ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರ! ಎಂದು ಬಿಜೆಪಿ ಹೇಳಿಲ್ಲ, ಹೇಳಿದ್ದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ವತಃ ಹೇಳಿದ್ದರು ಎಂದು ರಾಜ್ಯ ಅಂಬೇಡ್ಕರ್ ವಿಚಾರ ಯಾತ್ರೆ ಉಸ್ತುವಾರಿ ಆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ ಹೇಳಿದರು.ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಬಿಜೆಪಿ ಮಂಡಲ ಆಯೋಜಿಸಿದ್ದ ಅಂಬೇಡ್ಕರ್ ಯಾತ್ರಾ ಕಾರ್ಯಕ್ರಮದಲ್ಲಿ, ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರವೆಂದು ಬಾಬಾ ಸಾಹೇಬರು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು.೧೯೪೮ ಏ.೨೫ ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಷ್ಟ್ರೀಯ ಸಮ್ಮೇಳನದಲ್ಲಿ ಹೇಳಿದ್ದರು. ಆದರೆ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಬದುಕಿದ್ದಾಗ ಕಡೆಗಣಿಸಿದರು, ಅವಮಾನಿಸಿದರು, ನಿರ್ಲಕ್ಷಿಸಿದರ, ರಾಜಕೀಯವಾಗಿ ಮುಗಿಸಲು ಹೊರಟಿದ್ದರು. ಅಂಬೇಡ್ಕರ್ ಕಾಲವಾದ ನಂತರ ಲಜ್ಜೆಗೇಡಿ ಕಾಂಗ್ರೆಸ್ ನಾಯಕರು ಯಾವುದೇ ಸಂಕೋಚ, ಮಾನವಿಲ್ಲದೆ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್‌ಇಪಿ, ಟಿಎಸ್‌ಪಿ ಯೋಜನೆ ೩೯ ಸಾವಿರ ಕೋಟಿಗೂ ಹೆಚ್ಚು ಹಣ ದುರ್ಬಳಕೆ ಮಾಡಿಕೊಂಡು ದಲಿತರನ್ನು ತುಳಿಯಲು ಹೊರಟ ಕಾಂಗ್ರೆಸ್ಸಿಗರು, ಆಗ ಅಂಬೇಡ್ಕರ್ ಬದುಕ್ಕಿದ್ದಾಗ ತುಳಿದರೆ, ಈಗ ದಲಿತರನ್ನು ತುಳಿಯಲು ಹೊರಟಿದ್ದಾರೆ. ಇದನ್ನು ಜನ ಸಾಮಾನ್ಯರಿಗೆ ಅಂಬೇಡ್ಕರ್‌ಗೆ ಅವಮಾನ ಮಾಡಿದ್ದು, ಈಗ ದಲಿತರ ಹಣ ದುರ್ಬಳಕೆ ಮಾಡಿದ್ದು ತಿಳಿಸಿ ಎಂದರು.ಅಂಬೇಡ್ಕರ್‌ರನ್ನು ಸಂವಿಧಾನ ರಚನಾ ಸಮಿತಿ ಚುನಾವಣೆಯಲ್ಲಿ ನೆಹರು ಸೋಲಿಸಿದರು. ಅಂಬೇಡ್ಕರ್ ಬದುಕಿದ್ದಾಗ ಹೆಜ್ಜೆ ಹೆಜ್ಜೆಗೆ ನೋವು ಕೊಟ್ಟರು, ಇದೀಗ ಅಂಬೇಡ್ಕರ್ ಹಾಗೂ ಸಂವಿಧಾನ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಎಂದೂ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಗೌರವ ತೋರಿಲ್ಲ ಎಂದು ಪ್ರತಿಪಾದಿಸಿದರು.ಮೈಸೂರು ಮಾಜಿ ಮಹಾಪೌರ ಶಿವಕುಮಾರ್ ಮಾತನಾಡಿ, ಸಚಿವ ಎಚ್.ಸಿ.ಮಹದೇವಪ್ಪ ಸಂವಿಧಾನ ಪೀಠಿಕೆ ಓದಿಸುತ್ತಿದ್ದಾರೆ ಸಂತೋಷ. ಆದರೆ ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿಗೆ ೩೯ ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದೀರಾ? ವಾಲ್ಮೀಕಿ ನಿಗಮದ ೧೮೦ ಕೋಟಿ ಭ್ರಷ್ಟಾಚಾರ ನಡೆದಿದೆ ಈ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಹಿರಿಮನೆ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಂವಿಧಾನವನ್ನು ೭೭ ಬಾರಿ ತಿದ್ದು ಪಡಿ ಮಾಡಿದ್ದೀರಾ ಅದು ಸ್ವಾರ್ಥಕ್ಕೆ, ಸಂವಿದಾನಕ್ಕೆ ಆತಂವಿಲ್ಲ, ಅತಂಕ ಇರೋದು ಕಾಂಗ್ರೆಸ್ಸಿಗೆ ಎಂದರು. ದೇಶ ಸುರಕ್ಷಿತವಾಗಿದೆ, ಸಂವಿಧಾನವೂ ಸುಭದ್ರವಾಗಿದೆ, ಪ್ರಧಾನಿ ನಾಯಕತ್ವದಲ್ಲಿ ದಲಿತರು ಸುಡುವ ಮನೆಗೆ ಸೇರದಿರಿ, ಒಂದು ವೇಳೆ ಸೇರಿದರೆ ಸುಟ್ಟ ಕರಕಲಾಗುವಿರಿ ಎಚ್ಚರ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ ಇದು ಜನರಿಗೆ ತಿಳಿ ಹೇಳುವ ಕೆಲಸ ಆಗಬೇಕಿದೆ ಎಂದರು.ವಿಚಾರ ಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ನೂರೊಂದು ಶೆಟ್ಟಿ, ಕೇಂದ್ರ ಪರಿಹಾರ ಮಂಡಳಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಮುತ್ತಿಗೆ ಮೂರ್ತಿ, ಹೊನ್ನೂರು ಮಹದೇವಸ್ವಾಮಿ, ಮಾಂಬಳ್ಳಿ ರಾಮಣ್ಣ, ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ತಾಪಂ ಮಾಜಿ ಸದಸ್ಯ ಮಹದೇವಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೇರಿದಂತೆ ನೂರಾರು ಮಂದಿ ಇದ್ದರು.
ದಲಿತರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮೋಸ:ಎಸ್‌ಸಿ, ಎಸ್‌ಟಿ ಯೋಜನೆಗಳ ಅನುದಾನ ಬೇರೆ ಉದ್ದೇಶಕ್ಕೆ ಬಳಸಿ ದಲಿತರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ, ಅಲ್ಲದೆ ವಾಲ್ಮೀಕಿ ಅಭಿವೃದ್ಧಿ ನಿಗಮ ಮುಚ್ಚಿದ್ದೀರಾ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಆರೋಪಿಸಿದರು.ಕಾಂಗ್ರೆಸ್ ಸುಡುವ ಮನೆ ಎಚ್ಚರ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್‌ಸಿ, ಎಸ್‌ಟಿ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಎಸ್‌ಸಿ, ಎಸ್‌ಟಿಗೆ ದ್ರೋಹ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೦ ಕೋಟಿ ಭ್ರಷ್ಟಾಚಾರ ನಡೆದಿದೆ. ಇಲ್ಲಿಯ ಭ್ರಷ್ಠಾಚಾರದ ಹಣ ಜಮಾ ಆಗಿಲ್ಲ ಎಂದರು. ಗ್ಯಾರಂಟಿಗಳ ಹೆಸರಲ್ಲಿ ಜನರಿಗೆ ರಾಜ್ಯ ಸರ್ಕಾರ ಬರೆ ಹಾಕುತ್ತಿದೆ. ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಎಸ್‌ಸಿ, ಎಸ್‌ಟಿ ಅನುದಾನ ಬೇರೆ ಉದ್ದೇಶಕ್ಕೆ ಬಳಸಿಕೊಂಡ ಸರ್ಕಾರ ಕೂಡಲೇ ಎಸ್‌ಸಿ, ಎಸ್‌ಟಿ ಜನರ ಕ್ಷಮೆ ಕೋರಬೇಕು ಎಂದರು.
ಸ್ಥಳೀಯ ಶಾಸಕರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಎಸ್‌ಸಿ ಜನಾಂಗದ ರಸ್ತೆ ಮಾಡಲು ಹೊರಟರೂ ಕ್ರಷರ್‌ಗೆ ಇದು ದಲಿತ ಪ್ರೇಮನಾ?ಬೆಂಡಗಳ್ಳಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆಗೆ ಗ್ರಾಪಂ ಅಧ್ಯಕ್ಷ ಬಿಜೆಪಿಗ ಎಂದು ಬರುವ ಮುಂಚೆ ಉದ್ಘಾಟಿಸಿ ಹೋದ್ರೀ ಇದು ದಲಿತ ಪ್ರೀತಿನಾ ಎಂದು ಟೀಕಿಸಿದರು. ದೇಶವಾಳಿದ ಕಾಂಗ್ರೆಸ್ ಕೇಂದ್ರ ಸರ್ಕಾರದ ಅವಧಿಯಲ್ಲಿ ೭೭ ಬಾರಿ ಸಂವಿಧಾನಕ್ಕೆ ತಿದ್ದು ಪಡಿ ತಂದ್ರೀ ಅದು ಸ್ವಾರ್ಥಕ್ಕೆ, ಜನರ ಹಿತಕ್ಕಾಗಿ ಅಲ್ಲ, ಸಂವಿಧಾನಕ್ಕೆ ಅಪಾಯ ವಿದೆ ಎಂದು ಹೇಳಲು ಕಾಂಗ್ರೆಸ್ ಗೆ ಯಾವ ನೈತಿಕತೆ ಇದೆ ಎಂದರು.ಮಹದೇವಪ್ಪ, ಬೋಸ್ ವಿರುದ್ಧಮಾಜಿ ಶಾಸಕ ಬಾಲರಾಜು ವಾಗ್ದಾಳಿ
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್ ವಿರುದ್ಧ ಮಾಜಿ ಶಾಸಕ, ಬಿಜೆಪಿ ಮುಖಂಡ ಎಸ್.ಬಾಲರಾಜ್ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರ! ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಸಂಸದ ಸುನೀಲ್ ಬೋಸ್ ಅಂಬೇಡ್ಕರ್ ಜಯಂತಿಯಲ್ಲಿ ಸಂವಿಧಾನ ಕಡೆಗಣಿಸಿದವರಿಂದ ಅಂಬೇಡ್ಕರ್ ಸ್ಮರಿಸುತ್ತಿದ್ದಾರೆಂಬ ಮಾತಿಗೆ ಪ್ರತಿಕ್ರಿಯಿಸಿ ಅಂಬೇಡ್ಕರ್ ಸ್ಮರಿಸುವುದು ಪುಣ್ಯದ ಕೆಲಸವಲ್ಲವೇ ಎಂದು ತಿರುಗೇಟು ನೀಡಿದರುಅಂಬೇಡ್ಕರ್ ಬಗ್ಗೆ ಬಿಜೆಪಿಗೆ ಗೌರವ ಇದ್ದ ಕಾರಣದಿಂದಲೇ ಪಂಚತೀರ್ಥ ಮಾಡಿದ್ದು, ಸಂವಿಧಾನ ದಿನಾಚರಣೆ ಮಾಡಿದ್ದು, ಅಂಬೇಡ್ಕರ್ ಸ್ಮಾರಕ ಮಾಡಿದ್ದು, ಜನ್ಮ ಸ್ಥಳ ಅಭಿವೃದ್ಧಿ ಪಡಿಸಿದ್ದು, ಲಂಡನ್‌ನಲ್ಲಿ ಸ್ಮಾರಕ ಮಾಡಿದ್ದು ಆದರೆ ನೀವು ಅಂಬೇಡ್ಕರ್ ಸಾವಿನ ಬಳಿಕ ನಿಮ್ಮ ಪಕ್ಷದವರು ಸಮಾಧಿಗೆ ಜಾಗ ಕೊಡಲಿಲ್ಲ ಎಂದು ಗುಡುಗಿದರು. ನಿಮ್ಮ ಅಪ್ಪ ಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾರೆ. ದಲಿತ ನಾಯಕ, ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ದಲಿತರ ೩೯ ಸಾವಿರ ಕೋಟಿಗೂ ಹೆಚ್ಚು ಹಣ ಇತರೆ ಬಳಕೆ ಆಗುತ್ತಿದೆಯಲ್ಲ, ಇದು ದಲಿತರಿಗಾದ ಅನ್ಯಾಯ ಅಲ್ವಾ ಎಂದು ಪ್ರಶ್ನಿಸಿದರು.
ಮತಕ್ಕಾಗಿ ಸಂವಿಧಾನ, ಅಂಬೇಡ್ಕರ್ ಹೆಸರೇಳುತ್ತೀರಾ? ದಲಿತರನ್ನು ಮತ್ತಷ್ಟು ಕಷ್ಟಕ್ಕೆ ನೂಕುತ್ತೀರಾ?ನಿಮ್ಮ ದಲಿತ ಪರ ಮುಖವಾಡ ಕಳಚುತ್ತಿದೆ ಅಲ್ಲದೆ ದಲಿತರಿಗೆ ಅನ್ಯಾಯ,ಮೋಸ ಆಗುತ್ತಿದೆ ನೀವಾ ಬಡವರ ಪರ? ಸಂವಿಧಾನದ ಪರ ಎಂದು ಪ್ರಶ್ನೆಗಳ ಸುರಿಮಳೆಗೈದರು.ತಾಕತ್ತು ತೋರಿಸಿ:
ರಾಜ್ಯದಲ್ಲಿ ದಲಿತರ ಹಣ ಖರ್ಚಾಗಬೇಕು, ವಾಪಸ್ ಹೋದರೆ ಕ್ರಿಮಿನಲ್ ಕೇಸು ದಾಖಲು ಎಂದೇಳುವ ಮುಖ್ಯಮಂತ್ರಿಗಳು, ದಲಿತರ ಹಣ ಬಳಕೆಯಾಗದೆ ವಾಪಸ್ ಹೋಗಿದೆ ಕ್ರಿಮಿನಲ್ ಕೇಸು ದಾಖಲಿಸುವಿರಾ? ಅಥವಾ ಕ್ರಮ ತೆಗೆದುಕೊಳ್ಳುವಿರಾ ಎಂದು ಪ್ರಶ್ನಿಸಿದರು.