ಮಹಾನ್ ಚೇತನ ಎಂದೆನಿಸಿದ್ದಾರೆ ಎಂದು ನಾಗವಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ವಿ.ಎಸ್. ರಂಗರಾಜು ಹೇಳಿದರು.ಅವರು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಮಾತನಾಡಿ ನ್ಯಾಯ, ನೀತಿ ಧರ್ಮದ ಹಿನ್ನೆಲೆಯಲ್ಲಿ ಅಂಬೇಡ್ಕರ್ ರವರ ವಿಚಾರಧಾರೆಯನ್ನು ನಾವು ಅರಿತುಕೊಳ್ಳಬೇಕೆಂದು ಹೇಳಿದರು.ಹಿರಿಯ ಉಪನ್ಯಾಸಕ ವೈ.ಭೀಮರಾಜ್ ಮಾತನಾಡಿ ಅಂಬೇಡ್ಕರ್ ಅವರು ದೇಶಕ್ಕೆ ಅತ್ಯಂತ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಕಾನೂನು ಪಂಡಿತರು, ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ರಾಜಕೀಯ ಚಿಂತಕರು, ಮಹಾನ್ ಮಾನವತಾವಾದಿ ಅಂಬೇಡ್ಕರ್ ಕೊಡುಗೆಯಿಂದ ಎಲ್ಲಾ ಜನಾಂಗದವರು ನೆಮ್ಮದಿಯಿಂದ ಜೀವನ ಮಾಡುವಂತಾಗಿದೆ ಎಂದರು. ಅವರ ಸ್ಮರಣೆ ಮತ್ತು ತತ್ವ ಸಿದ್ಧಾಂತಗಳನ್ನು ಅನುಸರಿಸುವುದರಿಂದ ಅವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಹೇಳಿದರು.ರಾಜ್ಯಶಾಸ್ತ್ರ ಉಪನ್ಯಾಸಕ ಟಿ.ಜೆ.ಜ್ಯೋತಿಪ್ರಕಾಶ್ ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಅರಿಯ ಬೇಕು, ಸಾಮಾಜಿಕ ನ್ಯಾಯಕ್ಕೆ ಅಂಬೇಡ್ಕರ್ ಕೊಡುಗೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಉಪನ್ಯಾಸಕಿ ರೇಣುಕಮ್ಮ ಬಿ.ಆರ್, ವನಿತ ಎ.ಆರ್, ದ್ವಿ.ದ.ಸ. ಮದನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಶಶಿಕಲಾ ಟಿ. ಪ್ರಾರ್ಥಿಸಿದರು ಉಪನ್ಯಾಸಕ ಎಂ.ಸುರೇಶ್ ಸ್ವಾಗತಿಸಿದರು, ಉಪನ್ಯಾಸಕ ಅಮೀನ್ ಉಲ್ಲಾಖಾನ್ ವಂದಿಸಿದರು.