ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು206 ವರ್ಷಗಳ ಹಿಂದೆ ಪೆಶ್ವೆಯ ಇಪ್ಪತೈದು ಸಾವಿರ ಸೈನಿಕರ ವಿರುದ್ದ ಐನೂರು ಮಂದಿ ದಲಿತ ಮೆಹರ್ ಸೈನಿಕರು ಹೋರಾಡಿದ ಜ. 1 ಅನ್ನು ದಲಿತರು ತಾವು ಅನುಭವಿಸಿದ ಅಸ್ಪೃಶ್ಯತೆಯ ನೋವು, ಸಂಕಟಗಳ ಪ್ರತಿರೋಧ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಕೆ. ನರಸಿಂಹಮೂರ್ತಿ ತಿಳಿಸಿದರು.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಭೀಮ ಕೊರೆಗಾಂವ್ ವಿಜಯೋತ್ಸವ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶದ ಅಲ್ಪಸಂಖ್ಯಾತ, ದೀನ ದಲಿತ, ಹಿಂದೂಳಿದವರು ಭೀಮ ಕೊರೆಗಾಂವ್ ಯುದ್ದದಲ್ಲಿ ಮೆಹರ್ ಸೈನಿಕರ ಹೋರಾಟವನ್ನು ತಮ್ಮ ಸ್ವಾಭಿಮಾನದ, ಸಮಾನತೆಯ ಸಂಕೇತವಾಗಿ ದೇಶಾದ್ಯಂತ ಆಚರಿಸುತ್ತಿದ್ದಾರೆ. ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ಅವರು ಭೀಮ ಕೊರೆಗಾಂವ್ಸ್ಮಾರಕಕ್ಕೆ ಪ್ರತಿವರ್ಷ ಭೇಟಿ ನೀಡುತ್ತಿದ್ದರು. ನಂಜನಗೂಡು ತಾಲೂಕಿನಲ್ಲಿ ಹಲವಾರು ವರ್ಷಗಳಿಂದ 45 ಪಂಚಾಯಿತಿಯ ವ್ಯಾಪ್ತಿಯಲ್ಲಿ ಮನೆ-ಮನೆಗೂ ಆ ಹೋರಾಟದ ನೆನಪನ್ನು ಸ್ಮರಿಸುವಂತೆ ಭೀಮ ಕೊರೆಗಾಂವ್ ವಿಜಯೋತ್ಸವ ಯಾತ್ರೆಯನ್ನು ಸಂಘಟಿಸುವ ಕಾರ್ಯ ನಡೆಸುತ್ತಿದ್ದಾರೆ. ದಲಿತ, ರೈತ ಸಂಘಟನೆಗಳ ಮಾನವೀಯ ಕಾಳಜಿಗೆ ನಮನ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.ನಗರಸಭೆ ಆಯುಕ್ತ ವಿಜಯ್ ಮಾತನಾಡಿ, ಜ. 1 ನಮಗೆ ಹೊಸ ವರ್ಷದ ಸಡಗರ, ಸಂಭ್ರಮದ ದಿನವಲ್ಲ. ಐನೂರು ಮಂದಿ ಮೆಹರ್ ಸೈನಿಕರು ಪೆಶ್ವೆಯ ಬೃಹತ್ ಸೈನ್ಯದ ವಿರುದ್ದ ಅಸ್ಪೃಶ್ಯತೆಯನ್ನು ಮೆಟ್ಟಿ ನಿಂತು ನಡೆಸಿದ ಹೋರಾಟವನ್ನು ನೆನಪು ಮಾಡುವ ದಿನ. ನೂರಾರು ನನ್ನ ದಲಿತ ಬಂಧುಗಳು ಆ ಸ್ವಾಭಿಮಾನದ ಹೋರಾಟದಲ್ಲಿ ತಮ್ಮ ಪ್ರಾಣ ಅರ್ಪಿಸಿದ್ದಾರೆ ಎಂದು ಹೇಳಿದರು.2012 ರಲ್ಲಿ ನಾನು ಯಳಂದೂರಿನ ಪುರಸಭೆ ಮುಖ್ಯಾಧಿಕಾರಿಯಾಗಿದ್ದಾಗ ಪ.ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿದ್ದ ಎಸ್ಇಪಿ - ಟಿಎಸ್.ಪಿ ಯ ಲಕ್ಷಾಂತರ ರೂಪಾಯಿ ಅನುದಾನವನ್ನು ಬಳಸದೆ ಉಳಿಸಲಾಗಿತ್ತು. ಆ ಅನುದಾನದ ಚಿಕ್ಕಾಸನ್ನು ಬಿಡದೆ ದೀನ ದಲಿತರ ಅಭಿವೃದ್ಧಿಗಾಗಿ ಬಳಕೆ ಮಾಡಿದ್ದೆ. ನನ್ನ ಈ ಕಾರ್ಯವನ್ನು ಗುರುತಿಸಿದ ದೆಹಲಿಯ ದಲಿತ ಲಿಬರೇಷನ್ಆರ್ಮಿ ಎಂಬ ಸಂಸ್ಥೆ ನನಗೆ ಅಂಬೇಡ್ಕರ್ರತ್ನ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಿತ್ತು ಎಂದರು.ತಾಲೂಕಿನಲ್ಲಿ ದಲಿತ ಸಂಘಟನೆಗಳು ಪ್ರತಿವರ್ಷ ಭೀಮ ಕೊರೆಗಾಂವ್ವಿಜಯೋತ್ಸವದ ಅಂಗವಾಗಿ ಜನಜಾಗೃತಿ ಸಮಾವೇಶ ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖಂಡ ಅಭಿ ನಾಗಭೂಷಣ್ ನೇತೃತ್ವದಲ್ಲಿ 100 ಮಂದಿಗೆ ಯುವಕರಿಗೆ ಉಚಿತವಾಗಿ ಅಂಬೇಡ್ಕರ್ಟ್ಯಾಟು ಹಾಕಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ಮಾತನಾಡಿದರು. ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ನಗರ್ಲೆ ವಿಜಯ ಕುಮಾರ್, ಮುಖಂಡರಾದ ಮಲ್ಲಹಳ್ಳಿ ನಾರಾಯಣ, ಚುಂಚನಹಳ್ಳಿ ಮಲ್ಲೇಶ್, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಶಂಕರಪುರ ಸುರೇಶ್, ಕಾರ್ಯ ಬಸವಣ್ಣ, ಪುಟ್ಟಸ್ವಾಮಿ, ಹಿಮ್ಮಾವು ರಘು, ಸತೀಶ್ರಾವ್, ಅಭಿ ನಾಗಭೂಷಣ್, ಯಶವಂತ್ಕುಮಾರ್, ಜೈ ಶಂಕರ್, ಪ್ರಶಾಂತ್, ಬಸವರಾಜ್, ಕಳಲೆ ಕುಮಾರ್, ಮರಿಸ್ವಾಮಿ, ಅನಿಲ್ಕುಮಾರ್, ಜಯರಾಮ್ ಇದ್ದರು.